ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ತೃತೀಯಲಿಂಗಿ ನಾಮನಿರ್ದೇಶನ ಮಾಡಿದ ಬೈಡನ್

|
Google Oneindia Kannada News

ವಾಷಿಂಗ್ಟನ್, ಜನವರಿ 21: ಅಮೆರಿಕದ 46ನೇ ಅಧ್ಯಕ್ಷರಾಗಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿರುವ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಈಗ ಅಧಿಕಾರ ರಚನೆಯ ಸಿದ್ಧತೆಯಲ್ಲಿದ್ದಾರೆ.

ಪದಗ್ರಹಣದ ನಂತರ ಸರ್ಕಾರದ ಸ್ಥಾನಗಳಿಗೆ ನಾಮನಿರ್ದೇಶನ ಮಾಡುತ್ತಿದ್ದು, ಪೆನ್ಸಿಲ್ವೇನಿಯಾದ ಆರೋಗ್ಯ ಇಲಾಖೆ ಉನ್ನತಾಧಿಕಾರಿ ರಾಚೆಲ್ ಲೆವೈನ್ ಅವರನ್ನು ಮುಂದಿನ ಅಮೆರಿಕ ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ. ಈ ನಾಮನಿರ್ದೇಶನ ಒಪ್ಪಿತವಾದರೆ, ಸೆನೇಟ್ ದೃಢೀಕರಿಸಿದ ಮೊದಲ ತೃತೀಯ ಲಿಂಗಿ ಅಧಿಕಾರಿ ಎನಿಸಿಕೊಳ್ಳಲಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರ ಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರ

ಈ ನಾಮನಿರ್ದೇಶನ ಐತಿಹಾಸಿಕ ಎಂದು ವಿವರಿಸಿರುವ ಬೈಡನ್, ಕೊರೊನಾ ಸೋಂಕಿನ ನಡುವೆ ಸಾರ್ವಜನಿಕ ಆರೋಗ್ಯ ಸುಧಾರಿಸುವ ಎಲ್ಲಾ ಪ್ರಯತ್ನವನ್ನು ರಾಚೆಲ್ ನಿರ್ವಹಿಸುವ ವಿಶ್ವಾಸವಿದೆ ಎಂದು ಹಾರೈಸಿದ್ದಾರೆ. 64 ವರ್ಷದ ಮಕ್ಕಳ ತಜ್ಞೆ ಲೆವೈನ್, ಅಮೆರಿಕ ಸೆನೇಟ್ ದೃಢೀಕರಿಸಿದ ಮೊದಲ ತೃತೀಯ ಲಿಂಗಿ ಅಧಿಕಾರಿ ಎನಿಸಿಕೊಳ್ಳಲಿದ್ದಾರೆ.

Joe Biden Nominated Transgender Woman As Assistant Health Secretary

"ಗವರ್ನರ್ ಟಾಮ್ ವೊಲ್ಫ್ 2017ರಲ್ಲಿ ರಾಚೆಲ್ ನೇಮಕಗೊಂಡಿದ್ದರು. ಕೊರೊನಾ ಸೋಂಕಿನ ನಿವಾರಣೆಗೆ ಡಾ. ರಾಚೆಲ್ ಲೆವೈನ್ ತನ್ನ ನಾಯಕತ್ವದಲ್ಲಿ, ತಜ್ಞ ಸಲಹೆಗಳೊಂದಿಗೆ ಪ್ರಯತ್ನಿಸಲಿದ್ದಾರೆ. ಸಾರ್ವಜನಿಕ ಆರೋಗ್ಯ ದೇಶದ ಈ ಕ್ಷಣದ ಅಗತ್ಯವಾಗಿದ್ದು, ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲಿ ಇಂಥ ನಾಯಕತ್ವ ಅಗತ್ಯವಿದೆ" ಎಂದಿದ್ದಾರೆ. ಪ್ರಸ್ತುತ ರಾಚೆಲ್ ಪೆನಿಸೆಲ್ವಿಯಾದ ಆರೋಗ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೋಂಕಿನ ನಡುವೆ ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಶ್ರಮ ವಹಿಸಿ ಗಮನ ಸೆಳೆದಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

English summary
President-elect Joe Biden has nominated Rachel Levine, currently Pennsylvania's top health official, as the next Assistant Health Secretary of the US,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X