ಅಮೆರಿಕ ಅಧ್ಯಕ್ಷರನ್ನು ಮನೆಯಿಂದ ಹೊರಕಳಿಸುವಂತೆ ಮಾಡಿದ ಪುಟ್ಟ ವಿಮಾನ
ವಾಷಿಂಗ್ಟನ್, ಜೂನ್ 5: ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದ್ದ ಬೀಚ್ ಹೌಸ್ ಮೇಲೆ ಪುಟ್ಟ ಖಾಸಗಿ ವಿಮಾನವೊಂದು ಹಾರಾಡಿ ಕೆಲ ಹೊತ್ತು ಭದ್ರತಾ ಭಯ ಸೃಷ್ಟಿಸಿದ ಘಟನೆ ಅಮೆರಿಕದ ಡೆಲಾವೇರ್ನ ರೆಹೋಬೋತ್ ಬೀಚ್ನಲ್ಲಿ ಶನಿವಾರ ನಡೆದಿರುವುದು ಬೆಳಕಿಗೆ ಬಂದಿದೆ. ನಿಷೇಧಿತ ಪ್ರದೇಶವೆಂದು ಗುರುತಿಸಲಾದರೂ ಆ ಮನೆ ಮೇಲೆ ವಿಮಾನ ಹಾರಾಡಿದ್ದರಿಂದ ಜೋ ಬೈಡನ್ ಮತ್ತು ಅವರ ಪತ್ನಿಯನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಯಿತು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಅಮೆರಿಕ ಅಧ್ಯಕ್ಷರ ಗೃಹ ಕಚೇರಿ ವೈಟ್ ಹೌಸ್, ಈ ಘಟನೆ ದಾಳಿಯತ್ನವಲ್ಲ. ಅಧ್ಯಕ್ಷರು ಮತ್ತು ಅವರ ಪತ್ನಿ ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಸ್ಪೆಲಿಂಗ್ ಬೀ ಗೆದ್ದ ಭಾರತ ಮೂಲದ ಹರಣಿ ಲೋಗನ್
ಜೋ ಬೈಡನ್ ತಮ್ಮ ಪತ್ನಿ ಜೊತೆ ರಜೆಯ ಸಮಯ ಕಳೆಯಲೆಂದು ರೆಹೋಬೋತ್ ಬೀಚ್ಗೆ ಬಂದಿದ್ದರು. ಹೀಗಾಗಿ, ಅವರಿದ್ದ ಬೀಚ್ ಹೌಸ್ ಕಟ್ಟಡದ ಸುತ್ತಮುತ್ತಲ ಪ್ರದೇಶವನ್ನು ಭದ್ರತಾ ದೃಷ್ಟಿಯಿಂದ ನಿಷೇಧಿತ ವಲಯವೆಂದು ಗುರುತಿಸಲಾಗಿತ್ತು. ಅಮೆರಿಕ ಮಿಲಿಟರಿಯ ಸೀಕ್ರೆಟ್ ಸರ್ವಿಸ್ ವಿಭಾಗದ ಒಂದು ತಂಡವನ್ನು ಅಧ್ಯಕ್ಷರ ಭದ್ರತೆಗೆ ನಿಯೋಜಿಸಲಾಗಿತ್ತು.
ಖಾಸಗಿ ವಿಮಾನ ಬಂದದ್ದೇಕೆ?
