ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ಎ ಹೊಸ ಸಂಪುಟ: ಜೋ ಬಿಡೆನ್ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ?

|
Google Oneindia Kannada News

ವಾಶಿಂಗ್ಟನ್, ನವೆಂಬರ್.24: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿ ಶುರುವಾಗಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗು ನಿಭಾಯಿಸಲು ಸುಸ್ಥಿರ ಸರ್ಕಾರದ ಅಗತ್ಯತೆಯಿದೆ. ಈ ಅವಶ್ಯಕತೆ ಅರಿತುಕೊಂಡು 306 ಮತಗಳನ್ನು ಪಡೆದ ಬಿಡೆನ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸುವ ಬೆಳವಣಿಗೆಗಳು ನಡೆಸುತ್ತಿವೆ.

ಅಮೆರಿಕಾದ ಅಧ್ಯಕ್ಷೀ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ಸರ್ಕಾರ ರಚನೆಗೆ ಒಂದು ರೂಪುರೇಷೆ ಸಿದ್ಧವಾಗಿದೆ. ಅಮೆರಿಕಾದ ವೈಟ್ ಹೌಸ್ ನಲ್ಲಿ ಯಾರಿಗೆ ಯಾವ ಜವಾಬ್ದಾರಿ ನೀಡಬೇಕು. ಯಾವ ಸದಸ್ಯರಿಗೆ ಯಾವ ಸ್ಥಾನವನ್ನು ನೀಡಬೇಕು ಎನ್ನುವುದರ ಕುರಿತು ಯೋಜನೆ ಹಾಕಿಕೊಳ್ಳಲಾಗುತ್ತಿದೆ.

ಜೋ ಬೈಡನ್ ದುರ್ಬಲ ಅಧ್ಯಕ್ಷ, ಅವರು ಯುದ್ಧಗಳನ್ನು ಸಾರಬಹುದು: ಚೀನಾಜೋ ಬೈಡನ್ ದುರ್ಬಲ ಅಧ್ಯಕ್ಷ, ಅವರು ಯುದ್ಧಗಳನ್ನು ಸಾರಬಹುದು: ಚೀನಾ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಸಂಪುಟ ರಚನೆ ಹಾಗೂ ಜವಾಬ್ದಾರಿಗಳ ಹಂಚಿಕೆಯು ಹೇಗೆ ಆಗಬಹುದು ಎನ್ನುವ ವಿಚಾರವೇ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಆಡಳಿತ ವ್ಯವಸ್ಥೆ ಸುಗಮಗೊಳಿಸಲು ಮುಂದಿನ ದಿನಗಳಲ್ಲಿ ಬಿಡೆನ್ ಮತ್ತಷ್ಟು ಸಂಪುಟ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ನಿರೀಕ್ಷೆಗಳಿವೆ. ಸದ್ಯದ ಮಟ್ಟಿಗೆ ಅಮೆರಿಕಾದಲ್ಲಿ ಯಾರಿಗೆ ಯಾವ ಹುದ್ದೆ ಮತ್ತು ಸಚಿವ ಸ್ಥಾನ ನೀಡಬಹುದು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಭದ್ರತಾ ವಲಯದಲ್ಲಿ ಜೋ ಬಿಡೆನ್ ಆಯ್ಕೆ ಯಾರು?

ಭದ್ರತಾ ವಲಯದಲ್ಲಿ ಜೋ ಬಿಡೆನ್ ಆಯ್ಕೆ ಯಾರು?

1. ಜೋ ಬಿಡೆನ್ ಅವರು ಆಂಟೋನಿ ಬ್ಲಿಂಕನ್ ರನ್ನು ರಾಜ್ಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಬರಾಕ್ ಒಬಾಮಾ ಅಧಿಕಾರವಧಿಯಲ್ಲಿ ರಾಜ್ಯ ಇಲಾಖೆಯ ರಾಷ್ಟ್ರೀಯ ಭದ್ರತಾ ಉಪ-ಸಲಹೆಗಾರರಾಗಿ ಬ್ಲಿಂಕನ್ ಸೇವೆ ಸಲ್ಲಿಸಿದ್ದರು.

