ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್‌ನಲ್ಲಿ ನಡೆದ ಡ್ರೋನ್ ದಾಳಿ ನಮ್ಮಿಂದ ನಡೆದ ತಪ್ಪೆಂದು ಒಪ್ಪಿಕೊಂಡ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 18: ಕಾಬೂಲ್‌ನಲ್ಲಿ ಕಳೆದ ತಿಂಗಳು ನಡೆಸಿದ ಡ್ರೋನ್ ದಾಳಿ ನಮ್ಮಿಂದ ನಡೆದ ತಪ್ಪು ಎಂದು ಅಮೆರಿಕ ಒಪ್ಪಿಕೊಂಡಿದೆ.

ಕಾಬುಲ್ ಏರ್ ಪೋರ್ಟ್ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಐಎಸ್‌ಐಎಸ್‌-ಕೆ ಉಗ್ರರನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗಿದ್ದ ಡ್ರೋನ್ ದಾಳಿಯಲ್ಲಿ 10 ಮಂದಿ ನಾಗರಿಕರು ಮೃತಪಟ್ಟಿದ್ದರು. ಅವರಲ್ಲಿ ಏಳು ಮಂದಿ ಮಕ್ಕಳು ಕೂಡ ಸೇರಿದ್ದಾರೆ.

ಕಾಬೂಲ್ ಏರ್‌ಪೋರ್ಟ್ ಬಳಿ ಅಮೆರಿಕ ಡ್ರೋನ್ ದಾಳಿ 10 ಮಂದಿ ಸಾವುಕಾಬೂಲ್ ಏರ್‌ಪೋರ್ಟ್ ಬಳಿ ಅಮೆರಿಕ ಡ್ರೋನ್ ದಾಳಿ 10 ಮಂದಿ ಸಾವು

ಆದಾಗ್ಯೂ, 13 ಸೈನಿಕರು, ನಾವಿಕರು ಮತ್ತು ನೌಕಾಪಡೆಗಳು ಮತ್ತು 100 ಕ್ಕೂ ಹೆಚ್ಚು ನಾಗರಿಕರನ್ನು ಕೊಂದ ಐಸಿಸ್-ಕೆ ದಾಳಿಯ ನಂತರ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಡ್ರೋನ್ ದಾಳಿಯನ್ನು ಪರಿಗಣಿಸಬೇಕು ಎಂದಿದ್ದಾರೆ.

It Was A Mistake: US Admits 10 Civilians Killed In Kabul Drone Strike

ಅಲ್ಲದೆ, ಮತ್ತೊಂದು ದಾಳಿ ನಡೆಯುವ ಸಾಕಷ್ಟು ಸಾಧ್ಯತೆಯನ್ನು ಗುಪ್ತಚರ ಇಲಾಖೆ ತಿಳಿಸಿತ್ತು. ತನಿಖೆ ನಡೆಸಿದ ಬಳಿಕ ಸಾಕಷ್ಟು ವಿಶ್ಲೇಷಣೆ ನಡೆಸಿದ ಬಳಿಕ ಕಂಡುಬಂದ ವಿಷಯ ಏಳು ಮಕ್ಕಳು ಸೇರಿದಂತೆ 10 ಮಂದಿ ನಾಗರಿಕರು ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು. ಅದು ನಮ್ಮ ಕಡೆಯಿಂದ ಆದ ತಪ್ಪು. ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ.

ಮಿಲಿಟರಿ ಕಮಾಂಡರ್ ಆಗಿ, ಈ ಡ್ರೋನ್ ದಾಳಿಗೆ ನಾನೇ ಸಂಪೂರ್ಣ ಹೊಣೆಯಾಗಿದ್ದು ನಾಗರಿಕರ ಸಾವಿಗೂ ನಾವೇ ಕಾರಣ, ಅವರ ಕುಟುಂಬಸ್ಥರಿಗೆ ನಮ್ಮ ಸಂತಾಪಗಳು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಆಗಸ್ಟ್ 29ರ ಡ್ರೋನ್ ಸ್ಟ್ರೈಕ್ ನ ತನಿಖೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅಮೆರಿಕ ಕೇಂದ್ರ ಕಮಾಂಡ್ ನ ಉನ್ನತ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಜಿ, ವಾಹನ ಮತ್ತು ಡ್ರೋನ್ ದಾಳಿಯಲ್ಲಿ ಮೃತಪಟ್ಟವರು ಐಸಿಸ್-ಕೆ ಜೊತೆ ಸಂಬಂಧ ಹೊಂದಿದ್ದಿರಬಹುದು ಅಥವಾ ಯುಎಸ್ ಪಡೆಗಳಿಗೆ ನೇರ ಬೆದರಿಕೆಯಾಗಿದ್ದಿರಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಬಗ್ಗೆ ಯುಎಸ್​ ಭದ್ರತಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಕೂಡ ಕ್ಷಮೆ ಕೇಳಿದ್ದಾರೆ. ಅಂದಿನ ದಾಳಿಯಲ್ಲಿ 10 ನಾಗರಿಕರು ಮೃತಪಟ್ಟಿದ್ದಾರೆ. ಈ ಸಾವಿನ ಬಗ್ಗೆ ತೀವ್ರ ಸಂತಾಪವಿದೆ. ಅವರ ಕುಟುಂಬಗಳಿಗೆ ನಮ್ಮ ಸಾಂತ್ವನಗಳು. ಹಾಗೇ ಘಟನೆಯಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆಯೂ ನಾವು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆಗಸ್ಟ್​​ ಕೊನೇ ವಾರದಲ್ಲಿ ಅಮೆರಿಕದ ಯೋಧರು ತಮ್ಮ ದೇಶದ ನಾಗರಿಕರನ್ನು ಸ್ಥಳಾಂತರ ಮಾಡುವ ಕೆಲಸದಲ್ಲಿ ತೊಡಗಿದ್ದರೆ, ಐಸಿಸ್​-ಕೆ ಉಗ್ರರು ಆ ಸೈನಿಕರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದರು. ಇದರಲ್ಲಿ ಯುಎಸ್​ನ ಸುಮಾರು 10 ಯೋಧರು ಮೃತಪಟ್ಟಿದ್ದರು.

