• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೋ ಬೈಡನ್ ಅಧ್ಯಕ್ಷೀಯ ಭಾಷಣ ಬರೆದುಕೊಟ್ಟವರು ಯಾರು?

|

ವಾಷಿಂಗ್ಟನ್, ಜನವರಿ 20: ಜೋ ಬೈಡನ್ ಹಾಗೂ ಭಾರತ ಮೂಲದ ಕಮಲಾ ಹ್ಯಾರಿಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪದವಿಗೆ ಏರಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅವರು ಪ್ರಮಾಣ ವಚನ ಸ್ವೀಕರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜೋ ಬೈಡನ್ ಅವರ ಹೊಸ ಅಧ್ಯಕ್ಷೀಯ ಭಾಷಣವನ್ನು ರಚಿಸಿದವರು ಯಾರು ಎಂಬುದು ಈಗ ಬಹಿರಂಗವಾಗಿದೆ.

ಅಮೆರಿಕದ ಸರ್ಜನ್ ಜನರಲ್ ಹುದ್ದೆಯಿಂದ ಹಿಡಿದು, ಭದ್ರತಾ ಮಂಡಳಿವರೆಗೂ ಭಾರತೀಯ ಮೂಲದವರನ್ನು ಜೋ ಬೈಡನ್ ತಮ್ಮ ಸಂಪುಟದಲ್ಲಿರಿಸಿಕೊಂಡಿದ್ದಾರೆ. ಇದೇ ರೀತಿ ತಮ್ಮ ಮೊದಲ ಅಧ್ಯಕ್ಷೀಯ ಭಾಷಣವನ್ನು ಬರೆಯಲು ಭಾರತ ಮೂಲದ ವಿನಯ್ ರೆಡ್ಡಿ ಅವರಿಗೆ ಅವಕಾಶ ನೀಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಕ್ಯಾಪಿಟಲ್ ಹಿಲ್ಸ್ ನಲ್ಲಿ ನೂತನ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಇದಾದ ಬಳಿಕ ಅಧ್ಯಕ್ಷರು ಭಾಷಣ ಮಾಡಿ ದೇಶದ ಏಕತೆ, ಸಮಗ್ರತೆಗಾಗಿ ಒಗ್ಗೂಡೋಣ ಎಂಬ ಕರೆ ನೀಡಲಿದ್ದಾರೆ.

ಅಮೆರಿಕ ಐಕ್ಯತೆ ಎಂಬ ಥೀಮ್ ಮೇಲೆ ಭಾಷಣ

ಅಮೆರಿಕ ಐಕ್ಯತೆ ಎಂಬ ಥೀಮ್ ಮೇಲೆ ಭಾಷಣ

ಅಮೆರಿಕ ಐಕ್ಯತೆ ಎಂಬ ಥೀಮ್ ಮೇಲೆ ಭಾಷಣ ಸಿದ್ಧಪಡಿಸಲಾಗಿದ್ದು, ಸುಮಾರು 20 ರಿಂದ 30 ನಿಮಿಷ ಭಾಷಣದ ಅವಧಿ ಇರುವ ಸಾಧ್ಯತೆಯಿದೆ.

ಒಹಾಯೋದ ಡೇಟನ್ ನಲ್ಲಿ ಬೆಳೆದಿರುವ ಭಾರತ ಮೂಲದ ವಿನಯ್ ರೆಡ್ಡಿ ಅವರು ಮುಖ್ಯ ಭಾಷಣ ರಚನಾಕಾರರಾಗಿದ್ದಾರೆ. 2013 ರಿಂದ 2017ರ ಅವಧಿಯಲ್ಲಿ ಬೈಡನ್ ಅವರು ಉಪಾಧ್ಯಕ್ಷರಾಗಿದ್ದಲೂ ವಿನಯ್ ಅವರೇ ಭಾಷಣ ಬರೆದುಕೊಟ್ಟಿದ್ದರು, ಚುನಾವಣಾ ಪ್ರಚಾರದ ಸಂದರ್ಭದಲ್ಲೂ ವಿನಯ್ ಅವರ ಭಾಷಣಕ್ಕೆ ತಕ್ಕಬೆಲೆ ಸಿಕ್ಕಿತ್ತು. ಈಗ ಯುಎಸ್ ಅಧ್ಯಕ್ಷರ ಭಾಷಣ ರಚಿಸುವ ಮಹತ್ಕಾರ್ಯ ಸಿಕ್ಕಿದೆ. ಈ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ಅಮೆರಿಕನ್ ಎನಿಸಿಕೊಂಡಿದ್ದಾರೆ.

ತೆಲಂಗಾಣದ ಕರೀಂನಗರ ಜಿಲ್ಲೆಯ ವಿನಯ್

ತೆಲಂಗಾಣದ ಕರೀಂನಗರ ಜಿಲ್ಲೆಯ ವಿನಯ್

ಹೈದರಾಬಾದಿನಿಂದ 200 ಕಿ.ಮೀ ದೂರದಲ್ಲಿರುವ ಕರೀಂ ನಗರ ಜಿಲ್ಲೆಯ ಪೊತಿರೆಡ್ಡಿಪೇಟಾ ಎಂಬ ಗ್ರಾಮದ ಮೂಲದವರಾದ ವಿನಯ್ ರೆಡ್ಡಿ ಛೋಲೆಟ್ಟಿ ಅವರು ಇಂದಿಗೂ ತಮ್ಮ ಊರಿನ ಜೊತೆ ನಂಟು ಇಟ್ಟುಕೊಂಡಿದ್ದಾರೆ.

