• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಜೋ ಬಿಡೆನ್..!

|

ವಾಷಿಂಗ್ಟನ್, ಆ. 12: ಡೊನಾಲ್ಡ್ ಟ್ರಂಪ್ ಸೋಲಿಸಲು ಪಣತೊಟ್ಟಿರುವ ಬಿಡೆನ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಗೆಲುವಿಗಾಗಿ ಮತ್ತೊಂದು ದಾಳ ಉರುಳಿಸಿದ್ದಾರೆ. ಈ ಬಾರಿ ಬಿಡೆನ್ ಒಂದೇ ಏಟಿಗೆ 2 ಹಕ್ಕಿ ಹೊ ಡೆದಿದ್ದು, ಭಾರತ ಮೂಲದ ಅಮೆರಿಕನ್ ಸೆನೆಟರ್ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.

ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ಹಿನ್ನಡೆಯಾಗಿದೆ. ಈ ಬಾರಿ ಮರು ಆಯ್ಕೆ ಆಗೋದೇ ಡೌಟ್ ಅಂತಾ ಟ್ರಂಪ್ ತಲೆಕೆಡಿಸಿಕೊಂಡಿದ್ದಾರೆ. ಸಮೀಕ್ಷೆಗಳ ಪ್ರಕಾರ ಈಗಾಗಲೇ ಜೋ ಬಿಡೆನ್ ಟ್ರಂಪ್‌ರನ್ನು ಸೋಲಿಸಿ ಆಗಿದೆ. ಈ ನಡುವೆ ಕಮಲಾ ಹ್ಯಾರಿಸ್ ಅವರನ್ನು ಬಿಡೆನ್ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟ್ಸ್ ಪರ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?

ಇದು ಭಾರತ ಮೂಲದ ಅಮೆರಿಕನ್ನರು ಹಾಗೂ ಆಫ್ರಿಕನ್ ಅಮೆರಿಕನ್ನರ ವೋಟ್ ಬ್ಯಾಂಕ್ ಕೊಳ್ಳೆ ಹೊಡೆಯೋದು ಪಕ್ಕಾ. ಕಮಲಾ ಆಯ್ಕೆ ಅಮೆರಿಕ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಗಿದೆ. ಈ ಹಿಂದೆ ಯಾವುದೇ ಕಪ್ಪು ವರ್ಣೀಯ ಮಹಿಳೆಯನ್ನು ಅಮೆರಿಕದಲ್ಲಿ ಇಂತಹ ದೊಡ್ಡ ಸ್ಥಾನಕ್ಕೆ ಆಯ್ಕೆ ಮಾಡಿರಲಿಲ್ಲ.

ಅಮೆರಿಕಾ ಅಧ್ಯಕ್ಷನಾಗಿ ಆಯ್ಕೆಯಾದರೆ ಭಾರತಕ್ಕೆ ಹೆಚ್ಚಿನ ಆದ್ಯತೆ:ಜೋ ಬಿಡೆನ್

ಆದರೆ ಜನಾಂಗೀಯ ತಾರತಮ್ಯ ಕೊನೆಗಾಣಿಸಲು ಬಿಡೆನ್ ಪಣತೊಟ್ಟಂತೆ ಕಾಣುತ್ತಿದೆ. ಎಲ್ಲವನ್ನೂ ಅಳೆದು, ತೂಗಿ ಕಮಲಾ ಹ್ಯಾರಿಸ್‌ರನ್ನು ಬಿಡೆನ್ ಸೆಲೆಕ್ಟ್ ಮಾಡಿದ್ದಾರೆ. ಇದು ಡೆಮಾಕ್ರಟ್ಸ್‌ಗೆ ದೊಡ್ಡ ಲಾಭ ತಂದುಕೊಟ್ಟರೆ, ಮೊದಲೇ ಸೋಲಿನ ಸುಳಿಗೆ ಸಿಲುಕಿರುವ ಟ್ರಂಪ್ ಪಕ್ಷ ರಿಪಬ್ಲಿಕನ್ಸ್ ಮತ್ತಷ್ಟು ಕಂಗಾಲಾಗಿದ್ದಾರೆ.

ಸಮಾಜಸೇವೆಗೆ ಸಿಕ್ಕ ಬಹುದೊಡ್ಡ ಗೆಲುವು..!

ಸಮಾಜಸೇವೆಗೆ ಸಿಕ್ಕ ಬಹುದೊಡ್ಡ ಗೆಲುವು..!

ಕಮಲಾ ಹ್ಯಾರಿಸ್ ವೃತ್ತಿಯಲ್ಲಿ ವಕೀಲೆ. ಆದರೂ ರಾಜಕಾರಣದ ಬಗ್ಗೆ ಅವರಿಗಿರುವ ಜ್ಞಾನ ಹಾಗೂ ಹುಮ್ಮಸ್ಸು ಕಮಲಾ ಅವರನ್ನು ಪಕ್ಷಾತೀತ ಧೋರಣೆಯಿಂದ ನೋಡುವಂತೆ ಮಾಡಿದೆ. ಅಟಾರ್ನಿ ಜನರಲ್‌ ಆಗಿ ಮಹತ್ವದ ಹುದ್ದೆ ನಿಭಾಯಿಸಿರುವ ಕಮಲಾ ದೇವಿ ಹ್ಯಾರಿಸ್ ಸದ್ಯ ಕ್ಯಾಲಿಫೋರ್ನಿಯಾದ ಅಮೆರಿಕನ್ ಸೆನೆಟರ್. ಅಮೆರಿಕದಲ್ಲಿ ಜನಾಂಗೀಯ ಸಂಘರ್ಷ, ಬಡತನದ ವಿರುದ್ಧ ಕಮಲಾ ಹ್ಯಾರಿಸ್ ದಶಕಗಳ ಕಾಲ ಹೋರಾಟ ನಡೆಸಿದವರು. ಇದೇ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವತಃ ಬಿಡೆನ್ ಕೂಡ ಕಮಲಾ ಅವರ ಸಮಾಜಸೇವೆಯನ್ನು ಹಾಡಿ ಹೊಗಳಿದ್ದಾರೆ.

