• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಳೇ ಬೇರು, ಹೊಸ ಚಿಗುರು: ಕೊರೊನಾ ಕಟ್ಟಿಹಾಕಿದ ಜೋ ಬೈಡನ್..?

|
Google Oneindia Kannada News

ಕೆಲವೇ ಕೆಲವು ತಿಂಗಳು ಅಷ್ಟೇ. ಹಿಂದಿರುಗಿ ನೋಡಿದರೆ ಅಲ್ಲಿ ಸ್ಮಶಾನ ಮೌನ, ಮಾತ್ರವಲ್ಲ ಎಲ್ಲೆಲ್ಲೂ ಶವಗಳ ಯಾತ್ರೆ ಹೊರಟಿತ್ತು. ಎಲ್ಲರಲ್ಲೂ ಭಯದ ವಾತಾವರಣ ಆವರಿಸಿತ್ತು. ಜೀವ ಉಳಿಸಿಕೊಂಡರೆ ಸಾಕಪ್ಪ ಎಂದು ಅಲ್ಲಿನ ಜನರು ಪರದಾಡುತ್ತಿದ್ದರು.

ಆದರೆ ಇಂದು ಅಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮತ್ತೊಮ್ಮೆ ಅಲ್ಲಿ ನಂಬರ್ 1 ಪಟ್ಟಕ್ಕಾಗಿ ಗುದ್ದಾಟ ಆರಂಭವಾಗಿದೆ. ಹೌದು, ಇದು ಜಗತ್ತಿನ ಶ್ರೀಮಂತ ರಾಷ್ಟ್ರ, ಪವರ್‌ ಫುಲ್ ದೇಶವೆಂದು ಬಿಲ್ಡಪ್ ಕೊಡುವ ಅಮೆರಿಕದ ಕಥೆ-ವ್ಯಥೆ. ಟ್ರಂಪ್ ಅಧ್ಯಕ್ಷರಾಗಿದ್ದೇ ತಡ ಅಲ್ಲೋಲ-ಕಲ್ಲೋಲ ಏರ್ಪಟ್ಟಿತ್ತು.

ಒಂದು ಕಡೆ ನಂಬರ್ 1 ಪಟ್ಟವನ್ನ ಕಳೆದುಕೊಳ್ಳುವ ಭೀತಿ, ಮತ್ತೊಂದೆಡೆ ಕೊರೊನಾ ಕೂಪದಲ್ಲಿ ನರಳಬೇಕಾದ ಅನಿವಾರ್ಯತೆ. ಆದರೆ ಇದಕ್ಕೆಲ್ಲಾ ತಕ್ಕ ಪಾಠ ಕಲಿಸಿದ್ದ ಅಮೆರಿಕನ್ನರು ಟ್ರಂಪ್‌ಗೆ ಮನೆ ದಾರಿ ತೋರಿಸಿದ್ದರು.

ಟ್ರಂಪ್‌ಗೆ ಮಣ್ಣುಮುಕ್ಕಿಸಿ ಬೈಡನ್ ಅಧಿಕಾರ ಹಿಡಿದು 4 ತಿಂಗಳು ಸಮೀಪಿಸುತ್ತಾ ಬಂದಿದೆ. ಹಾಗಾದರೆ ಬೈಡನ್ ಆಡಳಿತದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ..? ಜೋ ಬೈಡನ್ ಆಡಳಿತದಲ್ಲಿ ಅಮೆರಿಕದಲ್ಲಿ ಕೊರೊನಾ ಸ್ಥಿತಿಗತಿ ಹೇಗಿದೆ ಎಂಬುದನ್ನ ವಿವರವಾಗಿ ಮುಂದೆ ತಿಳಿಯೋಣ.

