ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಅಧ್ಯಕ್ಷೀಯ ಚುನಾವಣೆ ಟ್ರಂಪ್ ಗೆ ಸವಾಲೆಸೆಯಲು ಬಿಡೆನ್ ಸಜ್ಜು

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 25: 2020ರ ಚುನಾವಣೆಗೆ ಸಜ್ಜಾಗುತ್ತಿರುವ ಅಮೆರಿಕದಲ್ಲಿ ಈಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಯಾರು ಸ್ಪರ್ಧಿ ಎಂಬುದು ಚರ್ಚಾ ವಿಷಯವಾಗಿದೆ. ಯುನೈಟೆಡ್ ಸ್ಟೇಟ್ಸ್ ನ ಮಾಜಿ ಉಪಾಧ್ಯಕ್ಷ ಜೋಸೆಫ್ ಅರ್. ಬಿಡೆನ್ ಅವರು ಅವರು ಡೆಮೊಕ್ರಾಟಿಕ್ ಪಕ್ಷದಿಂದ ಸ್ಪರ್ಧಿಸಿ, ಟ್ರಂಪ್ ಎದುರಿಸಲು ಸಿದ್ಧ ಎಂದು ಘೋಷಿಸಿದ್ದಾರೆ.

ಗುರುವಾರ(ಏಪ್ರಿಲ್ 25)ರ ಬೆಳಗ್ಗೆ ಚುನಾವಣಾ ಪ್ರಚಾರ ಭಾಷಣ ಮಾಡಿದ ಬಿಡೆನ್, ರಾಷ್ಟ್ರದ ಮೂಲ ಸತ್ವ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ, ವಿಶ್ವದಲ್ಲಿ ನಮ್ಮ ರಾಷ್ಟ್ರದ ಸ್ಥಾನಮಾನ ಎಲ್ಲವೂ ಈಗ ಆತಂಕದ ಸ್ಥಿತಿಯಲ್ಲಿದೆ. ನಾನು ಇಂದು ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗುತ್ತಿದ್ದೇನೆ ಎಂದು ಘೋಷಿಸಲು ಹರ್ಷವಾಗುತ್ತಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ವಿಶ್ವದ ಅತಿ ದುಬಾರಿ ವಿಚ್ಛೇದನ: ಅಮೆಜಾನ್ ದಂಪತಿ ದೂರ ದೂರ ವಿಶ್ವದ ಅತಿ ದುಬಾರಿ ವಿಚ್ಛೇದನ: ಅಮೆಜಾನ್ ದಂಪತಿ ದೂರ ದೂರ

ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಡೆನ್ ಅವರ ಉಮೇದುವಾರಿಕೆಗೆ ಹಲವರ ಬೆಂಬಲ ಸಿಗುವ ನಿರೀಕ್ಷೆಯಿದೆ. 1988 ಹಾಗೂ 2008ರಲ್ಲೂ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಯಾಗಿದ್ದ ಬಿಡೆನ್ ಅವರಿಗೆ ಯಶಸ್ಸು ಸಿಕ್ಕಿರಲಿಲ್ಲ.

Joe Biden announces 2020 President run

ಈ ನಡುವೆ, ಅಮೆರಿಕದ ಮಾಜಿ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್ ಅವರು 2020ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಬಂದಿದ್ದ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ.

ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಹಿಲ್ಲರಿ ಕ್ಲಿಂಟನ್ ರಿಂದ ಸ್ಪಷ್ಟನೆ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಹಿಲ್ಲರಿ ಕ್ಲಿಂಟನ್ ರಿಂದ ಸ್ಪಷ್ಟನೆ

ಈ ನಡುವೆ 2016ರಲ್ಲಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು, ಟಿಕೆಟ್ ಸಿಗದೆ ಕ್ಲಿಂಟನ್ ಗೆ ಸ್ಪರ್ಧೆ ಅವಕಾಶ ಮಾಡಿಕೊಟ್ಟಿದ್ದ ಬೆರ್ನಿ ಸ್ಯಾಂಡರ್ಸ್ ಅವರು 2020ರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಡೆಮೊಕ್ರಾಟಿಕ್ ಪಕ್ಷದಿಂದ ಸ್ಪರ್ಧೆಗಿಳಿಯುವ ಸುದ್ದಿಯೂ ಇದೆ.

English summary
Former United States Vice President Joseph R Biden has officially announced that he would seek the Democratic nomination to challenge President Trump in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X