ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್ ಟಾಕ್ ನಿರ್ಬಂಧ: ಟ್ರಂಪ್‌ ಆದೇಶಕ್ಕೆ ಕೋರ್ಟಿಂದ ತಡೆ

|
Google Oneindia Kannada News

ವಾಷಿಂಗ್ಟನ್, ಸೆ.28: ಮೆಸೇಜಿಂಗ್ ಅಪ್ಲಿಕೇಶನ್ ವೀಚಾಟ್‌(WeChat) ಮತ್ತು ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್ (TikTok) ವಿರುದ್ಧ ಅಮೆರಿಕ ಕೈಗೊಂಡ ಕ್ರಮದ ವಿರುದ್ಧ ಆ ಸಂಸ್ಥೆಗಳು ಕಾನೂನು ಸಮರ ನಡೆಸಿವೆ.

ಟಿಕ್‌ಟಾಕ್‌ ಆ್ಯಪ್‌ ಡೌನ್‌ಲೋಡ್‌ ಮೇಲೆ ನಿರ್ಬಂಧ ಹೇರಿ ಟ್ರಂಪ್‌ ಆಡಳಿತ ಹೊರಡಿಸಿರುವ ಆದೇಶಕ್ಕೆ ಪೆನ್ಸಿಲ್ವೇನಿಯಾ ಕೋರ್ಟ್ ಜಡ್ಜ್ ತಾತ್ಕಾಲಿಕ ತಡೆ ನೀಡಿದ್ದಾರೆ.

ಭಾರತ-ಚೀನಾ ವಿಷಯದಲ್ಲಿ ಮತ್ತೆ ಮೂಗು ತೂರಿಸಿದ ಟ್ರಂಪ್..!ಭಾರತ-ಚೀನಾ ವಿಷಯದಲ್ಲಿ ಮತ್ತೆ ಮೂಗು ತೂರಿಸಿದ ಟ್ರಂಪ್..!

ನವೆಂಬರ್‌ 12ರಂದು ಟಿಕ್‌ಟಾಕ್‌ನ ಬಳಕೆಗೆ ಸಂಪೂರ್ಣ ನಿಷೇಧ ಹೇರಲು ಟ್ರಂಪ್ ಆಡಳಿತ ಮುಂದಾಗಿತ್ತು. ಟಿಕ್‌ಟಾಕ್‌ ಹೊಸದಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು ನಿರ್ಬಂಧ ಹೇರಲು ಟ್ರಂಪ್ ಆಡಳಿತ ಆದೇಶಿಸಿತ್ತು.

ಟಿಕ್ ಟಾಕ್ Oracle ಡೀಲ್ ಬಗ್ಗೆ ಎಚ್ಚರಿಕೆ ನೀಡಿದ್ದ ಟ್ರಂಪ್ ಈಗ ಎರಡು ಕಂಪನಿಗಳ ಒಪ್ಪಂದಗೆ ಓಕೆ ಎಂದಿದ್ದಾರೆ ಎಂಬ ಸುದ್ದಿ ಬಂದಿತ್ತು. ಈ ಒಪ್ಪಂದದ ಬಗ್ಗೆ ಮುಂದಿನ ಭಾನುವಾರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಯುಎಸ್ ವಾಣಿಜ್ಯ ಇಲಾಖೆ ಪ್ರತಿಕ್ರಿಯಿಸಿತ್ತು.

ನಾನು ಸುಮ್ಮನೆ ಕುರ್ಚಿ ಬಿಟ್ಟು ಹೋಗಲ್ಲ: ಟ್ರಂಪ್ ವಾರ್ನಿಂಗ್..!ನಾನು ಸುಮ್ಮನೆ ಕುರ್ಚಿ ಬಿಟ್ಟು ಹೋಗಲ್ಲ: ಟ್ರಂಪ್ ವಾರ್ನಿಂಗ್..!