2. ಜೋ ಬಿಡೆನ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸ್ಥಾನಕ್ಕೆ ಜಾಕ್ ಸಲ್ಲಿವಾನ್ ಹೆಸರು ಕೇಳಿ ಬಂದಿದೆ. ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಬಿಡೆನ್ ವೈಸ್ ಪ್ರೆಸಿಡೆಂಟ್ ಆಗಿದ್ದರು. ಇದೇ ಅವಧಿಯಲ್ಲಿ ಹಿಲರಿ ಕ್ಲಿಂಟನ್ ನ ರಾಜ್ಯ ಕಾರ್ಯದರ್ಶಿ ಸಿಬ್ಬಂದಿಯ ಉಪ-ಮುಖ್ಯಾಧಿಕಾರಿಯಾಗಿ ಸಲ್ಲಿವಾನ್ ಸೇವೆ ಸಲ್ಲಿಸಿದ್ದರು.

3. ಕ್ಯೂಬಾ ಮೂಲದ ವಕೀಲರಾದ ಅಲೆಜಾಂಡ್ರೊ ಮೇಯರ್ಕಸ್ ಅವರನ್ನು ಭೂ-ಭದ್ರತೆ ಮತ್ತು ರಕ್ಷಣೆಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡುವ ನಿರೀಕ್ಷೆಗಳಿವೆ. ಸೋಮವಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಆದರೆ ದೇಶದಲ್ಲೇ ಈ ಸ್ಥಾನವನ್ನು ಅಲಂಕರಿಸಿದ ಮೊದಲ ವಲಸಿಗರು ಎಂಬ ಖ್ಯಾತಿಯು ಅಲೆಜಾಂಡ್ರೊ ಮೇಯರ್ಕಸ್ ರಿಗೆ ಸಲ್ಲುತ್ತದೆ. ಒಬಾಮಾ ಅಧಿಕಾರವಧಿಯಲ್ಲಿ ಪೌರತ್ವ ಮತ್ತು ವಲಸೆ ಸೇವೆಗಳ ಮುಖ್ಯಸ್ಥರಾಗಿ ಮೇಯರ್ಕಸ್ ಡಿಎಸಿಎ(ಡೆಫರ್ಡ್ ಆಕ್ಷನ್ ಫಾರ್ ಚೈಲ್ಡ್ ವುಡ್ ಅರೈವಲ್ಸ್) ಯೋಜನೆ ರೂಪಿಸಿದ್ದು ವಲಸೆ ಮಕ್ಕಳಲ್ಲಿ ಹೊಸ ಕನಸು ಹುಟ್ಟು ಹಾಕಿತ್ತು. ಆದರೆ ರಿಪಬ್ಲಿಕನ್ ಪಕ್ಷದಲ್ಲಿಯೇ ಈ ಯೋಜನೆಗೆ ವಿರೋಧ ವ್ಯಕ್ತವಾಗಿದ್ದು, ಸೆನಟ್ ನಲ್ಲಿ ಮೇಯರ್ಕಸ್ ಯೋಜನೆಗೆ ಹಿನ್ನಡೆಯಾಗಿತ್ತು.

4. ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕರ ಸ್ಥಾನಕ್ಕೆ ಅವ್ರಿಲ್ ಹೈನಸ್ ಹೆಸರು ಕೇಳಿ ಬಂದಿದೆ. ಒಬಾಮಾ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಉಪ-ಸಲಹೆಗಾರರಾಗಿ ಇವರು ಸೇವೆ ಸಲ್ಲಿಸಿದ್ದರು. ಅಲ್ಲದೇ ಸಿಐಎ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಖ್ಯಾತಿ ಇವರಿಗಿದೆ. ಒಬಾಮಾ ಅಧಿಕಾರವಧಿ ಮುಗಿದ ಬಳಿಕ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವ್ರಿಲ್ ಹೈನಸ್ ರನ್ನು ಇದೀಗ ರಾಷ್ಟ್ರೀಯ ಗುಪ್ತಚರ ಇಲಾಥೆ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳಿವೆ.

