ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋ ಬೈಡನ್-ಗುಟೆರಸ್ ಮಹತ್ವದ ಮಾತುಕತೆ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 1: ಕೊರೊನಾ ವೈರಸ್ ಪಿಡುಗು ಸೇರಿದಂತೆ ಅನೇಕ ತುರ್ತು ಜಾಗತಿಕ ಸಮಸ್ಯೆಗಳನ್ನು ಬಗೆಹರಿಸಲು ಅಮೆರಿಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ನಡುವಿನ ಸಂಬಂಧವನ್ನು ಬಲಪಡಿಸುವ ಸಂಬಂಧ ಚುನಾಯಿತ ಅಧ್ಯಕ್ಷ ಜೋ ಬೈಡನ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಜತೆ ಮಾತುಕತೆ ನಡೆಸಿದರು.

ಸೋಮವಾರ ದೂರವಾಣಿ ಮೂಲಕ ಗುಟೆರಸ್ ಅವರೊಂದಿಗೆ ಮಾತನಾಡಿದ ಬೈಡನ್, ಜಾಗತಿಕ ಹವಾಮಾನ ಬದಲಾವಣೆ ಹಾಗೂ ಶಾಂತಿ ಮತ್ತು ಭದ್ರತೆ ಕಾಪಾಡುವ ಕುರಿತು ಸಹ ಸಮಾಲೋಚನೆ ನಡೆಸಿದರು.

ಜೋ ಬೈಡನ್ ಸರ್ಕಾರದಲ್ಲಿ ಭಾರತ ಮೂಲದ ನೀರಾ ಟಂಡೆನ್‌ಗೆ ಮುಖ್ಯ ಹುದ್ದೆಜೋ ಬೈಡನ್ ಸರ್ಕಾರದಲ್ಲಿ ಭಾರತ ಮೂಲದ ನೀರಾ ಟಂಡೆನ್‌ಗೆ ಮುಖ್ಯ ಹುದ್ದೆ

'ಅವರಿಬ್ಬರೂ ಕೋವಿಡ್ -19ರ ವಿರುದ್ಧದ ಹೋರಾಟ, ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಸೂಕ್ತ ಯೋಜನೆಗಳನ್ನು ರೂಪಿಸುವುದು, ಹವಾಮಾನ ವೈಪರೀತ್ಯದ ವಿರುದ್ಧ ಹೋರಾಟ, ಸಾರ್ವತ್ರಿಕ ಸಮಸ್ಯೆಗಳು, ಸುಸ್ಥಿರ ಅಭಿವೃದ್ಧಿಯ ಮುನ್ನಡೆ, ಶಾಂತಿ ಮತ್ತು ಸುರಕ್ಷತೆಯನ್ನು ಎತ್ತಿಹಿಡಿಯುವುದು, ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಪ್ರಜಾಪ್ರಭುತ್ವ ಹಾಗೂ ಮಾನವಹಕ್ಕುಗಳನ್ನು ಉತ್ತೇಜಿಸುವುದು ಸೇರಿದಂತೆ ಅನೇಕ ತುರ್ತು ಜಾಗತಿಕ ಅಗತ್ಯಗಳ ಬಗ್ಗೆ ಚರ್ಚಿಸಿದರು' ಎಂದು ಬೈಡನ್-ಹ್ಯಾರಿಸ್ ತಂಡ ತಿಳಿಸಿದೆ.

Joe Biden-Guterres Discusses On Need To Address Many Urgent Global Issues

ನಾಯಿ ಜತೆ ಆಡುವಾಗ ಕಾಲು ಮುರಿದುಕೊಂಡ ಬೈಡನ್ನಾಯಿ ಜತೆ ಆಡುವಾಗ ಕಾಲು ಮುರಿದುಕೊಂಡ ಬೈಡನ್

ಇಥಿಯೋಪಿಯಾದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ನಾಗರಿಕರಿಗೆ ಎದುರಾಗಿರುವ ಅಪಾಯದ ಬಗ್ಗೆ ಕೂಡ ಬೈಡನ್ ಕಳವಳ ವ್ಯಕ್ತಪಡಿಸಿದರು. ಕೊರೊನಾ ವೈರಸ್ ಸೋಂಕು ಹರಡುವ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದರು. ವಿಶ್ವಸಂಸ್ಥೆಯ ಕೆಲವು ಪ್ರಮುಖ ಸಂಸ್ಥೆಗಳಿಂದ ಹಿಂದೆ ಸರಿಯುವುದು ಮತ್ತು ನಿಧಿಯಲ್ಲಿ ಕಡಿತ ಮಾಡುವ ಕ್ರಮಗಳನ್ನು ಕೈಗೊಂಡಿದ್ದರು. ಈಗ ಜೋ ಬೈಡನ್ ಆ ಸಂಬಂಧಗಳನ್ನು ಮರುಜೋಡಿಸುವ ಪ್ರಯತ್ನ ಆರಂಭಿಸಿದ್ದಾರೆ.

English summary
US President elect Joe Biden and UN Secretary General Antonio Guterres discussed the need for a strengthened partnership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X