ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಆಂಟೋನಿ ಬ್ಲಿಂಕೆನ್ ನಾಮನಿರ್ದೇಶನ ಸಂಭವ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 23: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಅತ್ಯಂತ ಪ್ರಮುಖವಾದ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಆಂಟೋನಿ ಬ್ಲಿಂಕೆನ್ ಅವರನ್ನು ನಾಮನಿರ್ದೇಶನ ಮಾಡುವ ನಿರೀಕ್ಷೆಯಿದೆ ಎಂದು ಬೈಡನ್ ಯೋಜನಾ ತಂಡದೊಂದಿಗೆ ನಂಟು ಹೊಂದಿರುವ ವಿವಿಧ ಮೂಲಗಳು ತಿಳಿಸಿವೆ.

ಬರಾಕ್ ಒಬಾಮ ಅವರ ಆಡಳಿತದಲ್ಲಿ ವಿದೇಶಾಂಗ ಉಪ ಕಾರ್ಯದರ್ಶಿಯಾಗಿ ಮತ್ತು ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರಾಗಿ ಕೆಲಸ ಮಾಡಿರುವ 58 ವರ್ಷದ ಬ್ಲಿಂಕೆನ್, ಬೈಡನ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ನಾಮನಿರ್ದೇಶನ ಖಚಿತವಾದರೆ, ನಾಲ್ಕು ವರ್ಷಗಳಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೀರ್ಘಕಾಲದ ಮಿತ್ರದೇಶಗಳನ್ನು ಪ್ರಶ್ನಿಸುವ ಮೂಲಕ ಜಗತ್ತಿನ ಇತರೆ ದೇಶಗಳೊಂದಿಗಿನ ಬದಲಿಸಿದ ಸಂಬಂಧವನ್ನು ಮರುರೂಪಿಸುವ ಪ್ರಯತ್ನದಲ್ಲಿ ಮುಂದಾಳತ್ವ ವಹಿಸಲಿದ್ದಾರೆ.

ಟ್ರಂಪ್ ಸೋಲೊಪ್ಪಿಕೊಳ್ಳದಿದ್ದರೂ ಬೈಡನ್‌ಗೆ 'ಟ್ವಿಟ್ಟರ್' ಅಧಿಕಾರಟ್ರಂಪ್ ಸೋಲೊಪ್ಪಿಕೊಳ್ಳದಿದ್ದರೂ ಬೈಡನ್‌ಗೆ 'ಟ್ವಿಟ್ಟರ್' ಅಧಿಕಾರ

ಸುಸೇನ್ ರೈಸ್ ಮತ್ತು ಸೆನೆಟರ್ ಕ್ರಿಸ್ ಕೂನ್ಸ್ ಅವರನ್ನು ಅಮೆರಿಕದ ಹಿರಿಯ ರಾಜತಾಂತ್ರಿಕರನ್ನಾಗಿ ಅಂತಿಮ ಪಟ್ಟಿಯಲ್ಲಿ ಆಯ್ಕೆ ಮಾಡಿರುವುದಾಗಿ ಹೇಳಲಾಗಿದೆ. ಆದರೆ ರೈಸ್ ಅವರು ರಿಪಬ್ಲಿಕನ್ ಪಕ್ಷದ ವಿರೋಧವನ್ನು ಎದುರಿಸಬಹುದು ಮತ್ತು ಸೆನೆಟ್‌ನಲ್ಲಿ ಅವರ ಆಯ್ಕೆ ತಿರಸ್ಕೃತವಾಗುವ ಸಾಧ್ಯತೆ ಇದೆ. ಏಕೆಂದರೆ ರೈಸ್ ಅವರು ದೀರ್ಘಕಾಲದಿಂದ ರಿಪಬ್ಲಿಕನ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದವರು.

 Joe Biden Expected To Nominate Antony Blinken As Secretary Of State

ಈಗಾಗಲೇ ಸೆನೆಟ್‌ನ ಅನೇಕ ಡೆಮಾಕ್ರಟಿಕ್ ಸಂಸದರು ಆಡಳಿತ ಪದವಿಗಳಿಗೆ ಆಯ್ಕೆ ಮಾಡಿರುವುದರಿಂದ ಸೆನೆಟ್‌ನಿಂದ ಕೂನ್ಸ್ ಅವರು ನಿರ್ಗಮನದೊಂದಿಗೆ ಸೆನೆಟ್‌ನಲ್ಲಿ ಖಾಲಿಯಾಗುವ ಸ್ಥಾನಗಳಿಗೆ ಪಕ್ಷ ಮರು ಆಯ್ಕೆ ಮಾಡುವ ಭರವಸೆ ಹೊಂದಿದೆ.

Recommended Video

ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಲಿದೆ ಎಂದ ಕೋಡಿ ಮಠದ ಶ್ರೀಗಳು | Oneindia Kannada

English summary
Antony Blinken could be nominated as Secretary of State by US president elect Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X