ಕೊರೊನಾ ನಿಯಂತ್ರಣಕ್ಕೆ ಬಂದಿದ್ಯಾ

ಕೊರೊನಾ ನಿಯಂತ್ರಣಕ್ಕೆ ಬಂದಿದ್ಯಾ

ಕಳೆದ ಒಂದು ವರ್ಷದಲ್ಲಿ ಅಮೆರಿಕ ಹಿಂದೆಂದೂ ನೋಡದ, ಕಾಣದ ಸಂಕಷ್ಟ ಎದುರಿಸಿದೆ. ಸುಮಾರು 6 ಲಕ್ಷ ಅಮೆರಿಕನ್ನರು ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು 3 ಕೋಟಿ 34 ಲಕ್ಷ ಸೋಂಕಿತರು ಅಮೆರಿಕ ಒಂದರಲ್ಲೇ ಪತ್ತೆಯಾಗಿದ್ದಾರೆ. ಆದ್ರೆ ಜೋ ಬೈಡನ್ ಅಧಿಕಾರ ವಹಿಸಿಕೊಂಡ ಬಳಿಕ ಕೊರೊನಾ ಹಾವಳಿ ಕ್ರಮೇಣ ತಗ್ಗಿದೆ. ಟ್ರಂಪ್ ಆಡಳಿತದಲ್ಲಿ 3ನೇ ಅಲೆಯಲ್ಲಿ ನಿತ್ಯ ಬರೋಬ್ಬರಿ 3 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ ಜೋ ಬೈಡನ್ ಆಡಳಿತ ಸೋಂಕು ನಿಯಂತ್ರಣಕ್ಕೆ ತರುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇದಕ್ಕೆ ಬೈಡನ್ ಕೈಗೊಂಡ ಹಲವು ಕಠಿಣ ಹಾಗೂ ಅರ್ಥಪೂರ್ಣ ಕ್ರಮಗಳೇ ಕಾರಣವಾಗಿವೆ.

ಉಚಿತ ಲಸಿಕೆ

ಉಚಿತ ಲಸಿಕೆ

ಅಮೆರಿಕನ್ನರು ಉಚಿತ ಲಸಿಕೆಗೆ ಬೇಡಲಿಲ್ಲ, ಬದಲಾಗಿ ಅಲ್ಲಿನ ಸರ್ಕಾರವೇ ಜನರನ್ನ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತಾ ಬೇಡುತ್ತಿದೆ. ಉಚಿತವಾಗಿ ಲಸಿಕೆ ನೀಡಿದರೂ ಯುವಜನತೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂಬುದೇ ಈ ಒತ್ತಡಕ್ಕೆ ಕಾರಣ. ಒಟ್ಟಾರೆ ಹೇಗೋ ಮಾಡಿ ಅಮೆರಿಕದಲ್ಲಿ ಕೋಟ್ಯಂತರ ಜನರಿಗೆ ಅಲ್ಲಿನ ಸರ್ಕಾರ ಲಸಿಕೆ ನೀಡಿದೆ. ಇದು ಕೂಡ ಕೊರೊನಾ ಕಂಟ್ರೋಲ್‌ಗೆ ಬರಲು ಪ್ರಮುಖ ಕಾರಣ. ಮೊದಲೆಲ್ಲಾ ಲಕ್ಷದ ಲೆಕ್ಕದಲ್ಲಿ ಕಾಣುತ್ತಿದ್ದ ಸೋಂಕು ಈಗ ಪ್ರತಿನಿತ್ಯ 40 ಸಾವಿರದ ಆಸುಪಾಸು ತಲುಪಿದೆ.

ಮಾಸ್ಕ್ ವಿಚಾರಕ್ಕೆ ಯುದ್ಧ

ಮಾಸ್ಕ್ ವಿಚಾರಕ್ಕೆ ಯುದ್ಧ

ಅಮೆರಿಕದಲ್ಲಿ ಈ ಮಟ್ಟಿಗೆ ಕೊರೊನಾ ಸೋಂಕು ಉಲ್ಬಣವಾಗಲು ಟ್ರಂಪ್ ಆಡಳಿತದ ಎಡವಟ್ಟು ದೊಡ್ಡದು. ಸಣ್ಣ ಸಣ್ಣ ವಿಚಾರಗಳಿಗೆ ಜಗಳ ತೆಗೆದು ಕೂರುತ್ತಿದ್ದ ಟ್ರಂಪ್ ತಜ್ಞರ ಮಾತನ್ನು ಕೇಳಲೇ ಇಲ್ಲ. ಕೊರೊನಾ ಬಗ್ಗೆ ಅಸಡ್ಡೆ ಮಾಡುತ್ತಲೇ ಬಂದರು. ಮಾಸ್ಕ್ ಬಗ್ಗೆ ಕೇರ್ ಲೆಸ್ ಆಗಿದ್ದರು. ಅಲ್ಲದೆ ಮಾಸ್ಕ್ ಹಾಕುವುದು ಬೇಡ ಅಂತಾ ತನ್ನ ಬೆಂಬಲಿಗರಿಗೆ ಆಜ್ಞೆ ಹೊರಡಿಸಿದ್ದರು. ಇದೆಲ್ಲದರ ಪರಿಣಾಮ ಅಮೆರಿಕದಲ್ಲಿ ಕೊರೊನಾ ವೈರಸ್ ಗೂಡು ಕಟ್ಟಿಬಿಟ್ಟಿದೆ. ಆದರೆ ಜೋ ಬೈಡನ್ ಖುದ್ದು ತಾವೇ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು, ಸರ್ಕಾರಿ ಕಚೇರಿ ಹಾಗೂ ಸರ್ಕಾರಿ ಸಿಬ್ಬಂದಿಗೆ ಶಿಸ್ತಿನ ಪಾಠ ಹೇಳಿದ್ದರು.

