ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೈಡನ್ ನೀಡಲಿರುವ ಆದೇಶಗಳಿವು

|
Google Oneindia Kannada News

ವಾಷಿಂಗ್ಟನ್, ಜನವರಿ 20: ಅಮೆರಿಕದ ನೂತನ ಅಧ್ಯಕ್ಷರಾಗಿ ಇನ್ನು ಕೆಲವೇ ಗಂಟೆಗಳಲ್ಲಿ ಜೋ ಬೈಡನ್ ಪದಗ್ರಹಣ ಮಾಡಲಿದ್ದಾರೆ. ಮೊದಲ ದಿನವೇ ಅವರು ಅನೇಕ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದ್ದು, ಡೊನಾಲ್ಡ್ ಟ್ರಂಪ್ ಅಧ್ಯಕ್ಷಾವಧಿಯಲ್ಲಿನ ನೀತಿಗಳಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಪ್ಯಾರಿಸ್ ಹವಾಮಾನ ಒಪ್ಪಂದ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗೆ ನೆರವು ಒದಗಿಸುವ ಆದೇಶಗಳನ್ನು ಪುನರ್ ಸ್ಥಾಪಿಸುವ ಮೂಲಕ ಹೊಸ ಆಡಳಿತಕ್ಕೆ ಚಾಲನೆ ನೀಡಲು ಜೋ ಬೈಡನ್ ಉದ್ದೇಶಿಸಿದ್ದಾರೆ ಎನ್ನಲಾಗಿದೆ. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದಿಂದ ಇಳಿದು, ಅಧ್ಯಕ್ಷ ಸ್ಥಾನಕ್ಕೆ ಏರಿದ ಒಂದು ಗಂಟೆಯೊಳಗೇ ಬೈಡನ್ ಅವರು ಸುಮಾರು 17 ಆದೇಶಗಳಿಗೆ ಸಹಿ ಹಾಕಲಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಟ್ರಂಪ್ ಅವರ ಆದೇಶಗಳನ್ನು ರದ್ದುಗೊಳಿಸುವ ಹಾಗೂ ಬದಲಿಸುವ ಗುರಿ ಹೊಂದಿವೆ.

ಜೋ ಬೈಡನ್ ಅಧ್ಯಕ್ಷೀಯ ಭಾಷಣ ಬರೆದುಕೊಟ್ಟವರು ಯಾರು?ಜೋ ಬೈಡನ್ ಅಧ್ಯಕ್ಷೀಯ ಭಾಷಣ ಬರೆದುಕೊಟ್ಟವರು ಯಾರು?

ವಲಸೆ, ಪರಿಸರ ನೀತಿ, ಕೋವಿಡ್-19 ವಿರುದ್ಧದ ಹೋರಾಟ ಮತ್ತು ಆರ್ಥಿಕತೆಗೆ ಸಂಬಂಧಿಸಿದಂತೆ ಹೊಸ ಆಡಳಿತವು ಹೊಸ ರಹದಾರಿ ಸೃಷ್ಟಿಸುವತ್ತ ಗಮನ ಹರಿಸಿದೆ ಎಂದು ಬೈಡನ್ ಅವರ ಸಮೀಪವರ್ತಿಗಳು ತಿಳಿಸಿದ್ದಾರೆ. ಮುಂದೆ ಓದಿ.

ಮುಸ್ಲಿಂ ನಿರ್ಬಂಧ ತೆರವು

ಮುಸ್ಲಿಂ ನಿರ್ಬಂಧ ತೆರವು

ಆಡಳಿತ ವಹಿಸಿಕೊಂಡ ಮೊದಲ ಹೆಜ್ಜೆಯಾಗಿ, ಡೊನಾಲ್ಡ್ ಟ್ರಂಪ್ ವಿವಿಧ ಮುಸ್ಲಿಂ ಬಾಹುಳ್ಯ ದೇಶಗಳ ಮೇಲಿನ ಪ್ರಯಾಣಿಕರಿಗೆ ವಿಧಿಸಿದ್ದ ನಿರ್ಬಂಧವನ್ನು ಬೈಡನ್ ತೆರವುಗೊಳಿಸಲಿದ್ದಾರೆ. ಜತೆಗೆ ಅಕ್ರಮ ವಲಸಿಗರು ದೇಶಕ್ಕೆ ಬರುವುದನ್ನು ತಡೆಯಲು ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಟ್ರಂಪ್ ನೀಡಿದ್ದ ಆದೇಶವನ್ನು ಕೂಡ ತಡೆಹಿಡಿಯಲಿದ್ದಾರೆ.

