ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಲಸಿಕೆ ಪ್ರಯೋಗ ಮತ್ತೆ ಶುರು, ಜನವರಿಗೆ ಲಭ್ಯ!

|
Google Oneindia Kannada News

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲೇ ಕೊರೊನಾ ಲಸಿಕೆ ಬಗ್ಗೆ ಘೋಷಣೆಗಳು ಕೇಳಿ ಬಂದವು. ಚುನಾವಣಾ ಪ್ರಚಾರದಲ್ಲಿ ಲಸಿಕೆ ಬಗ್ಗೆ ಉಲ್ಲೇಖ ಇದ್ದೇ ಇರುತ್ತಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರತಿಸ್ಪರ್ಧಿ ಜೋ ಬಿಡೆನ್ ಇಬ್ಬರೂ ಲಸಿಕೆ ಸಿಕ್ಕಾಗ ಉಚಿತವಾಗಿ ಹಂಚುವುದಾಗಿ ಘೋಷಿಸಿದ್ದಾರೆ. ಆದರೆ, ಅಮೆರಿಕದ ಲಸಿಕೆ ಪ್ರಯೋಗ ಹಿನ್ನಡೆ ಅನುಭವಿಸಿದ್ದು ಗೊತ್ತಿರಬಹುದು. ಆದರೆ ಈಗ ಲಸಿಕೆಯ ಮೊದಲ ಬ್ಯಾಚ್ ಜನವರಿ 2021ರಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆ ಘೋಷಿಸಿದೆ.

ಪ್ರಯೋಗ ಸಂದರ್ಭದಲ್ಲಿ ಸ್ವಯಂಸೇವಕರಲ್ಲಿ ಅನಾರೋಗ್ಯ ಕಾಣಿಸಿಕೊಂಡ ಕಾರಣ, ಜಾನ್ಸನ್ & ಜಾನ್ಸನ್ ಸಂಸ್ಥೆಯು ಕೊವಿಡ್ 19 ಲಸಿಕೆ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಜಾನ್ಸನ್&ಜಾನ್ಸನ್ ಕೊವಿಡ್ 19 ಲಸಿಕೆ ಪ್ರಯೋಗ ತಾತ್ಕಾಲಿಕ ಸ್ಥಗಿತಜಾನ್ಸನ್&ಜಾನ್ಸನ್ ಕೊವಿಡ್ 19 ಲಸಿಕೆ ಪ್ರಯೋಗ ತಾತ್ಕಾಲಿಕ ಸ್ಥಗಿತ

ನ್ಯೂಜೆರ್ಸಿ ಕಂಪನಿಯ ನ್ಯೂ ಬ್ರುನ್ಸ್‌ವಿಕ್‌ನ ಸ್ಪೋಕ್ಸ್‌ಪರ್ಸನ್ ಜೇಕ್ ಸಾರ್ಗೆಟ್ ಮಾತನಾಡಿ, ಹಲವು ಮಂದಿ ರೋಗಿಗಳಲ್ಲಿ ವಿವಿಧ ರೀತಿಯ ಅನಾರೋಗ್ಯ ಕಂಡು ಬಂದಿತ್ತು, ಹೀಗಾಗಿ ಪ್ರಯೋಗವನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದರು.ಸಾಮಾನ್ಯ ಲಸಿಕೆಗಿಂತ ಮೂಗಿಗೆ ಸಿಂಪಡಿಸುವ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನ ಹೇಳಿದೆ. ಸಾಮಾನ್ಯವಾಗಿ ಮನುಷ್ಯರಿಗೆ ಕೊರೊನಾ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗುತ್ತಿದೆ.

 ಜೆ ಅಂಡ್ ಜೆ ಮೊದಲ ಬ್ಯಾಚ್ ಲಸಿಕೆ ಜನವರಿ 2021ಕ್ಕೆ

ಜೆ ಅಂಡ್ ಜೆ ಮೊದಲ ಬ್ಯಾಚ್ ಲಸಿಕೆ ಜನವರಿ 2021ಕ್ಕೆ

ಲಸಿಕೆ ಉತ್ಪಾದಕರ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ ಅಮೆರಿಕ ಪ್ರತಿಷ್ಠಿತ ಸಂಸ್ಥೆ ಜಾನ್ಸನ್ ಆಂಡ್ ಜಾನ್ಸನ್ 60 ಸಾವಿರ ಜನರ ಮೇಲೆ ಪ್ರಯೋಗ ನಡೆಸಿರುವುದಾಗಿ ಘೋಷಿಸಿತ್ತು. ಈಗ ಜೆ ಅಂಡ್ ಜೆ ಮೊದಲ ಬ್ಯಾಚ್ ಲಸಿಕೆ ಜನವರಿ 2021ರಲ್ಲಿ ಲಭ್ಯವಾಗಲಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಮ್ಮೇಳನದಲ್ಲೂ ಪ್ರಕಟಿಸಲಾಗುವುದು ಎಂದು ಸಂಸ್ಥೆಯ ಸಾರ್ವಜನಿಕ ಆರೋಗ್ಯ ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ರುಕ್ಸಾಂಡ್ರಾ ಡ್ರಾಘಿಯಾ ಅಕ್ಲಿ ಹೇಳಿದ್ದಾರೆ.

