ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿ ಮಾತುಕತೆಗೆ ತಾಲಿಬಾನ್ ಬದ್ಧತೆಯನ್ನು ಪ್ರಶ್ನಿಸಿದ ಜೋ ಬೈಡನ್‌, ಅಶ್ರಫ್‌ ಘನಿ

|
Google Oneindia Kannada News

ವಾಷಿಂಗ್ಟನ್‌, ಜು.24: ಯುಎಸ್ ಅಧ್ಯಕ್ಷ ಜೋ ಬೈಡನ್‌ ಮತ್ತು ಅಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ, ಶುಕ್ರವಾರದ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ. ಯುಎಸ್ ಮತ್ತು ನ್ಯಾಟೋ ಪಡೆಗಳ ನಿರ್ಗಮನದ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನಡೆಸಿರುವ ಕ್ರೂರ ದಾಳಿಯನ್ನು ಮಾತುಕತೆ ನಡೆಸಿ ಇತ್ಯರ್ಥಕ್ಕೆ ಬರುವ ಗುಂಪಿನ ವಾದಕ್ಕೆ ಸರಿ ಹೊಂದುವುದಿಲ್ಲ ಎಂದು ತೀರ್ಮಾನಿಸಿದ್ದಾರೆ. ಹಾಗೆಯೇ ಶಾಂತಿ ಮಾತುಕತೆಗೆ ತಾಲಿಬಾನ್ ಬದ್ಧತೆಯನ್ನು ಪ್ರಶ್ನಿಸಿದ್ದಾರೆ.

ನಾಯಕರ ಫೋನ್‌ ಕರೆ ಬಗ್ಗೆ ವಾಚನಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ವೇತಭವನವು, "ತಾಲಿಬಾನ್‌ನ ಪ್ರಸ್ತುತ ಆಕ್ರಮಣವು ಸಂಘರ್ಷದ ಸಂಧಾನದ ಇತ್ಯರ್ಥವನ್ನು ಬೆಂಬಲಿಸುವ ಚಳವಳಿಯ ಹಕ್ಕಿಗೆ ನೇರ ವಿರೋಧವಾಗಿದೆ ಎಂದು ಅಧ್ಯಕ್ಷ ಬೈಡನ್ ಮತ್ತು ಅಧ್ಯಕ್ಷ ಘನಿ ಒಪ್ಪಿಕೊಂಡಿದ್ದಾರೆ," ಎಂದು ತಿಳಿಸಿದೆ.

ತಾಲಿಬಾನ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರತಾಲಿಬಾನ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರ

"ತಮ್ಮನ್ನು ರಕ್ಷಿಸಿಕೊಳ್ಳಲು ಅಫ್ಘಾನ್‌ ಭದ್ರತಾ ಪಡೆಗಳಿಗೆ ಬೆಂಬಲ ನೀಡುವುದನ್ನು ಮುಂದುವರೆಸುವ ಯುನೈಟೆಡ್ ಸ್ಟೇಟ್ಸ್‌ನ ಬದ್ಧತೆಯನ್ನು ಅಧ್ಯಕ್ಷ ಬೈಡನ್‌ ಪುನರುಚ್ಚರಿಸಿದ್ದಾರೆ," ಎಂದು ನಾಯಕರ ಕರೆಯ ಬಗ್ಗೆ ಶ್ವೇತಭವನ ಮಾಹಿತಿ ನೀಡಿದೆ.