ಸೀಕ್ರೆಟ್ ಸರ್ವಿಸ್ ನೀಡಿರುವ ಮಾಹಿತಿ ಪ್ರಕಾರ, ಖಾಸಗಿ ವಿಮಾನ ತಪ್ಪಾಗಿ ಆ ನಿಷೇಧಿತ ವಲಯಕ್ಕೆ ಪ್ರವೇಶಿಸಿತ್ತು. ಆ ವಿಮಾನದ ಪೈಲಟ್ ಸರಿಯಾದ ಸಂವಹನ ಹೊಂದಿರಲಿಲ್ಲ. ವಿಮಾನ ಹಾರಾಟಕ್ಕೆ ಹೊರಡಿಸಲಾಗಿದ್ದ ಮಾರ್ಗಸೂಚಿ ಪ್ರಕಾರ ಚಲಾಯಿಸುತ್ತಿರಲಿಲ್ಲ ಎನ್ನಲಾಗಿದೆ. ಸದ್ಯ ಸೀಕ್ರೆಟ್ ಸರ್ವಿಸ್ನವರು ಈ ಪೈಲಟ್ನ ವಿಚಾರಣೆ ನಡೆಸಲಿದ್ದಾರೆಂಬುದು ತಿಳಿದುಬಂದಿದೆ.ರಾಜಧಾನಿ ವಾಷಿಂಗ್ಟನ್ನ ಹೊರಗೆ ಅಧ್ಯಕ್ಷರು ಹೋದರೆ ವೈಮಾನಿಕ ನಿರ್ಬಂಧಿತ ಪ್ರದೇಶ ಇತ್ಯಾದಿ ಮಾಹಿತಿಯನ್ನು ಅಲ್ಲಿನ ವಿಮಾನ ಆಡಳಿತ ನೀಡುತ್ತದೆ. ಅಂತೆಯೇ, ಡೆಲಾವೇರ್ನ ಬೆಹೋಮೋತ್ ಬೀಚ್ನಲ್ಲಿ ಒಂದು ವಾರಕ್ಕೆ ಮುನ್ನ ನಿರ್ಬಂಧ ಕ್ರಮಗಳನ್ನು ತಿಳಿಸಲಾಗಿತ್ತು. ಅಧ್ಯಕ್ಷರು ಇದ್ದ ಮನೆಯ ಸುತ್ತಮುತ್ತಲಿನ ೩೦ ಮೈಲಿ ಪ್ರದೇಶವನ್ನು ನಿರ್ಬಂಧಿತ ಜಾಗವೆಂದು ಗುರುತಿಸಲಾಗಿದೆ. ಇದರಲ್ಲಿ 10 ಮೈಲಿ ಪ್ರದೇಶದಲ್ಲಿ ವೈಮಾನಿಕ ಹಾರಾಟ ನಿಷೇಧಿಸಲಾಗಿತ್ತು.
ಬಾಂಗ್ಲಾದೇಶದ ಕಂಟೇನರ್ ಡಿಪೋದಲ್ಲಿ ಭಾರೀ ಸ್ಫೋಟ: 40ಕ್ಕೂ ಹೆಚ್ಚು ಸಾವು
ಈ ಪ್ರದೇಶದಲ್ಲಿ ವಿಮಾನ ಚಲಾಯಿಸುವ ಪೈಲಟ್ಗಳು ಮೊದಲು ಅಲ್ಲಿ ಏನಾದರೂ ವೈಮಾನಿಕ ನಿರ್ಬಂಧಗಳಿವೆಯಾ ಎಂದು ಪರಿಶೀಲಿಸಬೇಕೆಂಬ ನಿಯಮ ಇದೆ. ಆದರೂ ಕೂಡ ಕೆಲವೊಮ್ಮೆ ಪೈಲಟ್ಗಳು ನಿರ್ಬಂಧಗಳನ್ನು ಮೀರಿ ವಿಮಾನ ಹಾರಿಸುವುದುಂಟು. ತಾತ್ಕಾಲಿಕವಾಗಿ ನಿರ್ಬಂಧ ಪ್ರದೇಶಗಳನ್ನು ಗುರುತಿಸುವುದರಿಂದ ಉಂಟಾಗುವ ಗೊಂದಲ ಮತ್ತು ಅನಿಶ್ಚಿತತೆ ಇದಕ್ಕೆ ಕಾರಣ.
ಯಾವುದೇ ವಿಮಾನವಾದರೂ ನಿರ್ಬಂಧಿತ ಪ್ರದೇಶದಲ್ಲಿ ಹಾರಾಟ ನಡೆಸಿದರೆ ಅದನ್ನು ತಡೆಯಲೆಂದು ವಿಶೇಷ ವಿಮಾನಗಳು ಅಣಿಗೊಂಡಿರುತ್ತವೆ. ಆ ವಿಮಾನವನ್ನು ತಡೆದು ಬೇರೆಡೆಗೆ ಕರೆದೊಯ್ದು ಪೈಲಟ್ಗಳನ್ನು ವಿಚಾರಣೆ ನಡೆಸಲಾಗುತ್ತದೆ. ಇದು ಭದ್ರತಾ ವ್ಯವಸ್ಥೆಯ ಒಂದು ಕ್ರಮ.
(ಒನ್ಇಂಡಿಯಾ ಸುದ್ದಿ)