ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಪ್ರಯಾಣ ನಿರ್ಬಂಧ ಮತ್ತೆ ಜಾರಿಗೊಳಿಸಿದ ಜೋ ಬೈಡನ್

|
Google Oneindia Kannada News

ವಾಷಿಂಗ್ಟನ್, ಜನವರಿ 25: ಅಮೆರಿಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಾರದ ಕಾರಣ ಮತ್ತು ರೂಪಾಂತರಿ ವೈರಸ್ ಸೊಂಕು ವ್ಯಾಪಕವಾಗುವ ಭೀತಿಯಿಂದ ಅಧ್ಯಕ್ಷ ಜೋ ಬೈಡನ್ ಅವರು ಬ್ರೆಜಿಲ್, ಐರ್ಲೆಂಡ್, ಬ್ರಿಟನ್ ಸೇರಿದಂತೆ 26 ಯುರೋಪಿಯನ್ ದೇಶಗಳ ಪ್ರವಾಸಿಗರ ಮೇಲಿನ ನಿರ್ಬಂಧವನ್ನು ಮತ್ತೆ ಜಾರಿಗೊಳಿಸಲಿದ್ದಾರೆ.

ಜತೆಗೆ ದಕ್ಷಿಣ ಆಫ್ರಿಕಾವನ್ನು ಕೂಡ ಈ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ತಳಿ ವೈರಸ್ ಬೇರೆಡೆಗೆ ಹರಡುವ ಅಪಾಯವಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿದ್ದ ನಿರ್ಬಂಧ ಕ್ರಮವನ್ನು ತಮ್ಮ ಅಧ್ಯಕ್ಷಾವಧಿಯ ಕೊನೆಯ ದಿನಗಳಲ್ಲಿ ಸಡಿಲಗೊಳಿಸಿದ್ದರು. ಆದರೆ ಆ ಆದೇಶವನ್ನು ಬೈಡನ್ ಬದಲಿಸಲು ಮುಂದಾಗಿದ್ದಾರೆ.

ವರ್ಷದ ನಂತರ 100 ಮಿಲಿಯನ್ ಅಂಚಿನಲ್ಲಿ ಕೊರೊನಾ ಸೋಂಕು; ಮುಂದಿರುವ ಹೊಸ ಸವಾಲೇನು?ವರ್ಷದ ನಂತರ 100 ಮಿಲಿಯನ್ ಅಂಚಿನಲ್ಲಿ ಕೊರೊನಾ ಸೋಂಕು; ಮುಂದಿರುವ ಹೊಸ ಸವಾಲೇನು?

ಅಮೆರಿಕನ್ನೇತರ ಪ್ರವಾಸಿಗರ ಪ್ರವೇಶದ ಮೇಲೆ ವಿಧಿಸಿರುವ ನಿರ್ಬಂಧ ಅಚ್ಚರಿ ಮೂಡಿಸಿಲ್ಲ. ಆದರೆ ದಕ್ಷಿಣ ಆಫ್ರಿಕಾವನ್ನು ಈ ಪಟ್ಟಿಗೆ ಸೇರಿಸಿರುವುದು ಹೊಸ ಸಂಗತಿಯಾಗಿದೆ. ಅಮೆರಿಕದಲ್ಲಿ ಇದುವರೆಗೂ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ರೂಪಾಂತರಿ ವೈರಸ್ ಸೋಂಕು ಪತ್ತೆಯಾಗಿಲ್ಲ. ಆದರೆ ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಮತ್ತೊಂದು ಬಗೆಯ ರೂಪಾಂತರ ವೈರಸ್, ವಿವಿಧ ರಾಜ್ಯಗಳಲ್ಲಿ ಪತ್ತೆಯಾಗಿದೆ.

Joe Biden To Reinstate Covid Travel Rules, Add South Africa To List

ಈಗಿನ ಸ್ಥಿತಿಯಲ್ಲಿ 30 ಕೋಟಿ ಭಾರತೀಯರಿಗೆ ಕೋವಿಡ್ ಲಸಿಕೆಗೆ ಬೇಕು 3 ವರ್ಷ ಈಗಿನ ಸ್ಥಿತಿಯಲ್ಲಿ 30 ಕೋಟಿ ಭಾರತೀಯರಿಗೆ ಕೋವಿಡ್ ಲಸಿಕೆಗೆ ಬೇಕು 3 ವರ್ಷ

ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ನಿರ್ದೇಶಕ ಕೇಂದ್ರದ ಮುಖ್ಯಸ್ಥ ರೊಚೆಲ್ ವಲ್ನೆಸ್ಕಿ ಅವರು ಎಲ್ಲವಿಮಾನಗಳು, ಹಡಗು, ರೈಲು, ಬಸ್‌ಗಳು, ಟ್ಯಾಕ್ಸಿಗಳು ಸೇರಿದಂತೆ ಇಬ್ಬರು ಅಥವಾ ವಯಸ್ಕರು ತೆರಳುವ ಪ್ರಯಾಣಿಕ ವಾಹನಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ಆದೇಶಕ್ಕೆ ಸಹಿ ಹಾಕಲಿದ್ದಾರೆ. ಊಟ ಅಥವಾ ಪಾನೀಯ ಸೇವನೆ ಸಂದರ್ಭದಲ್ಲಿ ಮಾತ್ರ ಮಾಸ್ಕ್ ತೆಗೆಯಲು ಅವಕಾಶ ನೀಡಲಾಗುತ್ತದೆ.

English summary
US President Joe Biden to reinstate Covid-19 travel restrictions on non-US travelers 26 European countries and also South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X