ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನರಿಗೆ ನೂತನ ಕೊರೊನಾ ಲಸಿಕೆ ಆದೇಶ ಹೊರಡಿಸಿದ ಬೈಡನ್

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 10: ಕೊರೊನಾ ಡೆಲ್ಟಾ ರೂಪಾಂತರ ಸಾಂಕ್ರಾಮಿಕ ನಿಯಂತ್ರಣಕ್ಕೆ ಕೊರೊನಾ ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸಲು ನೂತನ ಯೋಜನೆಗಳನ್ನು ರೂಪಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸುಮಾರು ನೂರು ಮಿಲಿಯನ್ ಅಮೆರಿಕನ್ನರಿಗೆ ಕೊರೊನಾ ಲಸಿಕೆಯನ್ನು ತ್ವರಿತವಾಗಿ ನೀಡಬೇಕಿದೆ. ಖಾಸಗಿ ವಲಯದ ನೌಕರರು, ಆರೋಗ್ಯ ಕಾರ್ಯಕರ್ತರು ಹಾಗೂ ಇತರೆ ಸಿಬ್ಬಂದಿಗೆ ಲಸಿಕೆಗಳನ್ನು ನೀಡಲು ತುರ್ತು ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

7 ತಿಂಗಳ ನಂತರ ಚೀನಾ ಅಧ್ಯಕ್ಷ ಜಿನ್‌ಪಿಂಗ್‌, ಜೋ ಬೈಡೆನ್‌ ಮಾತುಕತೆ7 ತಿಂಗಳ ನಂತರ ಚೀನಾ ಅಧ್ಯಕ್ಷ ಜಿನ್‌ಪಿಂಗ್‌, ಜೋ ಬೈಡೆನ್‌ ಮಾತುಕತೆ

ಜನರನ್ನು ಕೊರೊನಾ ಲಸಿಕೆ ಪಡೆಯಲು ಮನವೊಲಿಸಬೇಕು, ಲಸಿಕೆ ಹಾಕಿಸಿಕೊಂಡವರು ಹಾಗೂ ವೈದ್ಯಕೀಯ ಸಿಬ್ಬಂದಿ ಆರೋಗ್ಯದ ಮೇಲೂ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ..

 Joe Biden Orders Sweeping New Vaccine Mandates For 100 Million Americans

ಅಮೆರಿಕದಲ್ಲಿ ದಿನನಿತ್ಯದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ಲಸಿಕೆ ಅಭಿಯಾನವನ್ನು ವೇಗಗೊಳಿಸಲಾಗಿದೆ ಎಂದು ಶ್ವೇತಭವನ ಮಾಹಿತಿ ನೀಡಿದೆ.

ಶ್ವೇತಭವನದಲ್ಲಿ ಗುರುವಾರ ಈ ಕುರಿತು ಮಾತನಾಡಿದ ಬೈಡನ್, ಕೊರೊನಾ ಲಸಿಕೆಗಳು ಲಭ್ಯವಾಗಿ ಹಲವು ಸಮಯವೇ ಕಳೆದಿದ್ದರೂ ಇನ್ನೂ ಲಕ್ಷಾಂತರ ಅಮೆರಿಕನ್ನರು ಯಾಕೆ ಲಸಿಕೆ ಪಡೆದುಕೊಂಡಿಲ್ಲ? ಸುಮಾರು 80 ಮಿಲಿಯನ್ ಮಂದಿ ಇನ್ನೂ ಲಸಿಕೆ ಪಡೆದುಕೊಂಡಿಲ್ಲ ಎಂದು ಟೀಕಿಸಿದರು.

ಕೊರೊನಾ ಹುಟ್ಟಿನ ಕುರಿತು ಗಂಭೀರ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿದೆ: ಬೈಡನ್ಕೊರೊನಾ ಹುಟ್ಟಿನ ಕುರಿತು ಗಂಭೀರ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿದೆ: ಬೈಡನ್

'ನಾವು ತಾಳ್ಮೆಯಿಂದ ಇದ್ದೆವು. ಆದರೆ ನಮ್ಮ ತಾಳ್ಮೆ ಕಳೆದುಹೋಗುತ್ತಿದೆ ಮತ್ತು ಲಸಿಕೆ ಪಡೆಯಲು ನಿಮ್ಮ ನಿರಾಕರಣೆಯಿಂದಾಗಿ ನಮಗೆ ನಷ್ಟವಾಗಿದೆ. ಲಸಿಕೆ ಹಾಕದ ಅಲ್ಪಸಂಖ್ಯಾತರು ಬಹಳಷ್ಟು ಹಾನಿಗೆ ಕಾರಣವಾಗಬಹುದು ಹಾಗೂ ಹಾನಿಯಾಗುತ್ತಿದೆ' ಎಂದು ಹೇಳಿದ್ದಾರೆ.

 Joe Biden Orders Sweeping New Vaccine Mandates For 100 Million Americans

ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕ ಚೇತರಿಕೆ ಹಾಗೂ ಶಾಲೆಗಳ ಪುನರಾರಂಭದ ಕುರಿತು ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸುಂತೆ ಬೈಡನ್ ಸಲಹೆ ನೀಡಿದ್ದಾರೆ.

