ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ ಬೈಡನ್: ಎಚ್‌-1ಬಿ ವೀಸಾ ನಿರ್ಬಂಧ ವಿಸ್ತರಣೆ ಇಲ್ಲ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 1: ಭಾರತದ ಐಟಿ ಉದ್ಯೋಗಿಗಳಿಗೆ ಅಮೆರಿಕದ ಜೋ ಬೈಡನ್ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮುಖ್ಯವಾಗಿ ಎಚ್‌-1ಬಿ ವೀಸಾದಾರರು ಸೇರಿದಂತೆ ವಿದೇಶಿ ಉದ್ಯೋಗಿಗಳ ಮೇಲೆ ನಿಷೇಧ ವಿಧಿಸಿ ಡೊನಾಲ್ಡ್ ಟ್ರಂಪ್ ಸರ್ಕಾರ ಹೊರಡಿಸಿದ್ದ ಆದೇಶದ ಅವಧಿ ಅಂತ್ಯಗೊಂಡಿದ್ದು, ಬೈಡನ್ ಆಡಳಿತ ಅದನ್ನು ಮುಂದುವರಿಸದೆ ಇರಲು ನಿರ್ಧರಿಸಿದೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಅಮೆರಿಕದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹಾಗೂ ಜಾಗತಿಕ ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾತ್ಕಾಲಿಕ ಅಥವಾ ವಲಸೆಯೇತರ ವೀಸಾ ವರ್ಗದ ಅರ್ಜಿದಾರರ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಇದರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವ ಎಚ್‌-1ಬಿ ವೀಸಾ ಕೂಡ ಒಳಗೊಂಡಿತ್ತು.

ಅಮೆರಿಕದ ಕಠಿಣ ಪ್ರತೀಕಾರದ ಕ್ರಮ: ಸೌದಿ ಜನರ ಮೇಲೆ ನಿರ್ಬಂಧ, ವೀಸಾ ನಿಷೇಧಅಮೆರಿಕದ ಕಠಿಣ ಪ್ರತೀಕಾರದ ಕ್ರಮ: ಸೌದಿ ಜನರ ಮೇಲೆ ನಿರ್ಬಂಧ, ವೀಸಾ ನಿಷೇಧ

ಈ ವೀಸಾಗಳು ಆರ್ಥಿಕ ಚೇತರಿಕೆಯ ವೇಳೆ ಅಮೆರಿಕದ ಕಾರ್ಮಿಕ ಮಾರುಕಟ್ಟೆಗೆ ದೊಡ್ಡ ಅಪಾಯ ಉಂಟುಮಾಡುತ್ತಿವೆ ಎಂದು ಟ್ರಂಪ್ ಆಡಳಿತ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

Joe Biden Administration Not Extending H1B Visa Ban Order

ತಮ್ಮ ಅಧಿಕಾರಾವಧಿ ಮುಗಿಯುವ ಕೆಲವೇ ದಿನ ಮೊದಲು, ಕಳೆದ ವರ್ಷದ ಡಿಸೆಂಬರ್ 31ರಂದು ಡೊನಾಲ್ಡ್ ಟ್ರಂಪ್ ಈ ನಿಷೇಧವನ್ನು ಮಾರ್ಚ್ 31, 2021ರವರೆಗೂ ವಿಸ್ತರಿಸಿ ಆದೇಶಿಸಿದ್ದರು. ಸಾಂಕ್ರಾಮಿಕವು ಅಮೆರಿಕದ ಜೀವನವನ್ನು ಹಾಳುಗೆಡಿಸುವುದು ಮುಂದುವರಿದಿದೆ. ಅಧಿಕ ಮಟ್ಟದ ನಿರುದ್ಯೋಗ ಹಾಗೂ ಉದ್ಯೋಗ ನಷ್ಟಗಳು ಮುಂದುವರಿದಿದ್ದು, ಅಮೆರಿಕದೆಲ್ಲೆಡೆ ಗಂಭೀರ ಸವಾಲು ಉಂಟುಮಾಡುತ್ತಿದೆ ಎಂದು ಟ್ರಂಪ್ ಹೇಳಿದ್ದರು.

ಟ್ರಂಪ್ ಕಾಲದ ಗ್ರೀನ್ ಕಾರ್ಡ್ ನಿಷೇಧ ಹಿಂಪಡೆದ ಬೈಡನ್ಟ್ರಂಪ್ ಕಾಲದ ಗ್ರೀನ್ ಕಾರ್ಡ್ ನಿಷೇಧ ಹಿಂಪಡೆದ ಬೈಡನ್

ಈ ಆದೇಶವು ಮಾರ್ಚ್ 31ರಂದು ಅಂತ್ಯಗೊಂಡಿದ್ದು, ಅದನ್ನು ಮತ್ತೆ ವಿಸ್ತರಿಸಲು ಬೈಡನ್ ಆಡಳಿತ ಯಾವುದೇ ಹೊಸ ಆದೇಶ ಹೊರಡಿಸಿಲ್ಲ. ಟ್ರಂಪ್ ಆಡಳಿತದ ವಲಸೆ ನೀತಿಗಳು ಕ್ರೂರವಾಗಿವೆ. ಹೀಗಾಗಿ ಎಚ್‌-1ಬಿ ವೀಸಾ ಅಮಾನತನ್ನು ಹಿಂದಕ್ಕೆ ಪಡೆಯುವುದಾಗಿ ಜೋ ಬೈಡನ್ ಭರವಸೆ ನೀಡಿದ್ದರು.

English summary
joe Biden administration in America has not extended the ban on H-1B visa and other foreign workers visas put by Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X