ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾನ್ಸನ್&ಜಾನ್ಸನ್ ಕೊವಿಡ್ 19 ಲಸಿಕೆ ಪ್ರಯೋಗ ತಾತ್ಕಾಲಿಕ ಸ್ಥಗಿತ

|
Google Oneindia Kannada News

ಬ್ಲೂಮ್‌ಬರ್ಗ್, ಅಕ್ಟೋಬರ್ 13:ಜಾನ್ಸನ್ & ಜಾನ್ಸನ್ ಸಂಸ್ಥೆಯು ಕೊವಿಡ್ 19 ಲಸಿಕೆ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಪ್ರಯೋಗ ಸಂದರ್ಭದಲ್ಲಿ ಸ್ವಯಂಸೇವಕರಲ್ಲಿ ಅನಾರೋಗ್ಯ ಕಾಣಿಸಿಕೊಂಡ ಕಾರಣ ಅರ್ಧಕ್ಕೆ ಪ್ರಯೋಗವನ್ನು ನಿಲ್ಲಿಸಲಾಗಿದೆ.

ಮೂಗಿಗೆ ಸಿಂಪಡಿಸುವ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ ಮೂಗಿಗೆ ಸಿಂಪಡಿಸುವ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ

ಈ ಕುರಿತು ನ್ಯೂಜರ್ಸಿ ಕಂಪನಿಯ ನ್ಯೂ ಬ್ರುನ್ಸ್‌ವಿಕ್‌ನ ಸ್ಪೋಕ್ಸ್‌ಪರ್ಸನ್ ಜೇಕ್ ಸಾರ್ಗೆಟ್ ಮಾತನಾಡಿ, ಹಲವು ಮಂದಿ ರೋಗಗಿಗಳಲ್ಲಿ ವಿವಿಧ ರೀತಿಯ ಅನಾರೋಗ್ಯ ಕಂಡು ಬಂದಿತ್ತು,ಹೀಗಾಗಿ ಪ್ರಯೋಗವನ್ನು ನಿಲ್ಲಿಸಲಾಗಿದೆ ಎಂದುತಿಳಿಸಿದ್ದಾರೆ.

Johnson & Johnson Confirms Covid-19 Vaccine Trial Paused On Safety Event

ಕಳೆದ ವಾರವಷ್ಟೇ ಲಸಿಕೆ ಉತ್ಪಾದಕರ ಪಟ್ಟಿಯಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಹೆಸರೂ ಕೂಡ ಇತ್ತು.ಈಗಾಗಲೇ 60 ಸಾವಿರ ಜನರ ಮೇಲೆ ಪ್ರಯೋಗ ನಡೆಸಿದೆ. ಮೊದಲ ಪ್ರಯೋಗದಲ್ಲಿ ಒಂದು ಶಾಟ್ ಲಸಿಕೆಯನ್ನು ಪ್ರಯೋಗಿಸಲಾಗಿತ್ತು.

ರೋಗಿಗಳನ್ನು ಅನಾರೋಗ್ಯಕ್ಕೆ ತುತ್ತಾದ ಕಾರಣ ಆಸ್ಟ್ರಾಜೆನೆಕಾ ಲಸಿಕೆಯನ್ನು ಉತ್ಪಾದನೆ, ಪ್ರಯೋಗವನ್ನು ಕೂಡ ಮೊಟಕುಗೊಳಿಸಲಾಗಿದೆ.ಜಾನ್ಸನ್ ಆಂಡ್ ಜಾನ್ಸನ್ ಲಸಿಕೆ ಮೇಲೆ ಅಮೆರಿಕ ಜನರಿಗೆ ನಂಬಿಕೆ ಇತ್ತು ಆದರೆ ಸಧ್ಯಕ್ಕೆ ಅದು ಹುಸಿಯಾಗಿದೆ.

ಸಾಮಾನ್ಯ ಲಸಿಕೆಗಿಂತ ಮೂಗಿಗೆ ಸಿಂಪಡಿಸುವ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನ ಹೇಳಿದೆ. ಅಂತಿಮ ಹಂತಕ್ಕೆ ತಲುಪಿರುವ ಕೊವಿಡ್ 19 ಲಸಿಕೆಗಳೆಲ್ಲಾ ತೋಳಿಗೆ ಚುಚ್ಚುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಇದೀಗ ಅಭಿವೃದ್ಧಿಪಡಿಸಲಾಗಿರುವ ನಾಸಲ್ ಸ್ಪ್ರೇ ಮತ್ತಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮನುಷ್ಯರಿಗೆ ಕೊರೊನಾ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗುತ್ತಿದೆ. ಅವುಗಳನ್ನು ಸೋಂಕನ್ನು ತಡೆಯುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಇನ್ಹೇಲ್ ಲಸಿಕೆಗಳೊಂದಿಗೆ ಉತ್ತಮ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡಲು ಪ್ರಯತ್ನ ನಡೆಯುತ್ತಿದೆ.

English summary
Johnson & Johnson said its Covid-19 vaccine study has been temporarily halted due to an unexplained illness in a trial participant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X