'ನಮ್ಮಿಂದ ಕೊರೊನಾ ಸೋಂಕನ್ನು ನಿವಾರಿಸಲು ಸಾಧ್ಯವಿದೆ. ನಾವು ಕೊರೊನಾ ಅಲೆಯನ್ನು ತಗ್ಗಿಸಬಹುದಾಗಿದೆ' ಎಂಬ ಭರವಸೆಯನ್ನು ಬೈಡನ್ ವ್ಯಕ್ತಪಡಿಸಿದ್ದಾರೆ. 'ಇದು ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ ಲಸಿಕೆ ಪಡೆಯದವರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಈ ಸೋಂಕಿನಿಂದ ಸ್ವಾತಂತ್ರ್ಯ ಪಡೆದಿದ್ದೆವು. ಆದರೆ ಡೆಲ್ಟಾ ರೂಪಾಂತರ ಮತ್ತೊಮ್ಮೆ ದಾಳಿ ನಡೆಸಿದೆ' ಎಂದು ಹೇಳಿದ್ದಾರೆ.

ಸೋಂಕಿನಿಂದ ಸಂಭವಿಸುವ ಮರಣ ಪ್ರಮಾಣವನ್ನು 1 ಡೋಸ್ ಲಸಿಕೆ ಎಷ್ಟು ತಗ್ಗಿಸಬಲ್ಲದು?ಸೋಂಕಿನಿಂದ ಸಂಭವಿಸುವ ಮರಣ ಪ್ರಮಾಣವನ್ನು 1 ಡೋಸ್ ಲಸಿಕೆ ಎಷ್ಟು ತಗ್ಗಿಸಬಲ್ಲದು?

ಹೆಚ್ಚಿನ ಜನರಿಗೆ ಲಸಿಕೆ ನೀಡಲು ಆರು ಹಂತದ ಲಸಿಕಾ ಯೋಜನೆಯ ಕುರಿತು ಪ್ರಸ್ತಾಪ ಮಾಡಿದ್ದು, ಶಾಲೆಗಳನ್ನು ಸುರಕ್ಷಿತವಾಗಿ ತೆರೆಯಲು, ಕೊರೊನಾ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲು, ರೋಗಿಗಳ ಆರೋಗ್ಯ ಸುಧಾರಣೆಗೆ ಒತ್ತು ನೀಡುವಂತೆ ಹೇಳಿದ್ದಾರೆ.

ಹೊಸ ಮಾರ್ಗಸೂಚಿಯನ್ವಯ ನೂರಕ್ಕೂ ಹೆಚ್ಚು ನೌಕರರನ್ನು ಹೊಂದಿರುವ ಉದ್ಯೋಗ ಸಂಸ್ಥೆಗಳು ನೌಕರರಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸಿರಬೇಕು ಇಲ್ಲವೇ ವಾರಕ್ಕೊಮ್ಮೆ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕಿದೆ.

ಲಸಿಕೆ ಪಡೆಯದೇ ಇರುವುದಕ್ಕಿಂತ ಯಾವುದಾದರೂ ಒಂದು ಲಸಿಕೆ ಪಡೆಯಿರಿಲಸಿಕೆ ಪಡೆಯದೇ ಇರುವುದಕ್ಕಿಂತ ಯಾವುದಾದರೂ ಒಂದು ಲಸಿಕೆ ಪಡೆಯಿರಿ

ಕೊರೊನಾ ನಿರ್ವಹಣೆ ಸಂಬಂದ ಕೇಳಿಬಂದಿವೆ ಆಕ್ಷೇಪ
ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಬೈಡನ್ ಆಡಳಿತದ ಮೇಲೆ ಕೆಲವು ಆಕ್ಷೇಪಗಳು ವ್ಯಕ್ತವಾಗಿವೆ. ಕಳೆದ ತಿಂಗಳು, ಏಕಾಏಕಿ ತಮ್ಮ ದೇಶ ಕೊರೊನಾದಿಂದ ಸ್ವಾತಂತ್ರ್ಯ ಪಡೆದಿದೆ ಎಂದು ಘೋಷಿಸಿದ್ದರು. ಆದರೆ ಆನಂತರ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರಿದ್ದವು. 208 ಮಿಲಿಯನ್ ಅಮೆರಿಕನ್ನರು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಆದರೂ ದಿನನಿತ್ಯ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ.

ಆಸ್ಪತ್ರೆಗೆ ಸೇರುವವರ ಸಂಖ್ಯೆ ಹಾಗೂ ಮರಣ ಪ್ರಮಾಣದಲ್ಲಿಯೂ ಏರಿಕೆ ಕಂಡುಬಂದಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ದೇಶ ಅಮೆರಿಕದಲ್ಲಿ ದಿನನಿತ್ಯ 151500 ಪ್ರಕರಣಗಳು ದಾಖಲಾಗುತ್ತಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ಯುನಿವರ್ಸಿಟಿ ಹೇಳಿದೆ. ಅಮೆರಿಕದಲ್ಲಿ ಪ್ರತಿನಿತ್ಯ 1500 ಮಂದಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಕಾರ್ಯಗತಿಯನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ.

English summary
America president Joe Biden on Thursday ordered sweeping new federal vaccine requirements for as many as 100 million Americans
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X