ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ಬದಲಾವಣೆ ಶೃಂಗಸಭೆ: ಮೋದಿಗೆ ಆಹ್ವಾನ, ಇಮ್ರಾನ್ ಹೆಸರು ಕೈಬಿಟ್ಟ ಜೋ ಬೈಡನ್

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 28: ಅಮೆರಿಕದಲ್ಲಿ ಹವಾಮಾನ ಬದಲಾವಣೆ ಕುರಿತು ಶೃಂಗಸಭೆ ನಡೆಯಲಿದೆ. ಏಪ್ರಿಲ್ 22 ಹಾಗೂ 23 ರಂದು ವರ್ಚ್ಯುವಲ್ ಆಗಿ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ 40 ನಾಯಕರನ್ನು ಸ್ವಾಗತಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಮೆರಿಕ ಅಧ್ಯಕ್ಷರು ಆಹ್ವಾನ ನೀಡಿಲ್ಲ. ಈ ವರ್ಷ ನವೆಂಬರ್ ನಲ್ಲಿ ಗ್ಲಾಸ್ಗೊದಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನ(ಸಿಒಪಿ26)ಕ್ಕೆ ಈ ಶೃಂಗಸಭೆ ಮೈಲುಗಲ್ಲಾಗಲಿದೆ ಎಂದು ಶ್ವೇತಭವನ ತಿಳಿಸಿದೆ.

ಹವಾಮಾನ ಬದಲಾವಣೆಯ ಕ್ಷಿಪ್ರ ಕೆಲಸದ ತುರ್ತು ಅಗತ್ಯ ಮತ್ತು ಅದರಿಂದ ಆರ್ಥಿಕ ಪ್ರಯೋಜನಗಳ ಕುರಿತು ಶೃಂಗಸಭೆಯಲ್ಲಿ ಒತ್ತು ನೀಡಲಾಗುತ್ತಿದ್ದು ಇದರ ನೇರಪ್ರಸಾರವಿರುತ್ತದೆ ಎಂದು ಶ್ವೇತಭವನ ತಿಳಿಸಿದೆ.

 Joe Biden Invites PM Modi To Virtual Summit On Climate Change, Imran Khan Not Included In List

ಶೃಂಗಸಭೆಯು ವರ್ಧಿತ ಹವಾಮಾನ ಮಹತ್ವಾಕಾಂಕ್ಷೆಯು ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತದೆ, ನವೀನ ತಂತ್ರಜ್ಞಾನಗಳನ್ನು ಹೇಗೆ ಮುನ್ನಡೆಸುತ್ತದೆ ಮತ್ತು ದುರ್ಬಲ ದೇಶಗಳಿಗೆ ಹವಾಮಾನ ಪರಿಣಾಮಗಳಿಗೆ ಹೊಂದಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಉದಾಹರಣೆಗಳನ್ನು ತೋರಿಸುತ್ತದೆ ಎಂದು ಶ್ವೇತಭವನ ಹೇಳಿದೆ.

ನಾಯಕರ ಶೃಂಗಸಭೆ ಮತ್ತು ಸಿಒಪಿ 26 ರ ಪ್ರಮುಖ ಉದ್ದೇಶವೆಂದರೆ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ ಗುರಿಯವರೆಗೆ ಸೀಮಿತಗೊಳಿಸುವ ಪ್ರಯತ್ನಗಳನ್ನು ವೇಗವರ್ಧಿಸುವುದಾಗಿದೆ.

English summary
US President Joe Biden has invited 40 leaders from across the world, including Prime Minister Narendra Modi, to the Leaders Climate Summit to be held virtually on April 22 and 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X