ವಿನಯ್ ಅವರ ತಂದೆ ನಾರಾಯಣ ರೆಡ್ಡಿ ಅವರು 70ರ ದಶಕದಲ್ಲೇ ಯುಎಸ್ಎಗೆ ವಲಸೆ ಹೋದರು. ಇದೇ ಗ್ರಾಮದ ಶಾಲೆಯಲ್ಲಿ ಒಟ್ಟಿಗೆ ಕಲಿತೆವು ಎಂದು ಅವರ ಆಪ್ತರು ಸ್ಮರಿಸುತ್ತಾರೆ. ಹೈದರಾಬಾದಿನಲ್ಲಿ ಎಂಬಿಬಿಎಸ್ ಕಲಿತು ನಂತರ ಅಮೆರಿಕಕ್ಕೆ ನಾರಾಯಣ ರೆಡ್ಡಿ ಹಾರಿದ್ದರು.

ಪೊತಿರೆಡ್ಡಿಪೆಟಾ ಗ್ರಾಮದಲ್ಲಿ ಜಮೀನು

ಪೊತಿರೆಡ್ಡಿಪೆಟಾ ಗ್ರಾಮದಲ್ಲಿ ಜಮೀನು

ವಿನಯ್ ರೆಡ್ಡಿ ಅವರು ಒಹಾಯೋ ಪ್ರಾಂತ್ಯದಲ್ಲಿ ಹುಟ್ಟಿ ಬೆಳೆದರೂ ಭಾರತದ ಗ್ರಾಮದ ಜೊತೆ ನಂಟು ಉಳಿಸಿಕೊಂಡಿದ್ದಾರೆ. ಪಿತ್ರಾರ್ಜಿತವಾಗಿ ಬಂದಿರುವ ಮೂರು ಎಕರೆ ಜಮೀನಲ್ಲಿ ಕೃಷಿ ಮಾಡಲು ಗುತ್ತಿಗೆ ನೀಡಿದ್ದಾರೆ. ಪೂರ್ವಜರ ಮನೆಯನ್ನು ಉಳಿಸಿಕೊಂಡು ಕುಟುಂಬದವರು ನೆಲೆಸುವಂತೆ ನೋಡಿಕೊಂಡಿದ್ದಾರೆ. ವಿನಯ್ ಅವರ ತಂದೆ ನಾರಾಯಣ ರೆಡ್ಡಿ ಹಾಗೂ ತಾಯಿ ವಿಜಯ ರೆಡ್ಡಿ ಅವರು ಫೆಬ್ರವರಿ 2020ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದರು.

ನಾರಾಯಣ ರೆಡ್ಡಿ ಅವರ ತಂದೆ ತಿರುಪತಿ ರೆಡ್ಡಿ ಅವರು ಗ್ರಾಮದ ಮುಖ್ಯಸ್ಥರಾಗಿದ್ದರು. ಈಗಿನ ಮುಖ್ಯಸ್ಥರಾದ ತಾತಿಕೊಂಡ ಪುಲ್ಲಾಚಾರಿ ಅವರು ತಿರುಪತಿ ರೆಡ್ಡಿ ಅವರ ಜೊತೆಗೆ ಕೆಲಸ ನಿರ್ವಹಿಸಿದ್ದನ್ನು ಸ್ಮರಿಸಿದ್ದಾರೆ. ನಾರಾಯಣ ರೆಡ್ಡಿ ಕುಟುಂಬದ ಬಗ್ಗೆ ಇಡೀ ಗ್ರಾಮಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.

ವಿನಯ್ ಅವರ ಬೆಳವಣಿಗೆ ನಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ, ಇಡೀ ಗ್ರಾಮ, ಭಾರತಕ್ಕೆ ಹೆಮ್ಮೆ ಎಂದು ಸಂಬಂಧಿಕರಾದ ಛೊಲೆಟ್ಟಿ ಸಾಯಿ ಕೃಷ್ಣರೆಡ್ಡಿ ಹೇಳಿದ್ದಾರೆ.

ಉಪಾಧ್ಯಕ್ಷರಾಗಿದ್ದಾಗಲೂ ವಿನಯ್ ಭಾಷಣ

ಉಪಾಧ್ಯಕ್ಷರಾಗಿದ್ದಾಗಲೂ ವಿನಯ್ ಭಾಷಣ

ಒಬಾಮಾ-ಬೈಡನ್ ಆಡಳಿತವಿದ್ದಾಗಲೂ ಜೋ ಬೈಡನ್ ಅವರ ಉಪಾಧ್ಯಕ್ಷ ಭಾಷಣಗಳನ್ನು ವಿನಯ್ ಹಾಗೂ ಅವರ ತಂಡ ನೋಡಿಕೊಳ್ಳುತ್ತಿತ್ತು. ಇದಲ್ಲದೆ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ನ ಸಂವಹನ ವಿಭಾಗದ ಅಧ್ಯಕ್ಷರಾಗಿದ್ದರು.

ಯುಎಸ್ ಪರಿಸರ ರಕ್ಷಣಾ ಸಮಿತಿ, ಆರೋಗ್ಯ ಹಾಗೂ ಮಾನವ ಸೇವಾ ಸಮಿತಿ, ಒಬಾಮಾ-ಬೈಡನ್ ಚುನಾವಣಾ ಪ್ರಚಾರ ಭಾಷಣಗಳನ್ನು ವಿನಯ್ ನಿರ್ವಹಿಸಿದ್ದಾರೆ.

ಮಿಯಾಯಿ ವಿವಿಯಲ್ಲಿ ಕಾನೂನು ಪದವಿ ಪಡೆದಿರುವ ವಿನಯ್ ಹಾಗೂ ಅವರ ಕುಟುಂಬ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ.

English summary
Joe Biden's Speech Writer Is Indian-American Vinay Reddy. He is Indian American to be appointed as a presidential speech writer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X