ರಾಷ್ಟ್ರೀಯ ಭದ್ರತಾ ಕಾರಣಗಳಿಂದಾಗಿ ಟ್ರಂಪ್‌ ಆಡಳಿತ ಈ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಮುಂಬರುವ ಸಾರ್ವತ್ರಿಕ ಚುನಾವಣೆಯ ನಿಟ್ಟಿನಲ್ಲಿ ರಾಜಕೀಯ ನಿರ್ಧಾರವಾಗಿದೆ ಎಂದು ಆ್ಯಪ್ ನಿಷೇಧದ ಕುರಿತು ಟಿಕ್‌ಟಾಕ್ ಕೋರ್ಟ್‌ನಲ್ಲಿ ವಾದ ಮಾಡಿತ್ತು. ಟಿಕ್‌ಟಾಕ್‌ ಮನವಿಯ ಮೇರೆಗೆ ಡಿಸ್ಟ್ರಿಕ್ಟ್ ಜಡ್ಜ್ ಕಾರ್ಲ್‌ ನಿಕೋಲ್ಸ್ ಸರ್ಕಾರದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ್ದಾರೆ.

ಚೀನಾ ಆಪ್ ಗಳು ಕಪ್ಪು ಪಟ್ಟಿಗೆ ಸೇರಿಸಲಾಗಿದೆ

ಚೀನಾ ಆಪ್ ಗಳು ಕಪ್ಪು ಪಟ್ಟಿಗೆ ಸೇರಿಸಲಾಗಿದೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದೇಶದ ಭದ್ರತಾ ಹಿತದೃಷ್ಟಿಯ ಹಿನ್ನಲೆಯಲ್ಲಿ ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು, ಟಿಕ್‌ಟಾಕ್ ಬ್ಯಾನ್ ಮಾಡಲಾಗುವುದು ಎಂದು ಬಹಿರಂಗವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಟಿಕ್‌ಟಾಕ್ ಸೇವೆಯನ್ನು ಖರೀದಿಸಲು ಮೈಕ್ರೋಸಾಫ್ಟ್ ಎದುರು ನೋಡುತ್ತಿದೆ ಎಂಬ ಸುದ್ದಿ ಬಂದಿತ್ತು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್‌ ಟಾಕ್ ಕಂಪನಿಯನ್ನು ಸೆಪ್ಟೆಂಬರ್ 15ರೊಳಗೆ ಅಮೆರಿಕಾದ ಕಂಪನಿಗೆ ಮಾರಾಟ ಮಾಡಬೇಕು ಇಲ್ಲವೆ ಬ್ಯಾನ್ ಮಾಡುವುದಾಗಿ ಹೇಳಿದ್ದರು. ನಂತರ ಈ ಗಡುವು ವಿಸ್ತರಿಸಲಾಗಿದೆ.

ಅಮೆರಿಕದಲ್ಲಿ 1500 ಉದ್ಯೋಗಿಗಳಿದ್ದಾರೆ

ಅಮೆರಿಕದಲ್ಲಿ 1500 ಉದ್ಯೋಗಿಗಳಿದ್ದಾರೆ

ಅಮೆರಿಕದಲ್ಲಿ 1500 ಉದ್ಯೋಗಿಗಳಿದ್ದಾರೆ. ಅಮೆರಿಕದಲ್ಲೂ ಟಿಕ್ ಟಾಕ್ ಉತ್ತಮ ಮಾರುಕಟ್ಟೆ ಹೊಂದಿದ್ದು ಪ್ರಸ್ತುತ 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ನಮ್ಮ ಸಂಸ್ಥೆ ಮೇಲೆ ಹೊರೆಸಿರುವ ಆರೋಪಗಳ ವಿರುದ್ಧ ಕಾನೂನು ಹೋರಾಟಕ್ಕಿಳಿಯಲಾಗಿದೆ. ಅಮೆರಿಕದ ವಿವಿಧ ಸಂಸ್ಥೆಗಳು ನಮ್ಮ ಸಂಸ್ಥೆ ಜೊತೆ ಒಪ್ಪಂದ ಹೊಂದಲು ಮುಂದಾಗಿದ್ದರೂ ಯಾವುದೇ ಒಪ್ಪಂದ ಇನ್ನೂ ಸಫಲವಾಗಿಲ್ಲ ಎಂದು ಬೈಟ್ ಡ್ಯಾನ್ಸ್ ಹೇಳಿದೆ. ವಾಲ್‌ಮಾರ್ಟ್‌ ಇಂಕ್‌ ಮತ್ತು ಒರಾಕಲ್‌ ಕಾರ್ಪೊರೇಷನ್‌ ಜೊತೆಗೆ ಪ್ರಾಥಮಿಕ ಒಪ್ಪಂದ ನಡೆದಿದ್ದು, ಷೇರು ಖರೀದಿಗೆ ಪ್ರಕ್ರಿಯೆ ನಡೆಯಲಿದೆ ಎಂದು ಟಿಕ್‌ಟಾಕ್‌ನ ಮೂಲ ಸಂಸ್ಥೆ ಬೈಟ್‌ಡ್ಯಾನ್ಸ್ ತಿಳಿಸಿದೆ.

