• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಂಪು ಗ್ರಹಕ್ಕೆ ಗಗನಯಾತ್ರಿಕರ ರವಾನೆಗೆ ನೆರವಾಗಲಿದೆ 'ಇನ್‌ಸೈಟ್'

|

ವಾಷಿಂಗ್ಟನ್, ನವೆಂಬರ್ 27: ಬಾಹ್ಯಾಕಾಶದ ಹೆದ್ದಾರಿಯಲ್ಲಿ ಏಳು ತಿಂಗಳ ಕಾಲ ಪಯಣಿಸಿದ ನಾಸಾದ 'ಇನ್‌ ಸೈಟ್' ಮಿಷಿನ್ ಅಂಗಾರಕನ ಮೇಲೆ ಇಳಿದಿದೆ.

ಕೆಂಪು ಗ್ರಹದ ನೆಲವನ್ನು ಸ್ಪರ್ಶಿಸುತ್ತಿದ್ದಂತೆಯೇ ತಾನು ಜೀವಂತವಾಗಿರುವುದಲ್ಲದೆ ಕ್ಷೇಮವಾಗಿ ತಲುಪಿದ್ದೇನೆ ಎಂದು ತವರೂರು ನಾಸಾಕ್ಕೆ ಅಧಿಕೃತವಾಗಿ 'ಬೀಪ್' ಸಂದೇಶ ಕಳುಹಿಸಿದೆ. ಮಾತ್ರವಲ್ಲ, ಅಲ್ಲಿಗೆ ಕಾಲಿಟ್ಟ ಮೊದಲ ಗಳಿಗೆಯಲ್ಲಿಯೇ ಕಾರ್ಯಪ್ರವೃತ್ತನಾಗಿ ಮಂಗಳದ ಮೇಲ್ಮೈನ ಚಿತ್ರ ಕ್ಲಿಕ್ಕಿಸಿ ರವಾನಿಸಿದೆ.

ವಿಜ್ಞಾನ ಲೋಕದಲ್ಲಿ ಮಹತ್ತರ ಸಾಧನೆ: ಮಂಗಳ ಗ್ರಹಕ್ಕೆ ಕಾಲಿಟ್ಟ ನಾಸಾದ ರೋಬೋಟ್

ಇನ್‌ಸೈಟ್ ರೋಬೋಟ್ ಮಂಗಳದಲ್ಲಿ ಇಳಿದಿದ್ದು ಖಚಿತವಾಗುತ್ತಿದ್ದಂತೆಯೇ ನಾಸಾದ ಯೋಜನಾ ನಿಯಂತ್ರಣ ಕೇಂದ್ರ ಜೆಟ್ ಪ್ರೊಪುಲ್ಷನ್ ಲ್ಯಾಬೊರೇಟರಿಯಲ್ಲಿ ಸಂಭ್ರಮ ಮನೆಮಾಡಿತು. ಈ ಪ್ರಕ್ರಿಯೆಯನ್ನು ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನ ನಸ್ದಾಕ್ ಸ್ಟಾಕ್ ಮಾರ್ಕೆಟ್ ಟವರ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.

ಮಾನವರನ್ನು ಕಳುಹಿಸಲು ಸಹಕಾರಿ

ಮಾನವನ ಇತಿಹಾಸದಲ್ಲಿಯೇ ಎಂಟನೆಯ ಬಾರಿಗೆ ಇಂದು ನಾವು ಮಂಗಳ ಗ್ರಹಕ್ಕೆ ಯಶಸ್ವಿಯಾಗಿ ಇಳಿದಿದ್ದೇವೆ ಎಂದು ನಾಸಾ ಆಡಳಿತಗಾರ ಜಿಮ್ ಬ್ರಿಡೆಂಸ್ಟೈನ್ ಹೇಳಿದ್ದಾರೆ.

ಇನ್‌ಸೈಟ್ ನೌಕೆಯು ಮಂಗಳನ ಆಳಕ್ಕಿಳಿದು ಅದರ ಆಂತರ್ಯದ ಗುಟ್ಟನ್ನು ಅಧ್ಯಯನ ಮಾಡಿ ಹೊರಗೆಡವಲಿದೆ. ಜತೆಗೆ ಅಲ್ಲಿನ ವೈಜ್ಞಾನಿಕ ಸನ್ನಿವೇಶಗಳ ಕುರಿತು ಭೋದಿಸಲಿದೆ. ಇದರಿಂದ ಚಂದ್ರ ಮತ್ತು ಬಳಿಕ ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ನಮ್ಮ ಯೋಜನೆಗೆ ಸಿದ್ಧತೆ ನಡೆಸಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಸೌರ ಮಂಡಲ ಅಧ್ಯಯನ ಮಾಡಲು ಬಂದಿತ್ತು ಈ 'ಸಿಗಾರ್'!

ಬಹಳ ಸುಂದರವಾಗಿದೆ

ನಾಸಾವು ತನ್ನ ಇನ್‌ಸೈಟ್ ರೋಬೋಟ್ ರವಾನಿಸುವ ಸಂದೇಶಗಳನ್ನು ಹಂಚಿಕೊಳ್ಳುವ ಸಲುವಾಗಿಯೇ ನಾಸಾ ಇನ್‌ಸೈಟ್ ಎಂಬ ಟ್ವಿಟ್ಟರ್ ಖಾತೆಯನ್ನು ಆರಂಭಿಸಿದೆ.

ಇನ್‌ಸೈಟ್ ಅಲ್ಲಿನ ಮೊದಲ ಚಿತ್ರವನ್ನು ಕಳುಹಿಸಿದ್ದು, ಈಗ ಜಾಗ ಬಹಳ ಸುಂದರವಾಗಿದೆ ಎಂದು ಹೇಳಿಕೊಂಡಿದೆ. ತನ್ನ ಹೊಸ ಮನೆಯನ್ನು ಶೋಧಿಸಲು ಕಾಯುತ್ತಿರುವುದಾಗಿ ಟ್ವೀಟ್ ಮಾಡಲಾಗಿದೆ.

