ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

60,000 ಸ್ವಯಂ ಸೇವಕರ ಮೇಲೆ ಅಂತಿಮ ಹಂತದ ಕೋವಿಡ್ ಲಸಿಕೆ ಪ್ರಯೋಗ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 24: ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆಯು ತನ್ನ ಮೂರನೇ ಹಾಗೂ ಅಂತಿಮ ಹಂತದ ಕೋವಿಡ್ 19 ಲಸಿಕೆಯ ಪ್ರಯೋಗಕ್ಕೆ ಕಾಲಿರಿಸಿದ್ದು, ಮೊದಲ ಎರಡು ಹಂತಗಳಲ್ಲಿನ ಪ್ರಯೋಗಗಳು ಸಕಾರಾತ್ಮಕ ಫಲಿತಾಂಶ ನೀಡಿವೆ ಎಂದು ತಿಳಿಸಿದೆ.

ಅಮೆರಿಕ ಹಾಗೂ ಜಗತ್ತಿನ ವಿವಿಧೆಡೆ 200 ಪ್ರದೇಶಗಳಲ್ಲಿ ಸುಮಾರು 60,000 ಸ್ವಯಂ ಸೇವಕರನ್ನು ಈ ಪ್ರಯೋಗಕ್ಕೆ ನೋಂದಣಿ ಮಾಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಪ್ರಯೋಗಕ್ಕೆ ಜಾನ್ಸನ್ ಆಂಡ್ ಜಾನ್ಸನ್ ಕಂಪೆನಿ ಮತ್ತು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್) ಹಣಕಾಸಿನ ನೆರವು ನೀಡುತ್ತಿದೆ.

ಕೊರೊನಾವೈರಸ್ ಭೀತಿ ನಡುವೆ Anti-Bacterial ಮಾಸ್ಕ್ ಸಿದ್ಧಕೊರೊನಾವೈರಸ್ ಭೀತಿ ನಡುವೆ Anti-Bacterial ಮಾಸ್ಕ್ ಸಿದ್ಧ

ಈ ನಡೆಯೊಂದಿಗೆ ಜಾನ್ಸನ್ ಆಂಡ್ ಜಾನ್ಸನ್ ಕೋವಿಡ್ ಲಸಿಕೆಯ ಅಂತಿಮ ಹಂತದ ಪ್ರಯೋಗಕ್ಕೆ ಇಳಿದ ಜಗತ್ತಿನ ಹತ್ತನೇ ಹಾಗೂ ಅಮೆರಿಕದ ನಾಲ್ಕನೇ ಕಂಪೆನಿ ಎಂದೆನಿಸಿದೆ. ಈ ಲಸಿಕೆಯನ್ನು ಲಾಭದ ಉದ್ದೇಶದಿಂದ ಮಾಡುತ್ತಿಲ್ಲ ಎಂದಿರುವ ಕಂಪೆನಿ, ಲಸಿಕೆ ಪರಿಣಾಮಕಾರಿ ಎನಿಸಿದರೆ 2021ರ ಆರಂಭದಲ್ಲಿ ತುರ್ತು ಅನುಮೋದನೆ ಪಡೆಯಲು ಸಿದ್ಧವಾಗಲಿದೆ ಎಂದು ತಿಳಿಸಿದೆ.

 Johnson And Johnson Begins Phase-3 Of Its Covid-19 Vaccine

ಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನ ಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನ

Recommended Video

ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡ್ಲಿ | Oneindia Kannada

ಕೋವಿಡ್ 19 ಜಗತ್ತಿನಾದ್ಯಂತ ಜನರ ಮೇಲೆ ಪ್ರತಿದಿನವೂ ದುಷ್ಪರಿಣಾಮ ಬೀರುತ್ತಿದೆ. ನಮ್ಮ ಕಂಪೆನಿಯ ವೈಜ್ಞಾನಿಕ ಆವಿಷ್ಕಾರಗಳಿಂದ ಹಾಗೂ ಜಾಗತಿಕ ಮಟ್ಟಕ್ಕೆ ಅದನ್ನು ತಲುಪಿಸುವುದರಿಂದ ಈ ಪಿಡುಗನ್ನು ಅಂತ್ಯಗೊಳಿಸುವುದು ನಮ್ಮ ಗುರಿ ಎಂದು ಕಂಪೆನಿಯ ಸಿಇಒ ಅಲೆಕ್ಸ್ ಗೋರ್ಕ್ಸಿ ತಿಳಿಸಿದ್ದಾರೆ.

English summary
Johnson & Johnson has entered its 3rd phase of Covid-19 vaccine trials and intended to enroll upto 60,000 volunteers across the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X