ಅಕ್ರಮ ವಲಸಿಗರಿಗೆ ಪೌರತ್ವ

ಅಕ್ರಮ ವಲಸಿಗರಿಗೆ ಪೌರತ್ವ

ವಲಸೆ ನೀತಿಗಳಲ್ಲಿ ಪ್ರಮುಖ ಬದಲಾವಣೆ ಮಾಡುವ ಮಸೂದೆಯನ್ನು ಕಾಂಗ್ರೆಸ್‌ಗೆ ರವಾನಿಸಲು ಬೈಡನ್ ಉದ್ದೇಶಿಸಿದ್ದಾರೆ. ದೇಶದೊಳಗೆ ಅಕ್ರಮವಾಗಿ ನೆಲೆಸಿರುವ, ಸೂಕ್ತ ದಾಖಲೆಗಳಿಲ್ಲದ ಲಕ್ಷಾಂತರ ಮಂದಿಗೆ ಪೌರತ್ವ ಒದಗಿಸಲು ಮುಂದಾಗಿದ್ದಾರೆ. ವಲಸಿಗರಿಗೆ ಪೌರತ್ವ ನೀಡುವ ಬೇಡಿಕೆಯನ್ನು ಟ್ರಂಪ್ ನಿರಾಕರಿಸಿದ್ದರು.

ಬೈಡನ್ ಸಂಪುಟದಲ್ಲಿ 20 ಭಾರತೀಯರು, ಇಬ್ಬರು ಕನ್ನಡಿಗರಿಗೆ ಉನ್ನತ ಸ್ಥಾನಬೈಡನ್ ಸಂಪುಟದಲ್ಲಿ 20 ಭಾರತೀಯರು, ಇಬ್ಬರು ಕನ್ನಡಿಗರಿಗೆ ಉನ್ನತ ಸ್ಥಾನ

ಆರ್ಥಿಕ ಮತ್ತು ಆರೋಗ್ಯ ಸವಾಲು

ಆರ್ಥಿಕ ಮತ್ತು ಆರೋಗ್ಯ ಸವಾಲು

ದೇಶ ಎದುರಿಸುತ್ತಿರುವ ಆರ್ಥಿಕ ಮತ್ತು ಆರೋಗ್ಯದ ಸವಾಲುಗಳನ್ನು ತಳಮಟ್ಟದಿಂದ ಸರಿಪಡಿಸಲು ಬೈಡನ್ ಬಯಸಿದ್ದಾರೆ. ಟ್ರಂಪ್ ಆಡಳಿತವು ಮಾಡಿರುವ ವಿಪರೀತ ಹಾನಿಗಳನ್ನು ಸರಿಪಡಿಸುವುದು ಮಾತ್ರವಲ್ಲ, ದೇಶವನ್ನು ಮುಂಚೂಣಿಗೆ ಕೊಂಡೊಯ್ಯುವುದಕ್ಕೆ ಕೂಡ ಬೈಡನ್ ಚಾಲನೆ ನೀಡಲಿದ್ದಾರೆ ಎಂದು ಬೈಡನ್ ಸಹಾಯಕರು ತಿಳಿಸಿದ್ದಾರೆ.

ಕೋವಿಡ್ ನಿರ್ವಹಣೆಗೆ ಹೊಸ ಕ್ರಮ

ಕೋವಿಡ್ ನಿರ್ವಹಣೆಗೆ ಹೊಸ ಕ್ರಮ

2017ರ ಜನವರಿ 19ರಂದು ಅಧ್ಯಕ್ಷ ಬರಾಕ್ ಒಬಾಮ ಮತ್ತು ಉಪಾಧ್ಯಕ್ಷ ಜೋ ಬೈಡನ್ ಅವರ ಆಡಳಿತ ಅಂತ್ಯಗೊಂಡ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಅನೇಕ ನೀತಿಗಳನ್ನು ಮರಳಿ ತರಲಾಗುವುದು. ನಾಲ್ಕು ವರ್ಷದ ಹಿಂದೆ ಟ್ರಂಪ್ ಅಧಿಕಾರಕ್ಕೆ ಬಂದ ಕೂಡಲೇ ಒಬಾಮ ಆಡಳಿತದ ಅನೇಕ ಆದೇಶಗಳನ್ನು ರದ್ದುಗೊಳಿಸಿದ್ದರು. ಮುಖ್ಯವಾಗಿ ಬೈಡನ್ ಅವರು ಕೋವಿಡ್ ನಿಯಂತ್ರಣಕ್ಕೆ ಟ್ರಂಪ್ ತೆಗೆದುಕೊಂಡಿದ್ದ ಕ್ರಮಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಿದ್ದಾರೆ.

ಬುಧವಾರ ಜೋ ಬೈಡನ್, ಕಮಲಾ ಹ್ಯಾರಿಸ್ ಪ್ರಮಾಣವಚನ: ಸಮಯ, ವೀಕ್ಷಣೆ ವಿವರಬುಧವಾರ ಜೋ ಬೈಡನ್, ಕಮಲಾ ಹ್ಯಾರಿಸ್ ಪ್ರಮಾಣವಚನ: ಸಮಯ, ವೀಕ್ಷಣೆ ವಿವರ

English summary
Joe Biden will sign 17 orders and actions soon after Inauguration including ending Muslim travel ban, WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X