ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಾನ್ಸನ್ & ಜಾನ್ಸನ್‌ ಕೋವಿಡ್ ಲಸಿಕೆ ಪಾರ್ಶ್ವವಾಯುಗೆ ಕಾರಣವಾಗಬಹುದು': ಎಫ್‌ಡಿಎ ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಜು.13: ಕೋವಿಡ್ -19 ವೈರಸ್ ವಿರುದ್ಧ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸಲು ಸಹಕಾರಿಯಾಗುವ ಕೋವಿಡ್‌ ಲಸಿಕೆಗಳಲ್ಲಿ ಒಂದು ಜಾನ್ಸನ್ & ಜಾನ್ಸನ್‌. ಆದರೆ "ಈ ಲಸಿಕೆ ಕೆಲವು ಸಂದರ್ಭಗಳಲ್ಲಿ ಅಪರೂಪದ ನರವೈಜ್ಞಾನಿಕ ತೊಡಕುಗಳಿಗೆ ಕಾರಣವಾಗಬಹುದು. ಇದರಿಂದಾಗಿ ಪಾರ್ಶ್ವವಾಯು ಸಂಭವಿಸಬಹುದು," ಎಂದು ಯುಎಸ್‌ನ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಸೋಮವಾರ ಎಚ್ಚರಿಕೆ ನೀಡಿದೆ.

"ಈ ಲಸಿಕೆ ತೆಗೆದುಕೊಂಡರೆ ಎಲ್ಲರಿಗೂ ನರವೈಜ್ಞಾನಿಕ ತೊಡಕು ಉಂಟಾಗುತ್ತದೆ ಎಂದಲ್ಲ. ಆದರೆ ಗುಯಿಲಿನ್-ಬಾರ್ ಸಿಂಡ್ರೋಮ್ ಎಂದು ಕರೆಯಲ್ಪಡುವ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯೆತೆಯು ಹೆಚ್ಚಾಗಿದೆ," ಎಂದು ಎಫ್‌ಡಿಎ ತಿಳಿಸಿದೆ.

'ನಮ್ಮ ಒಂದು ಡೋಸ್‌ ಲಸಿಕೆ ಡೆಲ್ಟಾ ವಿರುದ್ದ ಪರಿಣಾಮಕಾರಿ': ಜಾನ್ಸನ್ & ಜಾನ್ಸನ್‌'ನಮ್ಮ ಒಂದು ಡೋಸ್‌ ಲಸಿಕೆ ಡೆಲ್ಟಾ ವಿರುದ್ದ ಪರಿಣಾಮಕಾರಿ': ಜಾನ್ಸನ್ & ಜಾನ್ಸನ್‌

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಎಫ್‌ಡಿಎ, "ಇಂದು, ಎಫ್‌ಡಿಎ ಜಾನ್ಸನ್ & ಜಾನ್ಸನ್‌ ಕೋವಿಡ್ -19 ಲಸಿಕೆ ಕುರಿತಾದ ಪರಿಷ್ಕರಣೆಗಳನ್ನು ಪ್ರಕಟಿಸುತ್ತಿದೆ. ಈ ಲಸಿಕೆ ಪಡೆದ ನಂತರ ಗುಯಿಲಿನ್-ಬ್ಯಾರೆ ಸಿಂಡ್ರೋಮ್ (ಜಿಬಿಎಸ್) ರೋಗ ಕಾಣಿಸಿಕೊಳ್ಳುವ ಅಪಾಯದ ಮಾಹಿತಿಯನ್ನು ನಾವು ಈ ಪ್ರಕಟಣೆ ಮೂಲಕ ತಿಳಿಸಲು ಇಚ್ಛಿಸುತ್ತೇವೆ," ಎಂದು ಎಫ್‌ಡಿಎ ಹೇಳಿದೆ.