5. ಒಕ್ಕೂಟ ರಾಷ್ಟ್ರಗಳ ರಾಯಭಾರಿಯಾಗಿ ಲಿಂದಾ ಥಾಮಸ್ ಗ್ರೀನ್ ಫಿಲ್ಡ್ ರನ್ನು ಆಯ್ಕೆ ಮಾಡುವ ನಿರೀಕ್ಷೆಗಳಿವೆ. ಕಪ್ಪು ವರ್ಣೀಯರು ಎನಿಸಿರುವ ಥಾಮಸ್ ಗ್ರೀನ್ ಫಿಲ್ಡ್ ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ದಕ್ಷಿಣ ಆಫ್ರಿಕಾದ ಪ್ರಮುಖ ರಾಯಭಾರಿ ಎನಿಸಿದ್ದರು. 2013 ರಿಂದ 2017ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಎಬೋಲಾ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಹೆಚ್ಚಾಗಿತ್ತು.

6. ಯುನೈಟೆಡ್ ಸ್ಟೇಟ್ಸ್ ನ ಮಾಜಿ ಸೆನೆಟರ್ ಹಾಗೂ ರಾಜ್ಯ ಕಾರ್ಯದರ್ಶಿಯಾಗಿದ್ದ ಜಾನ್ ಕೆರ್ರಿ ಅವರನ್ನು ಪರಿಸರ ಇಲಾಖೆಗೆ ಸಂಬಂಧಿಸಿದ ವಿಶೇಷ ಅಧಿಕಾರಿಯಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ. ಪ್ಯಾರಿಸ್ ಹವಾಮಾನ ಒಪ್ಪಂದದ ಸಂದರ್ಭದಲ್ಲಿ ಕೆರ್ರಿ ಪ್ರಮುಖ ಪಾತ್ರ ವಹಿಸಿದ್ದು, ಅವರ ಆಯ್ಕೆಗೆ ಕಾರಣವಾಗಲಿದೆ.

ಖಜಾನೆ ಕೀಲಿ ಕೈ ಯಾರ ಯಾರ ಕೈಯಲ್ಲಿ ಇರುತ್ತೆ?

ಖಜಾನೆ ಕೀಲಿ ಕೈ ಯಾರ ಯಾರ ಕೈಯಲ್ಲಿ ಇರುತ್ತೆ?

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಖಜಾನೆ ಕಾಯುವ ಜವಾಬ್ದಾರಿ ಹುದ್ದೆಗೆ ಯಾರಿಗೆ ವಹಿಸಬೇಕು ಎನ್ನುವುದರ ಬಗ್ಗೆ ಜೋ ಬಿಡೆನ್ ಈಗಾಗಲೇ ತೀರ್ಮಾನಿಸಿದ್ದಾರೆ. ಈ ಕುರಿತು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದುಕೊಂಡಿದೆ.

ಅಮೆರಿಕಾದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಮುನ್ನುಡಿಅಮೆರಿಕಾದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಮುನ್ನುಡಿ

1. ಜನೆತ್ ಎಲ್ಲೆನ್: ವಿತ್ತೀಯ ವಲಯದ ಖಜಾನೆ ಕಾರ್ಯದರ್ಶಿ ಸ್ಥಾನಕ್ಕೆ ಇವರೇ ಅಭ್ಯರ್ಥಿ ಎಂದು ನಂಬಲಾಗಿದೆ. ಕೇಂದ್ರ ಬ್ಯಾಂಕಿನಲ್ಲಿ ಕಾರ್ಮಿಕರ ಅಸಮಾನತೆ ಬಗ್ಗೆ ಬೆಳಕು ಚೆಲ್ಲಿದ್ದರು. 2018ರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆಂಟ್ರಲ್ ಬ್ಯಾಂಕಿನ ಮುಖ್ಯಸ್ಥರಾಗಿ ಇವರನ್ನು ಮರುನೇಮಕಗೊಳಿಸಿದ್ದರು.

2. ಲಾಯಲ್ ಬ್ರೈನಾರ್ಡ್: ಇವರು ಫೆಡರಲ್ ರಿಸರ್ವ್ ಬೋರ್ಡ್ ಆಫ್ ಗವರ್ನರ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2009ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

3. ಸಹರಾ ಬ್ಲೂಮ್ ರಸ್ಕಿನ್: ಈ ಹಿಂದೆ ಇವರು ಫೆಡರಲ್ ಗವರ್ನರ್ ಹಾಗೂ ಉಪ ಖಜಾನೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಈ ಉನ್ನತ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳಾ ಅಧಿಕಾರಿ ಎಂದು ಎನಿಸಿದ್ದರು. ಮೇರಿಲ್ಯಾಂಡ್ ನಲ್ಲಿ ವಕೀಲ ಮತ್ತು ಆರ್ಥಿಕ ನಿಯಂತ್ರಕರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ವ್ಯಾನ್ ಗಾರ್ಡ್ ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯಾರ ಹೆಗಲಿಗೆ ರಕ್ಷಣಾ ವಲಯದ ಹೊಣೆ?

