ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಟ್‌ಹೌಸ್ ಕಚೇರಿ ಡಿಸೈನ್ ಚೇಂಜ್ ಮಾಡಿಸಿದ ಜೋ ಬೈಡನ್..!

|
Google Oneindia Kannada News

ಟ್ರಂಪ್ ಕೈಗೊಂಡ ನಿರ್ಧಾರಗಳು ಹಾಗೂ ಟ್ರಂಪ್ ಒಪ್ಪಂದಗಳಿಗೆ ಒಂದೊಂದಾಗಿ ಎಳ್ಳು-ನೀರು ಬಿಡುತ್ತಿರುವ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಟ್ರಂಪ್‌ಗೆ ಮತ್ತೆ ಶಾಕ್ ನೀಡಿದ್ದಾರೆ. ನಿರ್ಗಮಿತ ಅಧ್ಯಕ್ಷ ಟ್ರಂಪ್ ಅವರಿಗಾಗಿ ವಿನ್ಯಾಸಗೊಳಿಸಿದ್ದ ಕಚೇರಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ವೈಟ್‌ಹೌಸ್‌ನ ಅಧ್ಯಕ್ಷರ ಕಚೇರಿ ಓವಲ್ ಆಫಿಸ್‌ನಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ಅಮೆರಿಕದ ಸ್ವಾತಂತ್ರ್ಯ ಹಾಗೂ ಸಮಾನತೆಗೆ ಹೋರಾಡಿದ ಹೋರಾಟಗಾರರ ಫೋಟೋ ಹಾಗೂ ಪ್ರತಿಮೆಗಳನ್ನ ಬೈಡನ್ ತಮ್ಮ ಕಚೇರಿಯ ವಿನ್ಯಾಸದಲ್ಲಿ ಬಳಸಿದ್ದಾರೆ. ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಹಾಗೂ ಅಮೆರಿಕದ ಆಂತರಿಕ ಯುದ್ಧವನ್ನ ಕೊನೆಗೊಳಿಸಿದ್ದ ಅಬ್ರಾಹಂ ಲಿಂಕನ್ ಸೇರಿದಂತೆ ಹಲವಾರು ನಾಯಕರ ಚಿತ್ರಗಳನ್ನ ವಿನ್ಯಾಸಕ್ಕಾಗಿ ಬಳಸಿದ್ದಾರೆ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್.

ಅಷ್ಟಕ್ಕೂ ಬೈಡನ್ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಟ್ರಂಪ್ ಕೈಗೊಂಡ ನಿರ್ಧಾರಗಳಿಗೆ ಎಳ್ಳು-ನೀರು ಬಿಡುತ್ತಾ ಬಂದಿದ್ದಾರೆ. ಈಗ ಕಚೇರಿಯನ್ನೂ ಪೂರ್ಣವಾಗಿ ಬದಲಾಯಿಸುವ ಮೂಲಕ ಟ್ರಂಪ್‌ಗೆ ಶಾಕ್ ಮೇಲೆ ಶಾಕ್ ಕೊಡ್ತಿದ್ದಾರೆ ಬೈಡನ್.

ಪ್ರತಿಬಾರಿಯೂ ಇದೇ ಬದಲಾವಣೆ

ಪ್ರತಿಬಾರಿಯೂ ಇದೇ ಬದಲಾವಣೆ

ಅಮೆರಿಕದಲ್ಲಿ ಯಾವುದೇ ಅಧ್ಯಕ್ಷ ಅಧಿಕಾರಕ್ಕೆ ಬಂದರೂ, ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಕಚೇರಿಯ ವಿನ್ಯಾಸ ಬದಲಾಯಿಸುತ್ತಾರೆ. ಈ ಹಿಂದೆ ಜಾರ್ಜ್ ಡಬ್ಲ್ಯೂ ಬುಷ್, ಆ ನಂತರ ಬರಾಕ್ ಒಬಾಮಾ, ಬಳಿಕ ಬಂದ ಡೊನಾಲ್ಡ್ ಟ್ರಂಪ್ ಕೂಡ ಓವಲ್ ಆಫಿಸ್‌ನ ಲುಕ್ ಬದಲಾಯಿಸಿದ್ದರು. ಇದೀಗ ಬೈಡನ್ ಸರದಿ, ಟ್ರಂಪ್ ಡಿಸೈನ್ ಮಾಡಿದ್ದ ಕಚೇರಿಯನ್ನ ತಮಗೆ ಬೇಕಾದಂತೆ ಜೋ ಬೈಡನ್ ಬದಲಾಯಿಸಿದ್ದಾರೆ. ಇದಕ್ಕಾಗಿ ವೈಟ್‌ಹೌಸ್‌ನ ವಿನ್ಯಾಸಗಾರರ ನೆರವು ಪಡೆದಿದ್ದಾರೆ ಜೋ ಬೈಡನ್.

200 ವರ್ಷಗಳ ಇತಿಹಾಸ..!

200 ವರ್ಷಗಳ ಇತಿಹಾಸ..!