ತಾರತಮ್ಯ ಮಾಡಲಿಲ್ಲ ಬೈಡನ್

ತಾರತಮ್ಯ ಮಾಡಲಿಲ್ಲ ಬೈಡನ್

ಅಧಿಕಾರ ಹಿಡಿಯುವ ಮೊದಲೇ ಬೈಡನ್ ಒಂದು ಮಾತನ್ನು ಸ್ಪಷ್ಟಪಡಿಸಿದ್ದರು. ನಮಗೆ ಬಿಳಿಯರ ಪ್ರಭುತ್ವ ಇರುವ ಅಮೆರಿಕ ಬೇಡ, ಕರಿಯರ ಪ್ರಭುತ್ವದ ಅಮೆರಿಕ ಕೂಡ ಬೇಡ. ಡೆಮಾಕ್ರಟಿಕ್-ರಿಪಬ್ಲಿಕನ್ಸ್ ಎಂಬ ಬೇಧ-ಭಾವ ಮರೆತು ನಿರ್ಮಾಣವಾಗುವ ಅಮೆರಿಕ ಬೇಕು ಎಂದು ಘೋಷಿಸಿದ್ದರು. ಇದೀಗ ಬೈಡನ್ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಯಾರ ನಡುವೆಯೂ ತಾರತಮ್ಯ ಮಾಡದೇ ಅಗತ್ಯ ಲಸಿಕೆ ಹಾಗೂ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ಇಡೀ ಅಮೆರಿಕ ಒಂದು ಎಂಬ ಸಂದೇಶವನ್ನು ಸಾರಿ ಅಲ್ಲಿನ ಜನರ ಜೀವ ಉಳಿಸಿದ್ದಾರೆ.

50 ರಾಜ್ಯಗಳಲ್ಲಿ ತಾರತಮ್ಯ ಇಲ್ಲ

50 ರಾಜ್ಯಗಳಲ್ಲಿ ತಾರತಮ್ಯ ಇಲ್ಲ

ಅಮೆರಿಕದಲ್ಲಿ ಒಟ್ಟು 50 ರಾಜ್ಯಗಳಿವೆ. ಈ 50 ರಾಜ್ಯಗಳಲ್ಲಿ ಬಹುಪಾಲು ರಾಜ್ಯಗಳು ಟ್ರಂಪ್ ಪರವಾಗಿಯೇ ತಮ್ಮ ಮತ ಚಲಾಯಿಸಿವೆ. ಆದರೂ ಬೈಡನ್ ರಾಜ್ಯಗಳ ನಡುವೆ ತಾರತಮ್ಯ ಮಾಡುವ ಬುದ್ಧಿ ತೋರಿಸಿಲ್ಲ. ಎಲ್ಲಾ ರಾಜ್ಯಗಳನ್ನೂ ಒಂದು ಎಂಬಂತೆ ನೋಡಿ, ಕೊರೊನಾ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದರು. ಇದು ಅಮೆರಿಕದ ನಿವಾಸಿಗಳಲ್ಲಿ ಒಗ್ಗಟ್ಟಿನ ಪಾಠದ ಜೊತೆಗೆ, ಕೊರೊನಾ ವಿರುದ್ಧದ ಹೋರಾಟದಲ್ಲಿ ಆತ್ಮಸ್ಥೈರ್ಯ ತುಂಬಿತ್ತು. ಕೊರೊನಾ 4ನೇ ಅಲೆ ಅಪ್ಪಳಿಸುವ ಮೊದಲೇ ಅಮೆರಿಕನ್ನರು ಗೆದ್ದು ಬೀಗುವ ವಿಶ್ವಾಸದಲ್ಲಿದ್ದಾರೆ.

English summary
Nearly 4 months after Joe Biden become president, Corona daily numbers decreasing in USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X