 ಈ ಎರಡು ಲಸಿಕೆ ಪಡೆದವರಲ್ಲಿ ತೊಂದರೆ ಕಾಣಿಸಿಕೊಂಡಿಲ್ಲ

ಈ ಎರಡು ಲಸಿಕೆ ಪಡೆದವರಲ್ಲಿ ತೊಂದರೆ ಕಾಣಿಸಿಕೊಂಡಿಲ್ಲ

ಇನ್ನು "ಜೆ & ಜೆ ಲಸಿಕೆ ತೊಂದರೆ ಉಂಟು ಮಾಡುತ್ತದೆ. ಆದರೆ ಮಾಡರ್ನಾ ಮತ್ತು ಫೈಜರ್‌-ಬಯೋಟೆಕ್ ಕೋವಿಡ್ -19 ಲಸಿಕೆಗಳು ಅಂತಹ ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ," ಎಂದು ಇದೇ ವೇಳೆ ಎಫ್‌ಡಿಎ ಸ್ಪಷ್ಟಪಡಿಸಿದೆ. "ಜಾನ್ಸನ್ ಕೋವಿಡ್‌ ಲಸಿಕೆ ಪಡೆದ 42 ದಿನಗಳಲ್ಲಿ ಗುಯಿಲಿನ್-ಬಾರ್ ಸಿಂಡ್ರೋಮ್‌ನ ಬರುವ ಹೆಚ್ಚಿನ ಅಪಾಯಗಳು ಇದೆ. ಲಭ್ಯವಿರುವ ಪುರಾವೆಗಳು ಜಾನ್ಸೆನ್ ಲಸಿಕೆ ಮತ್ತು ಜಿಬಿಎಸ್ ಅಪಾಯದ ನಡುವಿನ ಸಂಬಂಧವನ್ನು ಸೂಚಿಸುತ್ತವೆ. ಆದರೆ ಇದು ಎಲ್ಲರಿಗೂ ಬರುತ್ತದೆ ಎಂದು ಹೇಳಲಾಗದು. ಮಾಡರ್ನಾ ಮತ್ತು ಫೈಜರ್‌-ಬಯೋಟೆಕ್ ಕೋವಿಡ್‌ ಲಸಿಕೆಗಳಲ್ಲಿ ಈ ರೀತಿಯ ಸಂಕೇತಗಳು ಕಂಡು ಬಂದಿಲ್ಲ," ಎಂದಿದೆ ಎಫ್‌ಡಿಎ.

 ಲಕ್ಷಣ ಕಂಡು ಬಂದರೆ ಚಿಕಿತ್ಸೆ ಪಡೆಯಿರಿ

ಲಕ್ಷಣ ಕಂಡು ಬಂದರೆ ಚಿಕಿತ್ಸೆ ಪಡೆಯಿರಿ

ಇನ್ನು "ಗುಯಿಲಿನ್ ಬಾರ್ ಸಿಂಡ್ರೋಮ್ (ದೇಹದ ರೋಗನಿರೋಧಕ ವ್ಯವಸ್ಥೆಯು ನರ ಕೋಶಗಳನ್ನು ಹಾನಿಗೊಳಿಸುತ್ತದೆ, ಸ್ನಾಯು ದೌರ್ಬಲ್ಯ ಮತ್ತು ಕೆಲವೊಮ್ಮೆ ಪಾರ್ಶ್ವವಾಯುಗೆ ಕಾರಣವಾಗುತ್ತದೆ) ಜಾನ್ಸೆನ್ ಕೋವಿಡ್ -19 ಲಸಿಕೆ ಪಡೆದ ಕೆಲವು ಜನರಲ್ಲಿ ಕಾಣಿಸಿಕೊಂಡಿದೆ. ಲಕ್ಷಣಗಳು ಕಂಡುಬಂದರೆ ಜನರು ವಿಶೇಷವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು," ಎಂದು ಎಫ್‌ಡಿಎ ಮಾಹಿತಿ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ದಾಖಲೆಗಳನ್ನು ಸಲ್ಲಿಕೆ ಮಾಡಿದ ಭಾರತ್ ಬಯೋಟೆಕ್ವಿಶ್ವ ಆರೋಗ್ಯ ಸಂಸ್ಥೆಗೆ ದಾಖಲೆಗಳನ್ನು ಸಲ್ಲಿಕೆ ಮಾಡಿದ ಭಾರತ್ ಬಯೋಟೆಕ್