ಅದಕ್ಕೆ ಪ್ರತಿಯಾಗಿ ಅಮೆರಿಕ ಸೇನೆ ಆಗಸ್ಟ್​ 29ರಂದು ಡ್ರೋನ್​ ದಾಳಿ ನಡೆಸಿತ್ತು. ವಿಮಾನ ನಿಲ್ದಾಣದ ಬಳಿಯಿರುವ ಒಂದು ಬಿಳಿಬಣ್ಣದ ಟೊಯೊಟಾ ವಾಹನ ಗುರಿಯಾಗಿಸಿ ಮಾಡಿದ್ದ ದಾಳಿಯಲ್ಲಿ ಮಕ್ಕಳೂ ಸೇರಿ 10 ಮಂದಿ ಮೃತಪಟ್ಟಿದ್ದರು. ಆದರೆ ಇವರು ಮುಗ್ಧ ನಾಗರಿಕರಾಗಿದ್ದಾರೆ. ಅದನ್ನೀಗ ಅಮೆರಿಕವೇ ಒಪ್ಪಿಕೊಂಡು ಕ್ಷಮೆ ಕೇಳಿದೆ.

ಕಳೆದ ತಿಂಗಳು ಕಾಬೂಲ್ ನಲ್ಲಿ ಅಮೆರಿಕ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ ಉಗ್ರ ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿತ್ತು. ಆದರೆ ಇದೀಗ ಆ ದಾಳಿಯಲ್ಲಿ ಸತ್ತಿದ್ದು ಉಗ್ರ ಅಲ್ಲ, ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಗೆ ತುಂಬಾ ಸಹಾಯ ಮಾಡಿದ್ದ ವ್ಯಕ್ತಿ ಎಂಬ ಮಾಹಿತಿ ಹೊರಬಂದಿದೆ.

ಡ್ರೋನ್ ದಾಳಿಯಲ್ಲಿ ಝೆಮೆರಾಯ್ ಅಹಮದಿ ಎಂಬ ಅಫ್ಘನ್ ನಾಗರಿಕ ಮೃತಪಟ್ಟಿದ್ದ. ಇದೀಗ ಆತನ ಜೊತೆ ಕೆಲಸ ನಿರ್ವಹಿಸಿದ ಅಮೆರಿಕನ್ನರು ಅಮೆರಿಕ ಸೇನೆಯ ಕೃತ್ಯಕ್ಕೆ ಕಿಡಿಕಾರಿದ್ದಾರೆ.

ಝೆಮೆರಾಯ್ ಅಫ್ಘಾನಿಸ್ತಾನ ನೆಲದಲ್ಲಿ ಅಮೆರಿಕ ಸೇನೆಯ ಜೊತೆ ಕೆಲಸ ನಿರ್ವಹಿಸಿದ್ದ. ಆತ ತುಂಬಾ ಒಳ್ಳೆಯ ಕೆಲಸಗಾರ ಎಮ್ದು ಆತನ ಜೊತೆ ಕಾರ್ಯ ನಿರ್ವಹಿಸಿದ್ದ ಅಮೆರಿಕನ್ನರು ಆತನನ್ನು ನೆನಪಿಸಿಕೊಂಡಿದ್ದಾರೆ. ಆತ ಹಲವು ಬಾರಿ ತನ್ನ ಪ್ರಾಣದ ಹಂಗು ತೊರೆದು ಕರ್ತವ್ಯ ನಿಷ್ಟೆ ಮೆರೆದಿದ್ದ ಎಂದು ಆತನ ಸಹೋದ್ಯೋಗಿಗಳು ಹೇಳಿದ್ದಾರೆ.

English summary
It was a mistake and I offer my sincere apology," US General Frank McKenzie, the head of US Central Command, told reporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X