ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಡೋಸ್: ಜಾನ್ಸನ್&ಜಾನ್ಸನ್ ಕೊರೊನಾ ಲಸಿಕೆಯ ಭರವಸೆಯ ಫಲಿತಾಂಶ

|
Google Oneindia Kannada News

ನ್ಯೂಯಾರ್ಕ್, ಜುಲೈ 31: ಜಾನ್ಸನ್ ಆಂಡ್ ಜಾನ್ಸನ್ ತಯಾರಿಸಿರುವ ಕೊರೊನಾ ಲಸಿಕೆಯನ್ನು ಸೋಂಕು ತಗುಲಿದ್ದ ಕೋತಿಗಳ ಮೇಲೆ ಪ್ರಯೋಗಿಸಲಾಗಿದ್ದು, ಭರವಸೆಯ ಫಲಿತಾಂಶ ಲಭ್ಯವಾಗಿದೆ.

ಕೊವಿಡ್-19 ನಿವಾರಣೆಗೆ ಜಾಗತಿಕ ಹೆಲ್ತ್ ಕೇರ್ ಸಂಸ್ಥೆ ಜಾನ್ಸನ್ ಆಂಡ್ ಜಾನ್ಸನ್ ತಯಾರಿಸಿರುವ ಲಸಿಕೆ ಜಗತ್ತಿನ ಗಮನ ಸೆಳೆಯುತ್ತಿದೆ. ಇದೀಗ ಮನುಷ್ಯರ ಮೇಲೂ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟ: 55,079 ಸೋಂಕಿತರು ಪತ್ತೆಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟ: 55,079 ಸೋಂಕಿತರು ಪತ್ತೆ

ಜನವರಿ ತಿಂಗಳಲ್ಲಿ ಚೀನಾ ಸಾರ್ಸ್-ಸಿಒವಿ-2 ಜಿನೋಮ್ ನ್ನು ಬಿಡುಗಡೆ ಮಾಡಿದಾಗಿನಿಂದಲೂ ಡಾನ್ ಎಚ್. ಬರೂಚ್ ಕೊವಿಡ್-19 ಲಸಿಕೆ ಅಭಿವೃದ್ಧಿಪಡಿಸುವುದರಲ್ಲಿ ಮಗ್ನರಾಗಿದ್ದರು.

J&J Starts Human Study Of COVID-19 vaccine After Promising Monkey Data

ಸಂಸ್ಥೆ ತಯಾರಿಸಿರುವ ಲಸಿಕೆಯನ್ನು ಸಾರ್ಸ್-ಸಿಒವಿ-2 ಸೋಂಕು ತಗುಲಿರುವ ಕೋತಿಗಳ ಮೇಲೆ ಪ್ರಯೋಗಿಸಲಾಗಿದ್ದು ಒಂದೇ ಡೋಸ್ ಗೆ ದೃಢವಾದ ರಕ್ಷಣೆ ನೀಡಿದ್ದು ಸೋಂಕು ಗುಣಮುಖವಾಗುತ್ತಿರುವ ಲಕ್ಷಣಗಳು ಗೋಚರಿಸಿವೆ ಎಂದು ತಿಳಿದುಬಂದಿದೆ.

ರೀಸಸ್ ಮಕಾಕ್ ಗಳಿಗೆ ಈ ಲಸಿಕೆ ಪ್ರಯೋಗಿಸಲಾಗಿದ್ದು, ಅದನ್ನೇ ಈಗ ಮಾನವರ ಮೇಲೂ ಪ್ರಯೋಗಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅಧ್ಯಯನದಲ್ಲಿ ತೊಡಗಿದ್ದ ಸಂಶೋಧಕ ಯುಎಸ್ ನಲ್ಲಿರುವ ಬೆತ್ ಇಸ್ರೇಲ್ ಡಿಕಾನೆಸ್ ಮೆಡಿಕಲ್ ಸೆಂಟರ್ ನ ಡಾನ್ ಎಚ್. ಬರೂಚ್ ಹೇಳಿದ್ದಾರೆ.

ಅಡೆನೊವೈರಸ್ ಸಿರೊಟೈಪ್ 26 ಎಂಬ ಸಾಮಾನ್ಯ ಶೀತದ ವೈರಾಣು ವನ್ನು ಸಾರ್ಸ್-ಸಿಒವಿ-2 ಸ್ಪೈಕ್ ಪ್ರೊಟೀನ್ ನ್ನು ಹೋಸ್ಟ್ ಸೆಲ್ ಗಳಿಗೆ ರವಾನಿಸುತ್ತದೆ. ಇದರಿಂದಾಗಿ ಕೊರೋನಾ ವಿರುದ್ಧದ ರೋಗನಿರೋಧಕ ಶಕ್ತಿ ಹೆಚ್ಚಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Johnson & Johnson on Thursday kicked off U.S. human safety trials for its COVID-19 vaccine after releasing details of a study in monkeys that showed its best-performing vaccine candidate offered strong protection in a single dose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X