10 ಕೋಟಿ ಅಮೆರಿಕನ್ನರ ವೈಯಕ್ತಿಕ ಮಾಹಿತಿ

10 ಕೋಟಿ ಅಮೆರಿಕನ್ನರ ವೈಯಕ್ತಿಕ ಮಾಹಿತಿ

2017 ರಲ್ಲಿ ಬೈಟ್ ಡ್ಯಾನ್ಸ್ ಜನಪ್ರಿಯ ಸಂಗೀತ ಅಪ್ಲಿಕೇಶನ್ ಅನ್ನು ಸ್ವಾಧೀನಪಡಿಸಿಕೊಂಡಿತು. ಟಿಕ್ ಟಾಕ್ ಪ್ರಸ್ತುತ ಅಮೆರಿಕಾದಲ್ಲಿ 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಟಿಕ್‌ಟಾಕ್ ಹೊಂದಿರುವ ಅಮೆರಿಕನ್ ಬಳಕೆದಾರರ ಮಾಹಿತಿಯನ್ನು ಯುನೈಟೆಡ್ ಸ್ಟೇಟ್ಸ್‌ಗೆ ವರ್ಗಾಯಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅಮೆರಿಕ ಮೂಲದ ಸಂಸ್ಥೆಗಳು ಯತ್ನಿಸುತ್ತಿವೆ.

ಟಿಕ್‌ಟಾಕ್‌ ಸಂಗ್ರಹಿಸಿದೆ ಎನ್ನಲಾದ ಸುಮಾರು 10 ಕೋಟಿ ಅಮೆರಿಕನ್ನರ ವೈಯಕ್ತಿಕ ಮಾಹಿತಿ ಸುರಕ್ಷತೆಯ ಬಗ್ಗೆ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ.

ಶ್ವೇತಭವನ ಒಪ್ಪಿಗೆ ನೀಡಿರುವ ಸುದ್ದಿ

ಜನರಲ್ ಅಟ್ಲಾಂಟಿಕ್ ಮತ್ತು ಸಿಕ್ವೊಯ ಕ್ಯಾಪಿಟಲ್ ಸೇರಿದಂತೆ ಈಗಾಗಲೇ ಬೈಟ್‌ಡ್ಯಾನ್ಸ್‌ನಲ್ಲಿ ಪಾಲು ಹೊಂದಿರುವ ಕೆಲವು ಅಮೆರಿಕಾ ಹೂಡಿಕೆದಾರರೊಂದಿಗೆ ಒರಾಕಲ್ ಕೆಲಸ ಮಾಡುತ್ತಿದೆ. ಒರಾಕಲ್ ಗೂ ಮುನ್ನ ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಯ ಒಡೆತನದ ಟಿಕ್‌ಟಾಕ್ ಖರೀದಿಗೆ ಟ್ವಿಟ್ಟರ್, ಮೈಕ್ರೋಸಾಫ್ಟ್ ಸಂಸ್ಥೆಗಳು ಕೂಡಾ ಮುಂದಾಗಿ, ಈ ಬಗ್ಗೆ ಮಾತುಕತೆ ನಡೆಸಿದ್ದವು. ಕೊನೆಗೆ ಒರಾಕಲ್, ವಾಲ್ ಮಾರ್ಟ್ ಹೂಡಿಕೆಗೆ ಶ್ವೇತಭವನ ಒಪ್ಪಿಗೆ ನೀಡಿರುವ ಸುದ್ದಿ ಬಂದಿದೆ. ಆದರೆ, ಅಧಿಕೃತವಾಗಿ ಹೇಳಿಕೆ ಹೊರ ಬಂದಿಲ್ಲ.

English summary
A judge in Pennsylvania on Saturday rejected a request by three TikTok content creators who asked her to temporarily block a government ban on Apple Inc and Alphabet Inc Google app stores offering the short-video sharing app for download set to take effect on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X