ಯಾರ ಹೆಗಲಿಗೆ ರಕ್ಷಣಾ ವಲಯದ ಹೊಣೆ?

1. ಮಿಚೆಲ್ ಫ್ಲೌರ್ನೊಯ್: ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮಾ ಅಧಿಕಾರವಧಿ ಕಾಲದಲ್ಲಿ ಇವರು ರಕ್ಷಣಾ ಇಲಾಖೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಜೋ ಬಿಡೆನ್ ಪ್ರಚಾರದ ಸಂದರ್ಭದಲ್ಲಿ ದೇಶದ ರಕ್ಷಣೆ ಮತ್ತು ಸುರಕ್ಷತೆ ವಿಚಾರಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಿದ್ದರು.

2. ಟಾಮಿ ಡಕ್ವರ್ತ್: ವಿಕಲಚೇತನರಾಗಿದ್ದರೂ ಅಮೆರಿಕಾ ಸಂಸತ್ ನಲ್ಲಿ ಸದಸ್ಯ ಸ್ಥಾನವನ್ನು ಪಡೆದ ಮೊದಲ ಮಹಿಳೆ ಎನಿಸಿದ್ದಾರೆ. 2004ರಲ್ಲಿ ಇರಾಕ್ ರಕ್ಷಣಾ ಅಧಿಕಾರಿ ಆಗಿದ್ದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಇವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು. ಅದಾಗಿಯೂ ಬರಾಕ್ ಒಬಾಮಾ ಅವರ ಮೊದಲ ಅಧಿಕಾರವಧಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಯಾರಿಗೆ ಒಲಿಯುತ್ತೆ ಅಟಾರ್ನಿ ಜನರಲ್ ಹುದ್ದೆ?

ಯಾರಿಗೆ ಒಲಿಯುತ್ತೆ ಅಟಾರ್ನಿ ಜನರಲ್ ಹುದ್ದೆ?

1. ಸ್ಯಾನಿ ಎಟಸ್: ಮಾಜಿ ಡೆಪ್ಯುಟಿ ಅಟಾರ್ನಿ ಜನರಲ್ ಆಗಿ ಇವರು ಸೇವೆ ಸಲ್ಲಿಸಿದ್ದರು. ಡೊನಾಲ್ಡ್ ಟ್ರಂಪ್ ಅಧಿಕಾರವಧಿ ಸಂದರ್ಭದಲ್ಲಿ ಏಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಗೆ ಪ್ರಮಾಣಿಸುವುದಕ್ಕೆ ನಿರ್ಬಂಧಿಸುವ ನಿಟ್ಟಿನಲ್ಲಿ ರಚಿಸಿದ್ದ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಅಸಹಾಕಾರದ ಆರೋಪದಡಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಯುಎಸ್ ಚುನಾವಣೆ: ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡೆನ್ ಅಧಿಕೃತ ಗೆಲುವುಯುಎಸ್ ಚುನಾವಣೆ: ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡೆನ್ ಅಧಿಕೃತ ಗೆಲುವು

2. ಡೌಗ್ ಜೋನ್ಸ್: ಬಲವಾದ ನಾಗರಿಕ ಹಕ್ಕು ದಾಖಲೆಗಳನ್ನು ಹೊಂದಿರುವ ಇವರು 2017ರಲ್ಲಿ ನಡೆಸಿದ ವಿಶೇಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ವರ್ಷ ನಡೆದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಫುಟ್ ಬಾಲ್ ತರಬೇತುದಾರ ಟಾಮಿ ಟ್ಯೂಬರ್ ವಿಲ್ಲೆ ವಿರುದ್ಧ ಸೋಲು ಅನುಭವಿಸಿದ್ದರು.