 ಮೂರನೇ ಹಂತದ ಪ್ರಯೋಗ

ಮೂರನೇ ಹಂತದ ಪ್ರಯೋಗ

ಸುರಕ್ಷತಾ ಆಯೋಗವು ಇತ್ತೀಚೆಗೆ ಲಸಿಕೆ ಪ್ರಯೋಗ ಸ್ಥಗಿತಗೊಂಡಿದ್ದರ ಬಗ್ಗೆ ತನಿಖೆ ನಡೆಸಿದ್ದು, ಮುಂದಿನ ಪ್ರಯೋಗಕ್ಕೆ ಅನುಮತಿ ನೀದಿದೆ. ಲಸಿಕೆಯಿಂದಲೇ ಸ್ವಯಂಸೇವಕರು ಅನಾರೋಗ್ಯಪೀಡಿತರಾದರು ಎಂಬುದಕ್ಕೆ ಸಾಕ್ಷಿ ಸಿಕ್ಕಿಲ್ಲ ಎಂದಿದ್ದಾರೆ.

ಲಸಿಕೆಯ ಮೊದಲೆರಡು ಪ್ರಯೋಗಳು ಬಹುತೇಕ ಯಶಸ್ವಿಯಾಗಿದ್ದು, ಇದೇ ಕಾರಣಕ್ಕೆ ಮೂರನೇ ಹಂತದ ಪ್ರಯೋಗ ಆದಷ್ಟು ದೃಢವಾಗಿರಬೇಕು ಎಂದು ಉದ್ದೇಶಿಸಲಾಗಿದೆ ಎಂದು ಜೆ ಅಂಡ್ ಜೆ ಹೇಳಿದೆ

 ಅಮೆರಿಕದ ಹೊರಗೂ ಪ್ರಯೋಗಕ್ಕೆ ಅನುಮತಿ

ಅಮೆರಿಕದ ಹೊರಗೂ ಪ್ರಯೋಗಕ್ಕೆ ಅನುಮತಿ

ಅಕ್ಟೋಬರ್ 26 ಹಾಗೂ 27ರಂದು ಲಸಿಕೆಯ ಮುಂದಿನ ಟ್ರಯಲ್ ಆರಂಭವಾಗಲಿದ್ದು, ಅಮೆರಿಕದ ಹೊರಗೂ ಪ್ರಯೋಗಕ್ಕೆ ಆನುಮತಿ ಸಿಕ್ಕಿದೆ. 2020ರ ಅಂತ್ಯಕ್ಕೆ ಅಥವಾ ಜನವರಿ 2021ಕ್ಕೆ ಲಸಿಕೆ ಪ್ರಯೋಗದ ಅಂತಿಮ ಫಲಿತಾಂಶ ಕೈ ಸೇರಲಿದೆ ಎಂದು ಜೆ ಅಂಡ್ ಜೆ ಮುಖ್ಯ ವೈಜ್ಞಾನಿಕ ಅಧಿಕಾರಿ ಪಾಲ್ ಸ್ಟೋಫೆಲ್ಸ್ ಹೇಳಿದ್ದಾರೆ.

Recommended Video

ಕಾಂಗ್ರೆಸ್ ನಲ್ಲಿ ಗೊಂದಲ ! | DK Shivkumar | RR Nagar By Election | Oneindia Kannada
 ಅಮೆರಿಕದಲ್ಲಿ ತಲೆನೋವಾದ ಕೊರೊನಾ ದ್ವಿತೀಯ ಅಲೆ

ಅಮೆರಿಕದಲ್ಲಿ ತಲೆನೋವಾದ ಕೊರೊನಾ ದ್ವಿತೀಯ ಅಲೆ

ಅಕ್ಟೋಬರ್ 23ರಂದು 84,000 ಹಾಗೂ 24ರಂದು 79, 900 ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು, ಅಮೆರಿಕದಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಹೀಗಾಗಿ, ಲಸಿಕೆ ಪ್ರಯೋಗದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯುಎಸ್ಎನಲ್ಲಿ 2,25,000 ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

English summary
US pharmaceutical major Johnson & Johnson (J&J) has claimed that the first batches of its COVID-19 vaccine could be available as soon as in January. Ruxandra Draghia-Akli, the company's head of public health research and development, announced the same in a presentation at the World Health Summit, reports Bloomberg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X