ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತರ ಮೇಲೆ ರೇಗಾಡಿ ಬಳಿಕ ಕ್ಷಮೆ ಕೇಳಿದ ಜೋ ಬೈಡನ್

|
Google Oneindia Kannada News

ವಾಷಿಂಗ್ಟನ್, ಜೂನ್ 18: ಯಾವಾಗಲೂ ಸೌಮ್ಯ ಸ್ವಭಾದಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪತ್ರಕರ್ತರೊಬ್ಬರ ಮೇಲೆ ರೇಗಾಡಿ ಬಳಿಕ ಕ್ಷಮೆ ಕೇಳಿರುವ ಘಟನೆ ವರದಿಯಾಗಿದೆ.

ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕೋಪಗೊಂಡ ಬೈಡನ್ ಆಕ್ರೋಶ ಭರಿತವಾಗಿ ಮಾತನಾಡಿದ್ದರು.

ಹೊಸದು ಏನಿಲ್ಲ ಗುರೂ..! ಹಳೇ ಮಡಿಕೆಗೆ ಹೊಸ ತೇಪೆ ಹಾಕಿದ ಬೈಡನ್..!ಹೊಸದು ಏನಿಲ್ಲ ಗುರೂ..! ಹಳೇ ಮಡಿಕೆಗೆ ಹೊಸ ತೇಪೆ ಹಾಕಿದ ಬೈಡನ್..!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮೊದಲ ಶೃಂಗಸಭೆ ನಡೆಸಿದ ನಂತರ ನಡೆದ ಮಾಧ್ಯಮಗಳ ಸಮಾವೇಶದಲ್ಲಿ ಬೈಡನ್ ಮಾತನಾಡುತ್ತಿದ್ದಾಗ ಈ ಘಟನೆ ನಡೆಯಿತು. ಬಳಿಕ ಅವರು ಆ ವರದಿಗಾರನಿಗೆ ಕ್ಷಮೆಯಾಚಿಸಿದರು.

Joe Biden Apologises After Losing His Temper With Reporter

ನಿಜಕ್ಕೂ ಬೈಡನ್ ಕೋಪಗೊಳ್ಳಲು ವರದಿಗಾರ ಕೇಳಿದ ಪ್ರಶ್ನೆ ಏನಾಗಿತ್ತು?: ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಭೆಯ ಬಳಿಕ ನಡೆದ ಮಾಧ್ಯಮ ಗೋಷ್ಠಿಯಲ್ಲಿ, ಸಿಎನ್ಎನ್ ಶ್ವೇತಭವನದ ವರದಿಗಾರ ಕೈಟ್ಲಾನ್ ಕಾಲಿನ್ಸ್ ಈ ಶೃಂಗಸಭೆ ನಂತರ ಪುಟಿನ್ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಲಿದ್ದಾರೆಯೇ ಎಂಬ ವಿಶ್ವಾಸವಿದೆಯೇ ಎಂದು ಪದೇ ಪದೇ ಪ್ರಶ್ನೆ ಕೇಳಿದರು.

ಸೈಬರ್ ದಾಳಿ, ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತ ಪ್ರಶ್ನೆಗಳಿಗೆ ಪುಟಿನ್ ಅವರಿಂದ ಸೂಕ್ತ ಉತ್ತರ ಬಂದಿಲ್ಲ. ಹಾಗಾಗಿ ಶೃಂಗಸಭೆ ರಚನಾತ್ಮಕ ಸಭೆ ಹೇಗಾಗುತ್ತದೆ ಎಂದು ವರದಿಗಾರ ಪ್ರಶ್ನೆಗಳ ಸರಣಿಯನ್ನೇ ಕೇಳಿದರು. ಇದರಿಂದ ವ್ಯಗ್ರಗೊಂಡ ಬೈಡನ್ ವರದಿಗಾರನ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಕಾರ್ಯಸೂಚಿ ರಷ್ಯಾ ಅಥವಾ ಬೇರೆ ದೇಶಗಳ ವಿರುದ್ಧವಲ್ಲ, ಇದು ಕೇವಲ ಅಮೆರಿಕ ಹಿತಾಸಕ್ತಿಗಾಗಿ ಮಾತ್ರ ಎಂದು ಬೈಡನ್ ಹೇಳಿದರು. ಮಾಧ್ಯಮ ಸಭೆಯ ಕೊನೆಯಲ್ಲಿ ಹೊರ ನಡೆಯುತ್ತಿದ್ದ ಬೈಡನ್ ಮತ್ತೆ ಹಿಂದೆ ಸರಿದು ಆ ವರದಿಗಾರನಿಗೆ ಕ್ಷಮೆಯಾಚಿಸಿದರು.

ಬೈಡನ್ ಉತ್ತರಿಸಿ, ''ಅವರು ತಮ್ಮ ನಡವಳಿಕೆ ಬದಲಾಯಿಸಿಕೊಳ್ಳುತ್ತಾರೆ ಎಂಬ ಬಗ್ಗೆ ನನಗೆ ನಂಬಿಕೆಯಿಲ್ಲ. ನನಗೆ ವಿಶ್ವಾಸವಿದೆ ಎಂದು ನಾನು ಯಾವಾಗ ಹೇಳಿದ್ದೇನೆ? ಎಂದು ವರದಿಗಾರನಿಗೆ ಮರು ಪ್ರಶ್ನೆ ಹಾಕಿದರು. ನಾನು ಯಾವುದನ್ನೂ ನಂಬುವುದಿಲ್ಲ. ನಾನು ಒಂದು ವಾಸ್ತವವನ್ನು ಹೇಳಿದ್ದೇನೆ. ನಿಮಗೆ ಅರ್ಥವಾಗದಿದ್ದರೆ ನಾನೇನು ಮಾಡಲು ಸಾಧ್ಯವಿಲ್ಲ'' ಎಂದು ಅಸಹನೆ ವ್ಯಕ್ತಪಡಿಸಿದರು.

English summary
US President Joe Biden has apologised to a journalist after losing his temper as she questioned his optimistic view about his summit meeting with Russian leader Vladimir Putin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X