ಎನರ್ಜಿ ಡಿಪಾರ್ಟ್ ಮೆಂಟ್

ಎನರ್ಜಿ ಡಿಪಾರ್ಟ್ ಮೆಂಟ್

1. ಎಲಿಜಬೆತ್ ಶೆರ್ವುದ್ ರಾಂಡಾಲ: ಜೋ ಬಿಡೆನ್ ಅವರು ಸೆನೆಟ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಇವರು ಮಾಜಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಒಬಾಮಾ ಆಡಳಿತವಧಿಯಲ್ಲಿ ಇಂಧನ ಇಲಾಖೆ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಇವರು ಜಾರ್ಜಿಯಾ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2. ಅರುಣ್ ಮುಜುಂದಾರ್: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಇಂಧನ ಇಲಾಖೆಯ ಮೊದಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅತ್ಯಾಧುನಿಕ ಇಂಧನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2011ರ ಮಾರ್ಚ್ ನಿಂದ 2012ರ ಜೂನ್ ವರೆಗೂ ಇಂಧನ ಇಲಾಖೆಯ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಸ್ಟ್ಯಾಂಡೆರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಆಯ್ಕೆಯಾಗುವ ಮೊದಲು ಇವರು ಆಲ್ಫಾಬೆಟ್ ಇಂಕ್ಸ್ ನಲ್ಲಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

3. ಜಾಯ್ ಇನ್ಸ್ ಲಿ: 2019ರಲ್ಲಿ ಹವಾಮಾನ ಬದಲಾವಣೆಯಿಂದಾಗಿ ಆಯ್ಕೆ ಆಗುವಲ್ಲಿ ಇವರು ವಿಫಲರಾಗಿದ್ದರು. ಆದರೆ ಈ ವರ್ಷ ವಾಶಿಂಗ್ಟನ್ ಗವರ್ನರ್ ಆಗಿ ಮೂರನೇ ಬಾರಿಗೆ ಮರು ಆಯ್ಕೆ ಆಗಿದ್ದಾರೆ. ಇಂಧನ ಶುದ್ಧೀಕರಣ ಮತ್ತು ಇಂಗಾಲ ತೆರಿಗೆಗೆ ಸಂಬಂಧಿಸಿದಂತೆ ಪರಿಸರದ ವಿಚಾರದಲ್ಲಿ ಪರಿಣಾಮಕಾರಿ ಬದಲಾವಣೆಗೆ ಇವರು ಕಾರಣರಾಗಿದ್ದರು.

ಯು.ಎಸ್. ಪರಿಸರ ಸಂರಕ್ಷಣಾ ಸಂಸ್ಥೆ

ಯು.ಎಸ್. ಪರಿಸರ ಸಂರಕ್ಷಣಾ ಸಂಸ್ಥೆ

1. ಹೀಟರ್ ಮಿಕ್ಟೀರ ಟೋನಿ: ಬರಾಕ್ ಒಬಾಮಾ ಅಧಿಕಾರವಧಿಯಲ್ಲಿ ಪರಿಸರ ಸಂರಕ್ಷಣಾ ಸಂಸ್ಥೆಯ ಮಾಜಿ ಪ್ರಾದೇಶಿಕ ಆಡಳಿತಾಧಿಕಾರಿಯಾಗಿ ಇವರು ಸೇವೆ ಸಲ್ಲಿಸಿದ್ದರು. ಮಾಮ್ಸ್ ವಾಯು ನೈರ್ಮಲ್ಯೀಕರಣ ಪಡೆಯಲ್ಲೂ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ. ಕೀನ್ಯಾ, ಫ್ರಾನ್ಸ್, ಪೋರ್ಚುಗಲ್, ನೈಜಿರಿಯಾ ಮತ್ತು ಸೆನೆಗಲ್ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪರಿಸರ ನೈರ್ಮಲ್ಯೀಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

2. ಮೇರಿ ನಿಕೋಲ್ಸ್: ಕ್ಲಿಂಟನ್ ಆಡಳಿತಾವಧಿಯಲ್ಲಿ ಪರಿಸರ ಸಂಕ್ಷಣಾ ಸಂಸ್ಥೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವವನ್ನು ಇವರು ಹೊಂದಿದ್ದಾರೆ. ಕ್ಯಾಲಿಪೋರ್ನಿಯಾದ ವಾಯು ಸಂಪನ್ಮೂಲ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಕೇಂದ್ರ ಗುಪ್ತಚರ ಇಲಾಖೆ:

