ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಕಾರಕ ಕೇಸ್ : ಜಾನ್ಸನ್ ಅಂಡ್ ಜಾನ್ಸನ್ ಗೆ ಮತ್ತೆ ಭಾರಿ ದಂಡ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 14: ಮಕ್ಕಳ ವೈದ್ಯಕೀಯ, ಸೌಂದರ್ಯವರ್ಧಕ ಪರಿಕರಗಳ ಉತ್ಪಾದನಾ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಮತ್ತೊಮ್ಮೆ ಹಿನ್ನಡೆಯುಂಟಾಗಿದೆ. ಕ್ಯಾಲಿಫೋರ್ನಿಯಾ ನ್ಯಾಯಾಲಯವು ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ 29 ಮಿಲಿಯನ್ ಯುಎಸ್ ಡಾಲರ್ ದಂಡ ವಿಧಿಸಿದೆ.

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ ಭಾರಿ ದಂಡ! ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ ಭಾರಿ ದಂಡ!

ಜಾನ್ಸನ್ ಅಂಡ ಜಾನ್ಸನ್ ಸಂಸ್ಥೆಯ ಟಾಲ್ಕಂ ಪೌಡರ್, ಬೇಬಿ ಪೌಡರ್ ಬಳಕೆಯಿಂದ ಮೆಸೊಥೆಲಿಯೊಮಾ(ಒಂದು ಬಗೆಯ ಕ್ಯಾನ್ಸರ್) ಉಂಟಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಸಂಸ್ಥೆಯ ಉತ್ಪನ್ನಗಳಲ್ಲಿರುವ ಆಸ್ಬೆಸ್ಟೋಸ್ ಕ್ಯಾನ್ಸರ್ ಕಾರಕ ಎಂದು ಸಾಬೀತಾದ ಹಿನ್ನಲೆಯಲ್ಲಿ ಮಹಿಳೆಗೆ 29 ಮಿಲಿಯನ್ ಡಾಲರ್ ನೀಡುವಂತೆ ಒಕ್ಲೆಂಡ್ ನಲ್ಲಿರುವ ಕ್ಯಾಲಿಫೋರ್ನಿಯಾ ಸುಪೀರಿಯರ್ ಕೋರ್ಟ್ ಆದೇಶಿಸಿದೆ.

ಮಗುವಿಗೆ ಜಾನ್ಸನ್ ಉತ್ಪನ್ನಗಳನ್ನು ಬಳಸೀರಿ ಜೋಕೆ! ಮಗುವಿಗೆ ಜಾನ್ಸನ್ ಉತ್ಪನ್ನಗಳನ್ನು ಬಳಸೀರಿ ಜೋಕೆ!

ಜಾನ್ಸನ್ಸ್ ಅಂಡ್ ಜಾನ್ಸನ್ ಕಂಪನಿಯ ಟಾಲ್ಕಂ ಪೌಡರ್ ಬಳಕೆಯಿಂದ ಅಂಡಾಶಯ ಕ್ಯಾನ್ಸರ್(ovarian cancer) ಉಂಟಾಗಿದೆ ಎಂದು ಆರೋಪಿಸಿ 22 ಮಹಿಳೆಯರು ದೂರು ನೀಡಿದ್ದರು. ದೂರುದಾರ ಪೈಕಿ ಆರು ಮಂದಿ ಈಗ ಮೃತರಾಗಿದ್ದಾರೆ. ಸಂಸ್ಥೆ ವಿರುದ್ಧ ಸುಮಾರು 9 ಸಾವಿರಕ್ಕೂ ಅಧಿಕ ಪ್ರಕರಣಗಳಿತ್ತು. ಈಗ 12 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

Johnson And Johnson Ordered To Pay $29 Million In Talc Cancer Trial

ಈ ಹಿಂದೆ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಅನುಮತಿ ಪಡೆಯದೇ ಮಕ್ಕಳ ಮನೋ ವೈದ್ಯಕೀಯ ಔಷಧಿ(Risperdal)ಗಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಸಂಸ್ಥೆಯ ವಿರುದ್ಧ ಸಾಮಾನ್ಯ ಮತ್ತು ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು.

'ಯುರೋಪ್, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಬಿಕರಿಯಾಗಿರುವ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ 3.2 ಕೋಟಿ ಪ್ಯಾಕ್ ಜನನ ನಿಯಂತ್ರಣ ಸೇವನೆ ಮಾತ್ರೆ Cilest ಅನ್ನು ಸ್ವಯಂಪ್ರೇರಿತವಾಗಿ ಹಿಂದಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
A California jury on Wednesday ordered Johnson & Johnson to pay $29 million to a woman who said that asbestos in the company's talcum-powder-based products, including Johnson's Baby Powder, caused her mesothelioma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X