ನಾಸಾ ಉಪಗ್ರಹದ ಕಣ್ಣಲ್ಲಿ ತಿತ್ಲಿ ಮತ್ತು ಲುಬಾನ್ ಚಂಡಮಾರುತ

ಇನ್ನೂ ಹಲವರಿದ್ದಾರೆ!

ಅಂದಹಾಗೆ ಮಂಗಳನ ಅಂಗಳದಲ್ಲಿ ಇನ್‌ಸೈಟ್ ಒಂಟಿಯಲ್ಲ. ಆತನಿಗಿಂತಲೂ ಮುನ್ನ ಅಲ್ಲಿ ಅಧ್ಯಯನಕ್ಕಾಗಿ ಇನ್ನೂ ಆರು ಮಂದಿ ತೆರಳಿದ್ದಾರೆ. ಅದರಲ್ಲಿ ಕ್ಯೂರಿಯಾಸಿಟಿ ರೋವರ್ ಕೂಡ ಒಂದು.

ವಿಕಿಂಗ್ 1 ಮತ್ತು 2. ಸ್ಪಿರಿಟ್, ಪಾಥ್‌ ಫೈಂಡರ್, ಅಪಾರ್ಚುನಿಟಿ, ಫೀನಿಕ್ಸ್ ಮಂಗಳ ಗ್ರಹದಲ್ಲಿ ಅಧ್ಯಯನ ನಿರತವಾಗಿವೆ. ಇದುವರೆಗೂ ಮಂಗಳದ ಅಧ್ಯಯನಕ್ಕಾಗಿ 18 ನೌಕೆಗಳನ್ನು ರವಾನಿಸಲಾಗಿದೆ. ಅವುಗಳಲ್ಲಿ ಏಳು ಮಾತ್ರ ಯಶಸ್ವಿಯಾಗಿ ಕಾಲಿರಿಸಿವೆ. ಐದು ನೌಕೆಗಳು ಅದರ ಸಮೀಪವೂ ಹೋಗಲಿಲ್ಲ. ನಾಲ್ಕು ಉಪಗ್ರಹಗಳು ಮಂಗಳಕ್ಕೆ ಡಿಕ್ಕಿ ಹೊಡೆದು ಪುಡಿಯಾದವು. ಇನ್ನೆರಡು ಕಾಲಿಟ್ಟ ಬಳಿಕ ವಿಫಲ ಹೊಂದಿದ್ದವು.

ಮಂಗಳನ ಆಳವಾದ ಅಧ್ಯಯನ

1965ರಿಂದಲೂ ನಾವು ಮಂಗಳ ಗ್ರಹವನ್ನು ಅದರ ಕಕ್ಷೆ ಮತ್ತು ಮೇಲ್ಮೈನಿಂದ ಅಧ್ಯಯನ ಮಾಡುತ್ತಿದ್ದೇವೆ. ಅದರ ಹವಾಗುಣ, ವಾತಾವರಣ, ಭೂವಿಜ್ಞಾನ ಮುಂತಾದವುಗಳ ಬಗ್ಗೆ ತಿಳಿದುಕೊಂಡಿದ್ದೇವೆ.

ಈಗ ಅಂತಿಮವಾಗಿ ಮಂಗಳ ಗ್ರಹದ ಒಳಗೆ ಏನಿದೆ ಎಂಬುದನ್ನು ಹುಡುಕಲಿದ್ದೇವೆ. ಈ ಮೂಲಕ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಲಿದ್ದೇವೆ. ಸೌರ ವ್ಯವಸ್ಥೆಯ ಇನ್ನಷ್ಟು ಒಳಭಾಗಕ್ಕೆ ಮಾನವರನ್ನು ಕಳುಹಿಸಲು ನಾಸಾ ಸಿದ್ಧತೆ ನಡೆಸಲಿದೆ ಎಂದು ನಾಸಾದ ವಿಜ್ಞಾನ ಯೋಜನೆ ನಿರ್ದೇಶನಾಲಯದ ಗ್ರಹ ವಿಜ್ಞಾನ ವಿಭಾಗದ ಹಂಗಾಮಿ ನಿರ್ದೇಶಕಿ ಲೋರಿ ಗ್ಲೇಜ್ ತಿಳಿಸಿದ್ದಾರೆ.

ಚಿತ್ರ ತೆಗೆದ ಮಾರ್ಕೊ ಕ್ಯೂಬ್

ಚಿತ್ರ ತೆಗೆದ ಮಾರ್ಕೊ ಕ್ಯೂಬ್

ಇನ್‌ಸೈಟ್‌ ಮಂಗಳವನ್ನು ಪ್ರವೇಶಿಸಿದ ಬಳಿಕ ತಮ್ಮ ಗುರಿ ತಲುಪಿದ ಕೂಡಲೇ ಮಾರ್ಕೊ ಕ್ಯೂಬ್ ಉಪಗ್ರಹಗಳು ಇನ್‌ಸೈಟ್‌ಗೆ ವಿದಾಯ ಹೇಳಿದವು. ಮಧ್ಯಾಹ್ನ 3.10ರ ಸುಮಾರಿಗೆ 4,700 ಮೈಲು ದೂರದಿಂದ ಮಾರ್ಕೋ-ಬಿ ಮಂಗಳ ಗ್ರಹದ ಚಿತ್ರ ತೆಗೆದು ರವಾನಿಸಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
NASA's InSight mission has landed on Mars after seven months of travelling through space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more