ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಕಾಲದ ಗ್ರೀನ್ ಕಾರ್ಡ್ ನಿಷೇಧ ಹಿಂಪಡೆದ ಬೈಡನ್

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 25: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿದ್ದ ಗ್ರೀನ್ ಕಾರ್ಡ್ ನಿಷೇಧ ಆದೇಶವನ್ನು ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಹಿಂಪಡೆದಿದ್ದಾರೆ. ಈ ನಿರ್ಬಂಧ ತೆರವುಗೊಂಡಿರುವುದರಿಂದ ಲಕ್ಷಾಂತರ ಭಾರತೀಯ ಉದ್ಯೋಗಾರ್ಥಿಗಳಿಗೆ ಶುಭ ಸುದ್ದಿ ಸಿಕ್ಕಿದೆ.

ಕೊವಿಡ್ 19 ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲು ಆದ್ಯತೆ ನೀಡುವಂತೆ ಟ್ರಂಪ್ ಆದೇಶಿಸಿದ್ದರು. ಇದರಿಂದ 'ಗ್ರೀನ್‌ ಕಾರ್ಡ್‌' ಹೊಂದಿರುವ ಜನರಿಗೂ ಅಮೆರಿಕ ಪೌರತ್ವ ಪಡೆದುಕೊಳ್ಳುವ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ಯುಎಸ್ H1B ವೀಸಾ ನಿಯಮದಲ್ಲಿ ಬದಲಾವಣೆ ತಂದ ಬೈಡನ್ಯುಎಸ್ H1B ವೀಸಾ ನಿಯಮದಲ್ಲಿ ಬದಲಾವಣೆ ತಂದ ಬೈಡನ್

ಅಮೆರಿಕದಲ್ಲಿ ಈಗ ಸುಮಾರು 6 ಲಕ್ಷ ಎಚ್ -1 ಬಿ ವೀಸಾ ಹೊಂದಿರುವವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾರತ ಮೂಲದವರು. ಚೀನಾವು ಎರಡನೇ ಸ್ಥಾನದಲ್ಲಿದೆ. ಹೊರಗಿನಿಂದ ಬರುವ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಪ್ರತಿ ವರ್ಷ ಅಮೆರಿಕ ಸರ್ಕಾರವು 85 ಸಾವಿರ ಎಚ್ -1 ಬಿ (H-1B) ವೀಸಾಗಳನ್ನು ನೀಡುತ್ತದೆ. ಇದು ಅತಿ ಹೆಚ್ಚು ಐಟಿ ವೃತ್ತಿಪರರನ್ನು ಹೊಂದಿದೆ.

Joe Biden lifts Ban On Many Green Card Applicants

ಈಗಾಗಲೇ ಎಚ್ 1 ಬಿ ವೀಸಾ ಹೊಂದಿರುವ ಸಿಬ್ಬಂದಿಯ ಅವಲಂಬಿತ ಪತಿ ಅಥವಾ ಪತ್ನಿಗೆ ನೀಡುವ ಎಚ್ 4 ವೀಸಾ ರದ್ದುಗೊಳಿಸಲು ಟ್ರಂಪ್ ನೀಡಿದ್ದ ಆದೇಶವನ್ನು ಬೈಡನ್ ರದ್ದುಗೊಳಿಸಿದ್ದಾರೆ

ಹೀಗಾಗಿ, ಎಚ್ 1 ಬಿ ವೀಸಾ ಹೊಂದಿರುವ ವ್ಯಕ್ತಿಯ ಸಂಗಾತಿ ಅಥವಾ 21ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಎಚ್ 4 ವೀಸಾ ನೀಡಬಹುದು ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ನೀತಿಯಲ್ಲಿ ಬದಲಾವಣೆ ತರಲಾಗಿದೆ.

ಟ್ರಂಪ್ ವಲಸೆ ನೀತಿಗೆ ಬ್ರೇಕ್, ನಿರಾಶ್ರಿತರ ಪರ ನಿಂತ ಬೈಡನ್ಟ್ರಂಪ್ ವಲಸೆ ನೀತಿಗೆ ಬ್ರೇಕ್, ನಿರಾಶ್ರಿತರ ಪರ ನಿಂತ ಬೈಡನ್

ನಿರುದ್ಯೋಗ ಸಮಸ್ಯೆ: 2015ರಿಂದ ಈಚೆಗೆ ಎಚ್ 1ಬಿ ವೀಸಾ ಹೊಂದಿರುವವರ ಬಾಳ ಸಂಗಾತಿ ಅಥವಾ ಉನ್ನತ ಕೌಶಲ್ಯ ಇರುವವರು, ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವ ವೀಸಾ ಇರುವಂಥವರು ಎಚ್ -4 ಅವಲಂಬಿತ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ಉದ್ಯೋಗ ಮಾಡಬಹುದಿತ್ತು. ಒಬಾಮ ಆಡಳಿತಾವಧಿಯಲ್ಲಿ ಈ ನಿಯಮ ಪರಿಚಯಿಸಲಾಗಿತ್ತು. ಆದರೆ, ಕಳೆದ ಅಧ್ಯಕ್ಷೀಯ ಚುನಾವಣೆ ಬಳಿಕ ಅಮೆರಿಕದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆದರೆ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಹೀಗಾಗಿ ಎಚ್-4 ವೀಸಾ ರದ್ದು ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಕೋವಿಡ್ 19 ಸಂದರ್ಭದಲ್ಲಿ ವೀಸಾ ನೀತಿಯನ್ನು ಟ್ರಂಪ್ ಸರ್ಕಾರ ಇನ್ನಷ್ಟು ಬಿಗಿಗೊಳಿಸಿತ್ತು. ಆದರೆ, ಕ್ಯಾಲಿಫೋರ್ನಿಯಾದ ಫೆಡರಲ್ ಜಡ್ಜ್ ಅವರು ಟ್ರಂಪ್ ಆದೇಶಕ್ಕೆ ತಡೆ ನೀಡಿದ್ದರು.

English summary
Former President Donald Trump issued the ban last year, saying it was needed to protect U.S. workers amid high unemployment due to the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X