ವೈಟ್‌ಹೌಸ್ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ವೈಟ್‌ಹೌಸ್ ಕಾಮಗಾರಿ 1792ರಲ್ಲಿ ಶುರುವಾಗಿಯಿತು. ಇದಾದ 1 ವರ್ಷದ ನಂತರ, ಅಂದರೆ 1793ರಲ್ಲಿ ಕ್ಯಾಪಿಟಲ್ ಹಿಲ್ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಹೀಗೆ ಕ್ಯಾಪಿಟಲ್ ಹಿಲ್ ಹಾಗೂ ವೈಟ್‌ಹೌಸ್ ಎರಡೂ ಅಮೆರಿಕದ ಘನತೆಯ ಸಂಕೇತ. ಈ ಎರಡೂ ಕಟ್ಟಡಗಳ ಮಧ್ಯೆ ಕೇವಲ 3 ಕಿಲೋ ಮೀಟರ್ ಅಂತರವಿದೆ. 200ಕ್ಕೂ ಹೆಚ್ಚು ವರ್ಷ ಅಧ್ಯಕ್ಷರು ವೈಟ್‌ಹೌಸ್‌ನಲ್ಲಿಯೇ ವಾಸ್ತವ್ಯ ಹೂಡುತ್ತಾ ಬಂದಿದ್ದಾರೆ. ಹೀಗಾಗಿ ವೈಟ್‌ಹೌಸ್ ಹಾಗೂ ಓವಲ್ ಆಫಿಸ್ ಘನತೆ ಶತಮಾನಗಳಷ್ಟು ಪುರಾತನವಾಗಿದೆ. ವೈಟ್‌ಹೌಸ್‌ನಲ್ಲಿ ಅಧ್ಯಕ್ಷರ ರಕ್ಷಣೆಗೆ ಸೀಕ್ರೇಟ್ ಬಂಕರ್ ಕೂಡ ಲಭ್ಯವಿರುತ್ತದೆ.

ಕಾರ್ಮಿಕ ಹೋರಾಟಗಾರರಿಗೂ ಸ್ಥಾನ

ಕಾರ್ಮಿಕ ಹೋರಾಟಗಾರರಿಗೂ ಸ್ಥಾನ

ಬೈಡನ್ ತಮ್ಮ ಕಚೇರಿಯಲ್ಲಿ ಜನಪರ ಕೆಲಸ ಮಾಡಿದ ಅಧ್ಯಕ್ಷರು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕಾರ್ಮಿಕ ಹೋರಾಟಗಾರರಿಗೂ ವೈಟ್‌ಹೌಸ್‌ನಲ್ಲಿ ಸ್ಥಾನಮಾನ ನೀಡಿದ್ದಾರೆ. ಅಮೆರಿಕದಲ್ಲಿ ಕಾರ್ಮಿಕ ಪರ ಹೋರಾಟದಲ್ಲಿ ಛಾಪು ಮೂಡಿಸಿದ್ದ ಅನೇಕ ನಾಯಕರನ್ನು ವಿನ್ಯಾಸದಲ್ಲಿ ಬಳಸಲಾಗಿದೆ. ಬೈಡನ್ ಕೂಡ ಕಾರ್ಮಿಕರ ಪರ ಕಾಳಜಿ ಉಳ್ಳವರಾಗಿದ್ದಾರೆ. ತಮ್ಮ ನೂತನ ಬಿಲ್‌ಗಳಲ್ಲಿ ಕಾರ್ಮಿಕರಿಗೆ ಅನುಕೂಲವಾಗುವ ಹಲವು ನಿರ್ಧಾರಗಳನ್ನು ಕೈಗೊಳ್ಳಲು ಬೈಡನ್ ಮುಂದಾಗಿದ್ದಾರೆ. ಇದು ಸಂಕಷ್ಟದಲ್ಲಿರುವ ಅಮೆರಿಕನ್ನರ ಮನ ಗೆದ್ದಿದ್ದು, ಬೈಡನ್ ನಿರ್ಧಾರಗಳಿಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಬೈಡನ್ ಬಹುದೊಡ್ಡ ಸವಾಲು..!

ಬೈಡನ್ ಬಹುದೊಡ್ಡ ಸವಾಲು..!

ಛಿದ್ರಗೊಂಡ ಆರ್ಥಿಕತೆ ಹಾಗೂ 4 ಲಕ್ಷಕ್ಕೂ ಅಧಿಕ ಅಮೆರಿಕನ್ನರ ಜೀವ ಬಲಿತೆಗೆದುಕೊಂಡಿರುವ ಕೊರೊನಾ ಪಿಡುಗಿನ ನಡುವೆ ಅಧಿಕಾರಕ್ಕೆ ಬಂದಿರುವ ಬೈಡನ್ ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರಂಪ್ ನೀತಿಗಳಿಂದ ಅಮೆರಿಕ ಅನುಭವಿಸಿದ ಸಂಕಷ್ಟಗಳನ್ನು ಕೂಡ ಬೈಡನ್ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಈಗಾಗಲೇ ಹಲವು ವಿವಾದಾತ್ಮಕ ನಿರ್ಧಾರಗಳನ್ನು ಬೈಡನ್ ಕೈಬಿಟ್ಟಿದ್ದು, ಅಮೆರಿಕ ಎಲ್ಲರಿಗೂ ಮುಕ್ತ ಎಂಬ ಸಂದೇಶ ರವಾನಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗಿನ ಒಡಂಬಡಿಕೆಯನ್ನೂ ಬೈಡನ್ ಮರುಸ್ಥಾಪಿಸಿದ್ದಾರೆ.

English summary
Joe Biden changed the White House office design after he takes the power. Biden team decorated the White House with the pictures of American patriots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X