• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಿಪಬ್ಲಿಕ್ ಪ್ರಾಬಲ್ಯದ ಅರಿಜೋನಾದಲ್ಲೂ ಗೆಲುವು ಸಾಧಿಸಿದ ಜೋ ಬೈಡನ್

|

ವಾಷಿಂಗ್ಟನ್, ನವೆಂಬರ್ 13: ಚುನಾವಣಾ ಸಮರದ ರಾಜ್ಯ ಅರಿಜೋನಾದಲ್ಲಿ ಗೆಲುವು ಸಾಧಿಸುವ ಮೂಲಕ ಚುನಾಯಿತ ಅಧ್ಯಕ್ಷ ಜೋ ಬೈಡನ್ ತಮ್ಮ ಅಧ್ಯಕ್ಷೀಯ ವಿಜಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಇನ್ನೂ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಮುಂದಾಗದೆ ಇರುವುದರಿಂದ ಅಧಿಕಾರ ಹಸ್ತಾಂತರದ ಪ್ರಕ್ರಿಯೆಯು ಇನ್ನೂ ರಾಜಕೀಯ ಗೊಂದಲವಾಗಿ ಉಳಿದಿದೆ.

ಗುರುವಾರ ತಡರಾತ್ರಿ ಅರಿಜೋನಾದ ಫಲಿತಾಂಶವನ್ನು ಪ್ರಮುಖ ಮಾಧ್ಯಮಗಳು ಬಿಂಬಿಸಿವೆ. ಮತ ಎಣಿಕೆ ಶುರುವಾಗಿ ಸುಮಾರು ಒಂದು ವಾರದ ಬಳಿಕ ಈ ಫಲಿತಾಂಶ ದೊರಕಿದೆ ಎಂದು ಎಡಿಸನ್ ರೀಸರ್ಚ್ ಹೇಳಿದೆ. ಸಿಎನ್ಎನ್ ಮತ್ತು ನ್ಯೂಯಾರ್ಕ್ ಟೈಮ್ಸ್ ಕೂಡ ಅರಿಜೋನಾದಲ್ಲಿ ಬೈಡನ್ ಗೆದ್ದಿದ್ದಾರೆ ಎಂದು ತಿಳಿಸಿವೆ. ರಿಪಬ್ಲಿಕನ್ ಪಕ್ಷದ ಸಾಂಪ್ರದಾಯಿಕ ರಾಜ್ಯವಾಗಿರುವ ಇಲ್ಲಿ ಕಳೆದ ಏಳು ದಶಕಗಳಲ್ಲಿ ಗೆಲುವು ಸಾಧಿಸಿದ ಕೇವಲ ಎರಡನೆಯ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಬೈಡನ್ ಪಾತ್ರರಾಗಿದ್ದಾರೆ.

ಟ್ರಂಪ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಬೈಡನ್

ಅರಿಜೋನಾದ ಗೆಲುವಿನ ಮೂಲಕ ಬೈಡನ್ ಅವರ ಎಲೆಕ್ಟೋರಲ್ ಮತಗಳು 290ಕ್ಕೆ ತಲುಪಿದೆ. ಇದು ರಾಜ್ಯವಾರು ಎಲೆಕ್ಟೊರಲ್ ಕಾಲೇಜ್ ಮತಗಳಿಕೆಗೆ ಬೇಕಾದ 270ರ ಸಂಖ್ಯೆಗಿಂತಲೂ ಹೆಚ್ಚಾಗಿದೆ. ಹೀಗಾಗಿ ಬೈಡನ್ ಅವರ ಅಧ್ಯಕ್ಷೀಯ ಸ್ಥಾನದ ಮೆಟ್ಟಿಲು ಮತ್ತಷ್ಟು ಗಟ್ಟಿಯಾಗಿದೆ. ಬೈಡನ್ ಅವರು ಜನಪ್ರಿಯ ಮತಗಳನ್ನು 5.3 ಮಿಲಿಯನ್‌ಗಿಂತಲೂ ಅಧಿಕ ಮತಗಳಿಂದ ಗೆದ್ದಿದ್ದಾರೆ.

ಭಾರತದಲ್ಲಿದ್ದಾರೆ ಜೋ ಬೈಡನ್ ದೂರದ ಸಂಬಂಧಿಕರು

ಇನ್ನು ಕೆಲವೇ ರಾಜ್ಯಗಳಲ್ಲಿ ಮತ ಎಣಿಕೆ ಬಾಕಿ ಇದೆ. ಇತ್ತ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆಧಾರ ರಹಿತ ಆರೋಪ ಮಾಡಿರುವ ಡೊನಾಲ್ಡ್ ಟ್ರಂಪ್, ಸೋಲು ಒಪ್ಪಿಕೊಳ್ಳಲು ಇನ್ನೂ ತಯಾರಿಲ್ಲ.

   ನನಗೆ ಒಳ್ಳೆಯದು ಬಯಸುತ್ತಿದ್ದವರು ಇಂದು ನನ್ನನ್ನು ಬಿಟ್ಟು ಹೋದ್ರು

   English summary
   President-elect Joe Biden wins the Republican stronghold Arizona.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X