ಭಾರತ ಮೂಲದ ಅಮ್ಮ, ಜಮೈಕಾದ ಅಪ್ಪ

ಭಾರತ ಮೂಲದ ಅಮ್ಮ, ಜಮೈಕಾದ ಅಪ್ಪ

ಕಮಲಾ ದೇವಿ ಹ್ಯಾರಿಸ್ ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಭಾರತೀಯರಿಗೆ ಬಹುದೊಡ್ಡ ಹೆಮ್ಮೆ. ಏಕೆಂದರೆ ಕಮಲಾ ಅವರ ತಾಯಿ ಭಾರತ ಮೂಲದವರು. ಹಾಗೂ ಅವರ ತಂದೆ ಜಮೈಕಾ ಮೂಲದವರು. ಡೊನಾಲ್ಡ್ ಹ್ಯಾರಿಸ್ ಮತ್ತು ಶ್ಯಾಮಲಾ ಗೋಪಾಲನ್ ಅವರ ಪುತ್ರಿಯಾಗಿ 1964ರಲ್ಲಿ ಜನಸಿದ ಕಮಲಾ ಹ್ಯಾರಿಸ್‌ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ. 2017ರಿಂದ ಕಮಲಾ ದೇವಿ ಹ್ಯಾರಿಸ್ ಕ್ಯಾಲಿಫೋರ್ನಿಯಾ ಸೆನೆಟರ್ ಆಗಿ ಅಧಿಕಾರದಲ್ಲಿದ್ದಾರೆ.

ಭಾರತಕ್ಕೂ ಬಹುಮುಖ್ಯ ಈ ಚುನಾವಣೆ..!

ಭಾರತಕ್ಕೂ ಬಹುಮುಖ್ಯ ಈ ಚುನಾವಣೆ..!

ಒಟ್ಟಾರೆ ಹೇಳುವುದಾದರೆ ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರತೀಯರಿಗೆ ಬಹುಮುಖ್ಯವಾಗಿದೆ. ಒಂದುಕಡೆ ಆರ್ಥಿಕ ಕುಸಿತ ಹಾಗೂ ಚೀನಾ ಜೊತೆಗಿನ ಯುದ್ಧ ಸನ್ನಿವೇಶ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಸಂದರ್ಭದಲ್ಲಿ ಭಾರತದ ಪರ ಒಲವಿರುವ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಮೆರಿಕದಲ್ಲಿ ಅಧಿಕಾರ ವಹಿಸಿಕೊಂಡರೆ ಭಾರತದ ಪರ ನಿಲ್ಲುವುದು ಖಚಿತ. ಹೀಗಾಗಿ ಹೈವೋಲ್ಟೇಜ್ ಅಮೆರಿಕನ್ ಎಲೆಕ್ಷನ್‌ನತ್ತ ಕೋಟ್ಯಂತರ ಭಾರತೀಯರ ಚಿತ್ತ ನೆಟ್ಟಿದೆ.

ಭಾರತಕ್ಕೆ ಹೆಚ್ಚಿನ ಆದ್ಯತೆ ಎಂದಿರುವ ಬಿಡೆನ್

ಭಾರತಕ್ಕೆ ಹೆಚ್ಚಿನ ಆದ್ಯತೆ ಎಂದಿರುವ ಬಿಡೆನ್

ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಅವರು ನವೆಂಬರ್ ಚುನಾವಣೆಯಲ್ಲಿ ಗೆದ್ದರೆ ತಮ್ಮ ಆಡಳಿತದಲ್ಲಿ ಭಾರತಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಒಂದು ದಶಕದ ಹಿಂದೆ ಅಮೆರಿಕಾ-ಭಾರತ ನಾಗರಿಕ ಪರಮಾಣು ಒಪ್ಪಂದಕ್ಕೆ ಕಾಂಗ್ರೆಸ್ಸಿನ ಅನುಮೋದನೆ ಪಡೆಯುವಲ್ಲಿ ನನ್ನದೊಂದು ಪಾತ್ರವನ್ನು ವಹಿಸಲು ನನಗೆ ಹೆಮ್ಮೆ ಇದೆ. ಇದು ನಿಜಕ್ಕೂ ದೊಡ್ಡ ವಿಷಯವಾಗಿದೆ ಎಂದು ಜೋ ಬಿಡೆನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು

English summary
Joe Biden named California Senator Kamala Harris for Vice President Candidate. It is an history by selecting the first Black woman to compete on a major party’s presidential ticket in US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X