ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮೂಲ ಯಾವುದು?; ತನಿಖೆಗೆ ಗಡುವು ನೀಡಿದ ಬೈಡನ್

|
Google Oneindia Kannada News

ವಾಷಿಂಗ್ಟನ್, ಮೇ 27: ಚೀನಾದಲ್ಲಿ ಪ್ರಾಣಿ ಮೂಲದಿಂದ ಕೊರೊನಾ ಸೋಂಕು ಹರಡಿತೇ ಅಥವಾ ಪ್ರಯೋಗಾಲಯದಲ್ಲಿನ ಅವಘಡದಿಂದ ಸೋಂಕು ಸೃಷ್ಟಿಯಾಯಿಯೇ ಎಂಬ ಕುರಿತು ತನಿಖೆ ನಡೆಸಿ ಮೂರು ತಿಂಗಳ ಒಳಗೆ ವರದಿ ನೀಡಬೇಕೆಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಪ್ತಚರ ಇಲಾಖೆಗೆ ಆದೇಶಿಸಿದ್ದಾರೆ.

ಕೊರೊನಾ ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸಲು ಮತ್ತಷ್ಟು ಪ್ರಯತ್ನ ಮಾಡಬೇಕು. ಸಾಕಷ್ಟು ಮಾಹಿತಿಗಳ ಪರಿಶೀಲನೆ ನಡೆಸಬೇಕು. ಈ ಮೂಲಕ ನಿಖರ ಅಭಿಪ್ರಾಯಕ್ಕೆ ಬರುವಂತಾಗಬೇಕು. 90 ದಿನಗಳ ಬಗ್ಗೆ ವರದಿ ನೀಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಹಳೇ ಬೇರು, ಹೊಸ ಚಿಗುರು: ಕೊರೊನಾ ಕಟ್ಟಿಹಾಕಿದ ಜೋ ಬೈಡನ್..?ಹಳೇ ಬೇರು, ಹೊಸ ಚಿಗುರು: ಕೊರೊನಾ ಕಟ್ಟಿಹಾಕಿದ ಜೋ ಬೈಡನ್..?

ಕಳೆದ ವರ್ಷದಿಂದಲೂ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಸೋಂಕಿನ ಎರಡು ಮೂಲಗಳ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಕಂಡುಕೊಂಡಿದೆ. ಇವೆರಡು ಸಾಧ್ಯತೆಗಳ ನಡುವೆ ಸ್ಪಷ್ಟತೆ ಸಿಗುತ್ತಿಲ್ಲ ಎನ್ನಲಾಗಿದೆ.

Joe Biden Orders Intelligence Report On Coronavirus Origin

ಕೊರೊನಾ ಸೋಂಕು ಮೊದಲು ಎಲ್ಲಿ ಸೃಷ್ಟಿಯಾಯಿತು? ಚೀನಾದ ವುಹಾನ್‌ನಲ್ಲಿನ ಪ್ರಾಣಿ ಮಾಂಸ ಮಾರುಕಟ್ಟೆಯಲ್ಲಿಯೇ ಅಥವಾ ಅಲ್ಲಿನ ಲ್ಯಾಬೊರೇಟರಿವೊಂದರಲ್ಲಿ ನಡೆದ ಅವಘಡದಿಂದಲೇ ಎಂಬ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಇನ್ನೂ ಸ್ಪಷ್ಟತೆ ದೊರೆಯುತ್ತಿಲ್ಲ. ಈ ಬೆನ್ನಲ್ಲೇ ಬೈಡನ್ ಆದೇಶಿಸಿದ್ದಾರೆ.

ಮಾರ್ಚ್‌ನಲ್ಲೇ ಈ ಕುರಿತು ವರದಿ ನಿರೀಕ್ಷಿಸಲಾಗಿತ್ತು. ಆದರೆ ಗುಪ್ತಚರ ಇಲಾಖೆ ಇನ್ನು ವರದಿ ನೀಡಿಲ್ಲ. ಗುಪ್ತಚರ ಇಲಾಖೆ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಕಷ್ಟು ಮಾಹಿತಿಯಿದೆ ಎಂಬುದನ್ನು ನಂಬಲಾಗುವುದಿಲ್ಲ. ಆದ್ದರಿಂದ ಸೂಕ್ತ ತನಿಖೆಯ ಅಗತ್ಯವಿದೆ. ಅಮೆರಿಕದ ರಾಷ್ಟ್ರೀಯ ಪ್ರಯೋಗಾಲಯಗಳು ತನಿಖೆಗೆ ಸಹಕಾರ ನೀಡಬೇಕು ಎಂದಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಮೂಲದ ಬಗ್ಗೆ ನಡೆಯುವ ಅಂತರರಾಷ್ಟ್ರೀಯ ತನಿಖೆಗಳಿಗೆ ಚೀನಾ ಸಹಕರಿಸಬೇಕು ಎಂದು ಹೇಳಿದ್ದಾರೆ.

English summary
President Joe Biden ordered US intelligence agencies to report to him in next 90 days whether the coronavirus first emerged in China from an animal source or from a laboratory,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X