 Joe Biden, Ashraf Ghani question Taliban’s commitment to talks

ಉದ್ದೇಶಿತ ಹತ್ಯೆಗಳು, ನಾಗರಿಕರ ಸ್ಥಳಾಂತರ, ಮೂಲಸೌಕರ್ಯ ಮತ್ತು ಕಟ್ಟಡಗಳ ಹಾನಿಯ ಮೂಲಕ ಮುಗ್ಧ ಜೀವಗಳನ್ನು ಬಲಿಪಡೆಯುವುದನ್ನು ಸಹಿಸಲಾಗದು ಎಂದು ಉಭಯ ನಾಯಕರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಶ್ವೇತಭವನದ ಪ್ರಕಾರ, ಅಫ್ಘಾನ್‌ ಮಹಿಳೆಯರು, ಹುಡುಗಿಯರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಅಫ್ಘಾನಿಸ್ತಾನಕ್ಕೆ ಯು.ಎಸ್. ಬೆಂಬಲ ಮತ್ತು ಸಹಾಯವನ್ನು ಅಮೆರಿಕ ಅಧ್ಯಕ್ಷ ಜೋ ಬಿಡೈನ್‌ ಪುನರುಚ್ಚರಿಸಿದ್ದಾರೆ. ಈ ಗುಂಪುಗಳ ದಬ್ಬಾಳಿಕೆಯ ತಾಲಿಬಾನ್ ಇತಿಹಾಸವನ್ನು ಗಮನಿಸಿದರೆ ಈ ಮಹಿಳೆಯರು, ಯುವತಿಯರು, ಅಲ್ಪಸಂಖ್ಯಾತರ ಸ್ಥಿತಿ ಅತ್ಯಂತ ಶೋಚನೀಯ ಎಂದು ಅಮೆರಿಕ ಗಮನಿಸಿದೆ.

ತಾಲಿಬಾನ್‌ ಜೊತೆ ಮಾತುಕತೆ ವಿಫಲವಾದರೆ ಭಾರತದ ಮಿಲಿಟರಿ ನೆರವು ಕೇಳಬಹುದು: ಅಫ್ಘಾನಿಸ್ತಾನತಾಲಿಬಾನ್‌ ಜೊತೆ ಮಾತುಕತೆ ವಿಫಲವಾದರೆ ಭಾರತದ ಮಿಲಿಟರಿ ನೆರವು ಕೇಳಬಹುದು: ಅಫ್ಘಾನಿಸ್ತಾನ

"ಅಧ್ಯಕ್ಷ ಬೈಡನ್‌, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ಪರವಾಗಿ ಅಫ್ಘಾನ್‌ ನಾಯಕರಲ್ಲಿ ಐಕ್ಯತೆಗಾಗಿ ಮತ್ತು ಅದು ಆಧರಿಸಿದ ಮೌಲ್ಯಗಳಿಗೆ ನಿರಂತರ ಕೆಲಸ ಮಾಡುವಂತೆ ಒತ್ತಾಯಿಸಿದರು. ಭದ್ರತೆ ಮತ್ತು ಶಾಂತಿಯಲ್ಲಿ ತಮ್ಮ ಸಾಮಾನ್ಯ ಆಸಕ್ತಿಯನ್ನು ಬೆಂಬಲಿಸಲು ಅಫ್ಘನ್ನರು ಒಟ್ಟಾಗಿ ಸೇರುವ ಪ್ರಾಮುಖ್ಯತೆಯನ್ನು ಉಭಯ ನಾಯಕರು ಚರ್ಚಿಸಿದರು. ಅಧ್ಯಕ್ಷ ಬೈಡನ್‌ ರಾಜಕೀಯ ಇತ್ಯರ್ಥಕ್ಕೆ ಬೆಂಬಲವಾಗಿ ಯು.ಎಸ್. ರಾಜತಾಂತ್ರಿಕ ಒಪ್ಪಂದವನ್ನು ಮುಂದುವರೆಸಿದ್ದಾರೆ ಎಂದು ಒತ್ತಿಹೇಳಿದ್ದಾರೆ," ಎಂದು ವಾಚನಗೋಷ್ಠಿಯು ವಿವರಿಸಿದೆ.

ಇಡೀ ಅಫ್ಘಾನಿಸ್ತಾನವನ್ನು ನಿಯಂತ್ರಿಸುವ ಏಕೀಕೃತ ಸರ್ಕಾರವು ಇರಲಿದೆ ಎಂಬುದು "ಹೆಚ್ಚು ಅಸಂಭವ" ಎಂದು ಜುಲೈನಲ್ಲಿ, ಬೈಡನ್‌ ಹೇಳಿದ್ದಾರೆ.

Recommended Video

ಭಾರತಕ್ಕೆ ಪಾಕ್ ಶರಣಾದ ಫೋಟೋ ಹಂಚಿಕೊಂಡು ಟಾಂಗ್ ಕೊಟ್ಟ ಅಫ್ಘಾನಿಸ್ತಾನ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
U.S President Joe Biden and Afghan President Ashraf Ghani have, during a Friday phone call, question Taliban’s commitment to talks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X