ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಅಧ್ಯಕ್ಷೀಯ ಚುನಾವಣೆ ಕಣಕ್ಕೆ ಕಮಲಾ ಹ್ಯಾರೀಸ್

|
Google Oneindia Kannada News

ವಾಷಿಂಗ್ಟನ್, ಜನವರಿ 21: ಅಮೆರಿಕದಲ್ಲಿ ಮತ್ತೊಮ್ಮೆ ಆಫ್ರಿಕನ್- ಅಮೆರಿಕನ್ ಕಾಣಲು ಸಿದ್ಧರಾಗಿ ಎಂಬ ಘೋಷಣೆಯೊಂದಿಗೆ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ.

ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಕಮಲ ಹ್ಯಾರೀಸ್ ಸೆನೆಟ್‍ಗೆ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದರು. ಈ ಸ್ಥಾನಕ್ಕೆ ಚುನಾಯಿತರಾದ ಭಾರತೀಯ ಮೂಲದ ಪ್ರಥಮ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲ ಪಾತ್ರರಾಗಿದ್ದಾರೆ.

Kamala Harris jumps into Presidential race

ಎಚ್1 ವೀಸಾ ಹೊಂದಿರುವವರಿಗೆ ಶುಭ ಸುದ್ದಿ ಕೊಟ್ಟ ಟ್ರಂಪ್ಎಚ್1 ವೀಸಾ ಹೊಂದಿರುವವರಿಗೆ ಶುಭ ಸುದ್ದಿ ಕೊಟ್ಟ ಟ್ರಂಪ್

54 ವರ್ಷ ವಯಸ್ಸಿನ ಕಮಲ ಅವರು ಜಮೈಕಾ ಹಾಗೂ ಭಾರತೀಯ ವಲಸಿಗರ ಪುತ್ರಿಯಾಗಿದ್ದು, ಡೆಮೊಕ್ರಾಟಿಕ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಯುವ ಜನಾಂಗ, ಅಲ್ಪ ಸಂಖ್ಯಾತ, ಮಹಿಳಾ ಮತದಾರರನ್ನು ಸೆಳೆಯಲು ಆರಂಭಿಸಿದ್ದಾರೆ. 2020ರ ಚುನಾವಣೆಗಾಗಿ ಪ್ರಚಾರ ಆರಂಭಿಸಿರುವ ಕಮಲಾ, ಅಮೆರಿಕದ ಭವಿಷ್ಯ ನಿಮ್ಮ ಕೈಯಲ್ಲಿದೆ, ಅಮೆರಿಕದ ಮೌಲ್ಯಗಳಿಗಾಗಿ ನಮ್ಮ ದನಿಯೆತ್ತೋಣ ಎನ್ನುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.

ಕ್ಯಾಲಿಫೋರ್ನಿಯಾದದ್ ಓಕ್ಲೆಂಡ್ ನಲ್ಲಿ ಬೆಳೆದ ಕಮಲಾ ಅವರು ಓಕ್ಲೆಂಡ್ ನಲ್ಲಿ ಜನವರಿ 27ರಿಂದ ಪ್ರಚಾರ ಸಭೆ ಆರಂಭಿಸಲಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲೇ ಚುನಾವಣೆ ಪ್ರಚಾರ ಕೈಗೊಳ್ಳುತ್ತಿದ್ದಾರೆ.

English summary
Kamala Harris will contest in the US presidential election race with the potential advantage of being the Democratic candidate who looks most like the party's increasingly diverse base of young, female and minority voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X