ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ದಾಳಿ ವೇಳೆ ಐಎಸ್ ಐಎಲ್ ನಾಯಕ ಅಬು ಬಕರ್ ಅಲ್- ಬಗ್ದಾದಿ ಆತ್ಮಹತ್ಯೆ

|
Google Oneindia Kannada News

ವಾಷಿಂಗ್ಟನ್ (ಯು. ಎಸ್. ಎ), ಅಕ್ಟೋಬರ್ 27: ಸಿರಿಯಾದ ವಾಯವ್ಯಕ್ಕೆ ಇರುವ ಇದ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆ ವೇಳೆ ಅಬು ಬಕರ್ ಅಲ್- ಬಗ್ದಾದಿ ಸಾವಿಗೀಡಾಗಿದ್ದಾನೆ ಎಂದು ಭಾನುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವ ಟ್ವೀಟ್ ರಹಸ್ಯ ಸಂಜೆ ಬಯಲುಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವ ಟ್ವೀಟ್ ರಹಸ್ಯ ಸಂಜೆ ಬಯಲು

ಅಮೆರಿಕದ ಸೇನೆ ದಾಳಿ ಮಾಡಿದ ವೇಳೆ ಆತ್ಮಹತ್ಯಾ ಬಾಂಬ್ ಅನ್ನು ಸ್ಫೋಟಿಸಿಕೊಂಡು, ಐಎಸ್ ಐಎಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಲೆವಂಟ್) ನಾಯಕ ಬಗ್ದಾದಿ ತನ್ನ ಮೂವರು ಮಕ್ಕಳ ಜತೆಗೆ ಸಾವಿಗೆ ಶರಣಾಗಿದ್ದಾನೆ. ಈ ದಾಳಿಯ ವೇಳೆ ಆತನ ಅಪಾರ ಸಂಖ್ಯೆಯ ಸಹಚರರನ್ನು ಕೊಲ್ಲಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

Aabu Bakr Ali- Bagdadi

ಈ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆಯಲ್ಲಿ ಯಾವುದೇ ಸಾವು- ನೋವುಗಳಾಗಿಲ್ಲ. ತುಂಬ ಸೂಕ್ಷ್ಮವಾದ ಮಾಹಿತಿಗಳನ್ನು ಆ ಕಾಂಪೌಂಡ್ ನಿಂದ ಅಮೆರಿಕದ ವಿಶೇಷ ಪಡೆಗಳು ವಶಪಡಿಸಿಕೊಂಡಿವೆ. ಅಂದಹಾಗೆ ಐಎಸ್ ಐಲ್ ಒಂದು ಹಂತದಲ್ಲಿ ಸಿರಿಯಾ ಮತ್ತು ಇರಾಕ್ ನ ಕೆಲ ಭಾಗವನ್ನು ತನ್ನ ವಶದಲ್ಲಿ ಇರಿಸಿಕೊಂಡಿತ್ತು. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಕ್ರೂರವಾದ ದಾಳಿ ನಡೆಸುತ್ತಿತ್ತು. ಹಲವು ದೇಶಗಳಲ್ಲಿ ನಡೆದ ದಾಳಿಗಳ ಹಿಂದೆ ಕೂಡ ಐಎಸ್ ಎಲ್ ಕೈವಾಡ ಇತ್ತು.

English summary
Terrorist organisation ISIL chief Abu Bakr Al- Bagdadi commits suicide during US troop raid in Syria, said US president Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X