1. ಮೈಕಲ್ ಮಾರೆಲ್: ಅಮೆರಿಕಾದಲ್ಲಿ ಬರಾಕ್ ಒಬಾಮಾ ಆಡಳಿತದ ಸಂದರ್ಭದಲ್ಲಿ ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಎರಡು ಬಾರಿಯೂ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬೀಕಾನ್ ಗ್ಲೋಬಲ್ ಸ್ಟ್ರಾಟೆಜೀಸ್ ನಲ್ಲಿ ಜಿಯೋ-ಪೊಲಿಟಿಕಲ್ ರಿಸ್ಕ್ ಪ್ರಾಕ್ಟಿಸ್ ನ ಅಧ್ಯಕ್ಷರಾಗಿ ಮೈಕಲ್ ಮಾರೆಲ್ ಸೇವೆ ಸಲ್ಲಿಸುತ್ತಿದ್ದಾರೆ.

ಆರೋಗ್ಯ ಹಾಗೂ ಮಾನವ ಸೇವೆ

ಆರೋಗ್ಯ ಹಾಗೂ ಮಾನವ ಸೇವೆ

1. ವಿವೇಕ್ ಮೂರ್ತಿ: ವೈದ್ಯ ಹಾಗೂ ಸರ್ಜನ್ ಆಗಿರುವ ಇವರು ಕೊರೊನಾವೈರಸ್ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜೋ ಬಿಡೆನ್ ಅವರ ಸಲಹಾ ಸಮಿತಿಯ ಸಹಾಯಕ ಅಧ್ಯಕ್ಷರಾಗಿದ್ದರು. ಇವರಿಗೆ ಆರೋಗ್ಯ ಇಲಾಖೆಯಲ್ಲಿ ಮಹತ್ವದ ಸ್ಥಾನ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

2. ಮ್ಯಾಂಡಿ ಕೊಹೆನ್: ಉತ್ತರ ಕ್ಯಾರೋಲಿನಾದ ಆರೋಗ್ಯ ಮತ್ತು ಮಾನವ ಸೇವಾ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಡಿಮೆ ಆದಾಯವನ್ನು ಹೊಂದಿರುವ ಅಮೆರಿಕಾದ ಪ್ರಜೆಗಳಿಗೆ ಸರ್ಕಾರದ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಮೆಡಿಕೇರ್ ಮತ್ತು ಮೆಡಿಕಾಸಿಡ್ ಸೇವೆಗಳ ಮುಖ್ಯ ನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

3. ಡೇವಿಡ್ ಕೆಸ್ಲೆರ್: ಆಹಾರ ಮತ್ತು ಔಷಧಿ ಇಲಾಖೆಯ ಮಾಜಿ ಆಯುಕ್ತರಾಗಿ ಸೇವೆ ಸಲ್ಲಿಸಿದ ಇವರನ್ನು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿರ್ವಹಣೆಗೆ ಸಂಬಂಧಿಸಿದಂತೆ ಜೋ ಬಿಡೆನ್ ಅವರ ಸಲಹಾ ಸಮಿತಿಯ ಸದಸ್ಯರಾಗಿದ್ದರು.

ಸಿಬ್ಬಂದಿ ಮುಖ್ಯಸ್ಥರ ಸ್ಥಾನಕ್ಕೆ ರೋನ್ ಕ್ಲೈನ್:

ಜೋ ಬಿಡೆನ್ ಅವರ ದೀರ್ಘಾವಧಿಯ ಸಲಹೆಗಾರರಾಗಿ ರೋನ್ ಕ್ಲೈನ್ ಸೇವೆ ಸಲ್ಲಿಸಿದ್ದಾರೆ.

Recommended Video

ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಲಿದೆ ಎಂದ ಕೋಡಿ ಮಠದ ಶ್ರೀಗಳು | Oneindia Kannada

English summary
Joe Biden Cabinet: President Elect Builds His Foreign Policy Team. Know More About US New Cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X