ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಂದರ್ಭದಲ್ಲಿ ಮಾನಸಿಕ ಖಿನ್ನತೆ ಶಮನಕ್ಕೆ ಬಂದಿದೆ ಸ್ಪ್ರವಾಟೋ ಸ್ಪ್ರೇ

|
Google Oneindia Kannada News

ಬ್ಲೂಂಬರ್ಗ್, ಆಗಸ್ಟ್ 04: ಕೊರೊನಾ ಸಂದರ್ಭದಲ್ಲಿ ಮಾನಸಿಕ ಖಿನ್ನತೆಯನ್ನು ದೂರ ಮಾಡಲು ಜಾನ್ಸನ್ & ಜಾನ್ಸನ್ ಕಂಪನಿಯು ಸ್ಪ್ರವಾಟೋ ಸ್ಪ್ರೇ ಬಿಡುಗಡೆ ಮಾಡಿದೆ.

ದಿನ ಹುಟ್ಟುಹಬ್ಬ, ಪಾರ್ಟಿ ಎಂದು ಮನೆಯಿಂದ ಹೊರಗೇ ಇರುವ ಜನರಿಗೆ ಈ ಕೊರೊನಾ ಬಂದು ಕಾಲು ಕಟ್ಟಿಹಾಕಿದಂತಾಗಿತ್ತು. ಮೊದ ಮೊದಲು ಒಂದೆರೆಡು ವಾರಗಳು ಆರಾಮವಾಗಿ ಕಳೆದರೂ ಬರ ಬರುತ್ತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ.

ಕೊರೊನಾ ಸೋಂಕನ್ನು ಕೊಲ್ಲಲು ಬರಲಿದೆ ಮೌತ್ ಸ್ಪ್ರೇಕೊರೊನಾ ಸೋಂಕನ್ನು ಕೊಲ್ಲಲು ಬರಲಿದೆ ಮೌತ್ ಸ್ಪ್ರೇ

ಅಮೆರಿಕದಲ್ಲಿ ಕೊರೊನಾ ಸಂದರ್ಭದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇಂತಹ ಒಂದು ಸ್ಪ್ರೇಗೆ ಅನುಮತಿ ದೊರೆತಿದೆ.

Johnson and Johnson Nasal Spray Approved For Those At Risk Of Suicide

ಆಹಾರ ಮತ್ತು ಔಷಧ ಆಡಳಿತವು ಈ ಸ್ಪ್ರೇಗೆ ಅನುಮತಿ ನೀಡಿದೆ. ಮಾನಸಿಕ ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆ ಯೋಚನೆ ಅವರ ಬಳಿ ಸುಳಿಯದಂತೆ ಮಾಡುತ್ತದೆ.
17 ಮಿಲಿಯನ್ ಜನರಲ್ಲಿ ಶೇ.11ರಿಂದ 12ರಷ್ಟು ಮಂದಿ ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ.

ಸ್ಪ್ರವಾಟೋ ಸ್ಪ್ರೇಯನ್ನು 2019ರ ಮಾರ್ಚ್‌ನಿಂದ 6 ಸಾವಿರ ಮಂದಿಗೆ ನೀಡಲಾಗಿದೆ. ಇದೀಗ ಪ್ರಯೋಗಗಳನ್ನು ಮುಗಿಸಿ ಮಾರುಕಟ್ಟೆಯತ್ತ ಹೆಜ್ಜೆ ಇಟ್ಟಿದೆ. ಸಾಕಷ್ಟು ಔಷಧಗಳು ಕೆಲಸ ಮಾಡಲು ಒಂದು ವಾರಗಳ ಸಮಯ ಹಿಡಿಯುತ್ತದೆ. ಆದರೆ ಸ್ಪ್ರವಾಟೊ ಶೀಘ್ರದಲ್ಲಿ ಫಲಿತಾಂಶವನ್ನು ನೀಡುತ್ತದೆ.

ಕೊರೊನಾ ಸೋಂಕು ವಿಶ್ವದಾದ್ಯಂತ ಹರಡುವುದಕ್ಕೂ ಮುನ್ನ ಮಾನಸಿಕ ಖಿನ್ನತೆ ಪ್ರಕರಣಗಳು ಕೊಂಚ ಕಡಿಮೆಯಿತ್ತು. ಇದೀಗ ಶೇ.30ರಷ್ಟು ಹೆಚ್ಚಾಗಿದೆ.ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮನೆಯಿಂದ ಹೊರಬರಲಾರದ ಪರಿಸ್ಥಿತಿಯಿಂದ ಮಾನಸಿಕವಾಗಿ ಜನರು ದುರ್ಬಲವಾಗುತ್ತಿದ್ದಾರೆ.

ಈ ಸ್ಪ್ರೇ ನೇರವಾಗಿ ಮೆದುಳು ಪ್ರವೇಶಿಸಿ ಬೇಗ ಫಲಿತಾಂಶವನ್ನು ನೀಡುತ್ತದೆ. ಹೇಗೆ ಔಷಧ ಕೆಲಸ ಮಾಡುತ್ತದೆ. ಹೇಗೆ ಅಷ್ಟು ವೇಗವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಜಾನ್ಸನ್ ಆಂಡ್ ಜಾನ್ಸನ್ ಉಪಾಧ್ಯಕ್ಷ ಮೈಕಲ್ ಕ್ರಾಮರ್ ತಿಳಿಸಿದ್ದಾರೆ.

English summary
Johnson & Johnson's Spravato has been approved as the first antidepressant for actively suicidal people, as doctors are becoming increasingly concerned about Covid-19's effect on the mental health of Americans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X