 ಗುಯಿಲಿನ್ ಬಾರ್ ಸಿಂಡ್ರೋಮ್ ಲಕ್ಷಣ

ಗುಯಿಲಿನ್ ಬಾರ್ ಸಿಂಡ್ರೋಮ್ ಲಕ್ಷಣ

ಈಗಾಗಲೇ ಎಫ್‌ಡಿಎ ಗುಯಿಲಿನ್ ಬಾರ್ ಸಿಂಡ್ರೋಮ್ ಲಕ್ಷಣಗಳು ಕಂಡು ಬಂದರೆ ಚಿಕಿತ್ಸೆ ಪಡೆಯಲು ಹೇಳಿದೆ. ಕಾಲುಗಳಲ್ಲಿ ದೌರ್ಬಲ್ಯ ಅಥವಾ ಜುಮ್ಮೆನಿಸುವಿಕೆ, ನಡೆಯುವಾಗ ತೊಂದರೆ ಉಂಟಾಗುವುದು, ಮಾತನಾಡಲು ಕಷ್ಟವಾಗುವುದು, ಅಗಿಯುವುದು ಅಥವಾ ನುಂಗಲು ತೊಂದರೆ ಉಂಟಾಗುವುದು, ಎಲ್ಲವೂ ಡಬಲ್‌ ಆಗಿ ಕಾಣುವುದು, ಜೀರ್ಣ ಅಥವಾ ಮಲ ಸಮಸ್ಯೆ ಕಾಣಿಸಿಕೊಳ್ಳುವುದು ಈ ರೋಗದ ಇತರೆ ಲಕ್ಷಣಗಳಾಗಿದೆ.

ಒಂದೇ ವ್ಯಕ್ತಿಗೆ ಎರಡು ಭಿನ್ನ ಕೊರೊನಾ ಲಸಿಕೆ; ಅಪಾಯಕಾರಿ ಎಂದ WHOಒಂದೇ ವ್ಯಕ್ತಿಗೆ ಎರಡು ಭಿನ್ನ ಕೊರೊನಾ ಲಸಿಕೆ; ಅಪಾಯಕಾರಿ ಎಂದ WHO

 ಕೆಲವರಲ್ಲಿ ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆ

ಕೆಲವರಲ್ಲಿ ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆ

ಕೆಲವು ಸಂದರ್ಭಗಳಲ್ಲಿ ಅಪರೂಪದ ರೀತಿಯ ರಕ್ತ ಹೆಪ್ಪುಗಟ್ಟುವಿಕೆಯ ತೊಡಕು ಉಂಟಾಗಿದೆ. ಈ ಕಾರಣದಿಂದಾಗಿ ಯುಸ್‌ನ ರೋಗ ನಿಯಂತ್ರಣ ಸಂಸ್ಥೆ ಮತ್ತು ಎಫ್‌ಡಿಎ ಈ ವರ್ಷದ ಆರಂಭದಲ್ಲಿ ಜೆ & ಜೆ ಲಸಿಕೆ ಬಳಕೆಯನ್ನು ಕೊಂಚ ಸಮಯ ಸ್ಥಗಿತಗೊಳಿಸಿತ್ತು. ಆದರೆ ಅಪಾಯಗಳು ಕಡಿಮೆ ಎಂದು ದೃಢಪಟ್ಟ ಬಳಿಕ ಎಪ್ರಿಲ್‌ನಲ್ಲಿ ನಿರ್ಬಂಧವನ್ನು ತೆಗೆದುಹಾಕಿದೆ.

(ಒನ್‌ಇಂಡಿಯಾ ಸುದ್ದಿ)

English summary
US Food and Drug Administration (FDA) on Monday issued a warning stating that the Johnson & Johnson Covid vaccine could cause paralysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X