• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಿ7 ಶೃಂಗಸಭೆಗೆ ರಷ್ಯಾ ಆಹ್ವಾನಿಸದಿರಲು ಜೋ ಬೈಡನ್ ನಿರ್ಧಾರ

|

ವಾಷಿಂಗ್ಟನ್, ಫೆಬ್ರವರಿ 20: ಜಿ 7 ಶೃಂಗಸಭೆಗೆ ರಷ್ಯಾ ಆಹ್ವಾನಿಸುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೈಬಿಡುತ್ತಿರುವುದಾಗಿ ಶ್ವೇತಭವನ ಮೂಲಗಳು ತಿಳಿಸಿವೆ.

ರಷ್ಯಾಗೆ ಹೊಸ ಆಹ್ವಾನ ನೀಡುವ ಕುರಿತು ನಮಗೆ ಯಾವುದೇ ಆಲೋಚನೆಯಿಲ್ಲ ಎಂದು ಜೋಬೈಡನ್ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ. ಕಳೆದ ವರ್ಷ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಈ ಆಲೋಚನೆಗೆ ಬೆಂಬಲ ನೀಡಿದ್ದರು. ಕ್ರಿಮಿಯಾ ಪ್ರದೇಶವನ್ನು ನೆರೆಯ ಉಕ್ರೇನ್‌ನಿಂದ ವಶಪಡಿಸಿಕೊಂಡ ನಂತರ ರಷ್ಯಾವನ್ನು 2014ರಲ್ಲಿ ಅಂದಿನ ಶೃಂಗಸಭೆಯಿಂದ ಹೊರಹಾಕಲಾಗಿತ್ತು.

ಬ್ರಿಟನ್ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ

ಪ್ರತಿ ವರ್ಷವೂ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಕೆನಡಾ ಈ ಏಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಭೆ ಸೇರುತ್ತಿದ್ದವು. ಆರ್ಥಿಕತೆ, ಹವಾಮಾನ ವೈಪರಿತ್ಯ, ಭದ್ರತೆ ಕುರಿತು ಚರ್ಚೆ ನಡೆಸುತ್ತಿದ್ದವು.

ಈ ಬಾರಿ ಬ್ರಿಟನ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದೆ. ನೈಋತ್ಯ ಇಂಗ್ಲೆಂಡ್‌ನ ಸಣ್ಣ ಕಡಲತೀರದ ರೆಸಾರ್ಟ್‌ ಕಾರ್ನ್‌ವಾಲ್‌ನಲ್ಲಿ ಜೂನ್ 11ರಿಂದ 13ರವರೆಗೆ ನಡೆಯಲಿರುವ ಜಿ7ರ 47ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವುದಾಗಿ ತಿಳಿದುಬಂದಿದೆ. 2021ರಲ್ಲಿ ಜಿ7 ಅಧ್ಯಕ್ಷತೆ ಮತ್ತು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದ ಅಧ್ಯಕ್ಷತೆಯ ಸ್ಥಾನ ಪಡೆಯಲು ನಾವು ಎದುರು ನೋಡುತ್ತಿದ್ದೇವೆ. ವಿಶ್ವಸಂಸ್ಥೆಯ ಭದ್ರತಾ ಪರಿಷತ್‌ಗೆ ಭಾರತ ಮರಳಿದ್ದನ್ನು ನಾವು ಸ್ವಾಗತಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.

English summary
US President Joe Biden not to invite Russia into the G7 club of wealthy democracies,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X