ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪೀಡಿತರಿಗೆ ಅಮೆರಿಕದ ಕಂಪನಿಗಳಿಂದ ಶುಭ ಸುದ್ದಿ!

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 31: ಕೊರೊನಾವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಜೊತೆಗೆ ಕೊವಿಡ್ 19 ಪೀಡಿತರಿಗೆ ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಭಾರತ ಸೇರಿದಂತೆ ಅನೇಕ ದೇಶಗಳು ತೊಡಗಿಕೊಂಡಿವೆ. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಪರಿಹಾರ ಕಂಡು ಹಿಡಿಯುವ ತುರ್ತು ಪರಿಸ್ಥಿತಿಯಲ್ಲಿರುವ ಅಮೆರಿಕದಿಂದ ಮಹತ್ವದ ಸುದ್ದಿ ಬಂದಿದೆ.

ಅಮೆರಿಕದ ಪ್ರತಿಷ್ಠಿತ ಕಂಪನಿ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯು ಕೊರೊನಾಗೆ ಚುಚ್ಚುಮದ್ದು ಕಂಡು ಹಿಡಿದಿರುವುದಾಗಿ ಘೋಷಿಸಿದೆ. ಮತ್ತೊಂದು ಯುಎಸ್ ಕಂಪನಿ ಅಬಾಟ್ ಲ್ಯಾಬರೋಟರೀಸ್, ತ್ವರಿತವಾಗಿ ಪರೀಕ್ಷೆ ಕಿಟ್ ಸಿದ್ಧ ಎಂದಿದೆ.

ಸರಿ ಸುಮಾರು 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತಿದ್ದು, ಯುಎಸ್ ಸರ್ಕಾರದ ಸಹಯೋಗದೊಂದಿಗೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ವಿಜ್ಞಾನಿಗಳು ತಯಾರಿಸಿರುವ ಚುಚ್ಚುಮದ್ದನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಪ್ರಕ್ರಿಯೆ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಈ ಘೋಷಣೆ ಕೇಳಿ ಬರುತ್ತಿದ್ದಂತೆ ಜಾಗತಿಕವಾಗಿ ಸಂಸ್ಥೆಯ ಷೇರುಗಳು ಏರಿಕೆ ಕಂಡಿವೆ.

Johnson & Johnson announces coronavirus vaccine, Abbott rapid test kit

ಇನ್ನೊಂದೆಡೆ ಅಬಾಟ್ ಕಂಪನಿಯು ಕೇವಲ 5 ನಿಮಿಷದಲ್ಲಿ ಕೊರೊನಾ ಟೆಸ್ಟ್ ಮಾಡಬಲ್ಲ ಕಿಟ್ ರೆಡಿ ಎಂದು ಹೇಳಿದೆ. ಇದರಿಂದ ಸಂಸ್ಥೆಯ ಷೇರುಗಳು ಶೇ 8.7 ರಷ್ಟು ಏರಿಕೆ ಕಂಡಿವೆ. ಕೊವಿಡ್19 ಪಾಸಿಟಿವ್ ಎಂದು 5 ನಿಮಿಷದಲ್ಲಿ, 13 ನಿಮಿಷದೊಳಗೆ ನೆಗಟಿವ್ ಎಂದು ತೋರಿಸಬಲ್ಲ ಕಿಟ್ ಗಳು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಬರ್ಟ್ ಫೋರ್ಡ್ ಹೇಳಿದ್ದಾರೆ.

ಎರಡು ಸಂಸ್ಥೆಗಳು ಲಸಿಕೆ ಹಾಗೂ ಕಿಟ್ ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಲಾಭದಾಯಕವಲ್ಲದ ರೀತಿಯಲ್ಲಿ ವಿಶ್ವದ ಮಾರುಕಟ್ಟೆಗೆ ತರಬೇಕು ಎಂದು ಬಯಸಿವೆ. ಜೆ ಅಂಡ್ ಜೆ ಸಂಸ್ಥೆಯ ಚೇರ್ಮನ್ ಅಲೆಕ್ಸ್ ಗೊರ್ಸ್ಕೈ ಮಾತನಾಡಿ, ಇಂಥ ದುರ್ಬರ ಪರಿಸ್ಥಿತಿಯಲ್ಲಿ ವಿಶ್ವದ ಆರೋಗ್ಯ ಕಾಪಾಡಲು ನಮ್ಮ ಕೊಡುಗೆ ಇದು ಎಂಬ ತಿಳಿದಿದ್ದೇವೆ ಎಂದಿದ್ದಾರೆ.

English summary
Amid the rising coronavirus cases in the world, US company Johnson & Johnson on Monday (March 30) announced a potential vaccine that is expected to hit the market in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X