ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

H1B Visa: ಟ್ರಂಪ್ ನಿರ್ಧಾರವನ್ನು ರದ್ದುಪಡಿಸಿದ ಯುಎಸ್ ಕೋರ್ಟ್

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 02: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಟೋಬರ್‌ನಲ್ಲಿ ಎಚ್ -1 ಬಿ ವೀಸಾಕ್ಕೆ ವಿಧಿಸಿದ್ದ ನಿರ್ಬಂಧಗಳನ್ನು ಯುಎಸ್ ನ್ಯಾಯಾಲಯ ರದ್ದುಗೊಳಿಸಿದೆ.

ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯ ಯುಎಸ್ ಜಿಲ್ಲಾ ನ್ಯಾಯಾಧೀಶ ಜೆಫ್ರಿ ಎಸ್. ವೈಟ್ ಅವರು ಅಧ್ಯಕ್ಷರು ಎಚ್ -1 ಬಿ ವೀಸಾಗೆ ಸಂಬಂಧಿಸಿದ ಬದಲಾವಣೆಗಳನ್ನು ತರಾತುರಿಯಲ್ಲಿ ಪರಿಚಯಿಸಿದ್ದಾರೆ ಮತ್ತು ಸಾಮಾನ್ಯ ಪಾರದರ್ಶಕತೆ ಕಟ್ಟುಪಾಡುಗಳಿಗೆ ಬದ್ಧರಾಗಿರಲಿಲ್ಲ ಎಂದು ಹೇಳಿದ್ದಾರೆ.

H1B ವೀಸಾ ವಿವಾದ, ಟ್ರಂಪ್ ವಿರುದ್ಧ ಕೋರ್ಟ್ ಮೊರೆH1B ವೀಸಾ ವಿವಾದ, ಟ್ರಂಪ್ ವಿರುದ್ಧ ಕೋರ್ಟ್ ಮೊರೆ

ಇದರೊಂದಿಗೆ ಭಾರತೀಯ ನುರಿತ ಕುಶಲಕರ್ಮಿಗಳು ಅಥವಾ ವೃತ್ತಿಪರರು ಈಗ ಮೊದಲಿನಂತೆ ಅಮೆರಿಕದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

 ಯುಎಸ್ ನ್ಯಾಯಾಲಯ ಹೇಳಿದ್ದೇನು?

ಯುಎಸ್ ನ್ಯಾಯಾಲಯ ಹೇಳಿದ್ದೇನು?

ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಧೀಶ ಜೆಫ್ರಿ ವೈಟ್ ಅವರು ಎಚ್ -1 ಬಿ ವೀಸಾಗಳ ಮೇಲಿನ ಡೊನಾಲ್ಡ್ ಟ್ರಂಪ್ಆದೇಶವನ್ನು ರದ್ದುಪಡಿಸುತ್ತಾ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಾಗ ಪಾರದರ್ಶಕತೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅನುಸರಿಸಲಿಲ್ಲ ಎಂದು ಹೇಳಿದೆ.

 ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ

ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಹಲವು ನಾಗರೀಕರು ಉದ್ಯೋಗ ಕಳೆದುಕೊಂಡಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಸರ್ಕಾರದ ವಾದ ಸಂಪೂರ್ಣವಾಗಿ ತಪ್ಪಾಗಿದೆ. ಕೊವಿಡ್ -19 ಯಾರೊಬ್ಬರ ನಿಯಂತ್ರಣದಲ್ಲಿರದ ಸಾಂಕ್ರಾಮಿಕ ರೋಗ, ಆದರೆ ಮೊದಲೇ ಮುನ್ನೆಚ್ಚಿಕಾ ಕ್ರಮ ಕೈಗೊಳ್ಳುವ ಮೂಲಕ ಈ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಬಹುದಿತ್ತು ಎಂದು ನ್ಯಾಯಮೂರ್ತಿ ಜೆಫರಿ ಅಭಿಪ್ರಾಯಪಟ್ಟಿದ್ದಾರೆ.

 ಡೊನಾಲ್ಡ್ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದೇಕೆ

ಡೊನಾಲ್ಡ್ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದೇಕೆ

ಕೊರೊನಾ ಸೋಂಕಿನಿಂದಾಗಿ ಅಮೆರಿಕದಲ್ಲಿ ಅನೇಕ ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿರುವುದರಿಂದ, ಹೊರದೇಶದವರಿಗೆ ಉದ್ಯೋಗಗಳನ್ನು ನೀಡುವುದನ್ನು ತಡೆಯುವ ಮೂಲಕ ಸ್ಥಳೀಯ ಜನರಿಗೆ ಆ ಉದ್ಯೋಗಗಳನ್ನು ನೀಡಬಹುದು ಎಂದು ಡೊನಾಲ್ಡ್ ಟ್ರಂಪ್ ಆಡಳಿತವು ಈ ನಿರ್ಧಾರ ಕೈಗೊಂಡಿತು. ಈ ಉದ್ದೇಶದಿಂದ ವಿದೇಶಿ ವೃತ್ತಿಪರರನ್ನು ನೇಮಕ ಮಾಡುವ ಕಂಪನಿಗಳಿಗೆ ಅನೇಕ ರೀತಿಯ ನಿರ್ಬಂಧಗಳನ್ನು ವಿಧಿಸಲಾಯಿತು. ಹೊಸ ನಿಯಮಗಳು ಎಷ್ಟು ಕಟ್ಟುನಿಟ್ಟಾಗಿವೆಯೆಂದರೆ, ಮೂರನೇ ಒಂದು ಭಾಗದಷ್ಟು ಅರ್ಜಿದಾರರಿಗೆ ಎಚ್ -1 ಬಿ ವೀಸಾ ಪಡೆಯಲು ಸಾಧ್ಯವಾಗಲಿಲ್ಲ.

 ಹಲವು ಜನರ ಮೇಲೆ ಪರಿಣಾಮ

ಹಲವು ಜನರ ಮೇಲೆ ಪರಿಣಾಮ

ಅಮೆರಿಕದಲ್ಲಿ ಈಗ ಸುಮಾರು 6 ಲಕ್ಷ ಎಚ್ -1 ಬಿ ವೀಸಾ ಹೊಂದಿರುವವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾರತ ಮೂಲದವರು. ಚೀನಾವು ಎರಡನೇ ಸ್ಥಾನದಲ್ಲಿದೆ.

ಹೊರಗಿನಿಂದ ಬರುವ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಪ್ರತಿ ವರ್ಷ ಅಮೆರಿಕ ಸರ್ಕಾರವು 85 ಸಾವಿರ ಎಚ್ -1 ಬಿ (H-1B) ವೀಸಾಗಳನ್ನು ನೀಡುತ್ತದೆ. ಇದು ಅತಿ ಹೆಚ್ಚು ಐಟಿ ವೃತ್ತಿಪರರನ್ನು ಹೊಂದಿದೆ.

English summary
A US judge on Tuesday threw out two rules proposed by the Trump administration to narrow eligibility for H-1B visa aspirants and raise their salaries in an effort to make it tougher for companies, mostly in IT, to use this short-term employment programme to hire foreigner workers instead of local Americans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X