ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಮೇಲಿನ ನಿರ್ಬಂಧ ಮುಂದುವರಿಕೆ: ಅಮೆರಿಕಕ್ಕೆ ಮುಖಭಂಗ

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 22: ಇರಾನ್ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ವಿಧಿಸುವ ಅಮೆರಿಕದ ಪ್ರಯತ್ನಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಸದಸ್ಯ ದೇಶಗಳ ಪೈಕಿ 13 ದೇಶಗಳು ಇರಾನ್ ಮೇಲಿನ ನಿರ್ಬಂಧ ಪ್ರಸ್ತಾವಕ್ಕೆ ಶುಕ್ರವಾರ ವಿರೋಧ ವ್ಯಕ್ತಪಡಿಸಿವೆ.

ಅಮೆರಿಕದ ಈ ನಡೆಯು ಔಚಿತ್ಯಪೂರ್ಣವಾಗಿಲ್ಲ, ಏಕೆಂದರೆ ಇರಾನ್ ಎರಡು ವರ್ಷಗಳ ಹಿಂದೆಯೇ ಪರಮಾಣು ಚಟುವಟಿಕೆ ಕೈಬಿಟ್ಟು ನ್ಯೂಕ್ಲಿಯರ್ ಒಪ್ಪಂದಕ್ಕೆ ಅನುಗುಣವಾಗಿ ಪ್ರಕ್ರಿಯೆ ನಡೆಸುತ್ತಿದೆ ಎಂದು ಈ ದೇಶಗಳು ಪ್ರತಿಪಾದಿಸಿವೆ.

ಚಬಹಾರ್ ರೈಲು ಯೋಜನೆ: ಭಾರತದೊಂದಿಗೆ ಒಪ್ಪಂದವೇ ಆಗಿರಲಿಲ್ಲ ಎಂದ ಇರಾನ್ ಚಬಹಾರ್ ರೈಲು ಯೋಜನೆ: ಭಾರತದೊಂದಿಗೆ ಒಪ್ಪಂದವೇ ಆಗಿರಲಿಲ್ಲ ಎಂದ ಇರಾನ್

ಇರಾನ್ ಮೇಲೆ ಶಸ್ತ್ರಾಸ್ತ್ರ ನಿಷೇಧ ಸೇರಿದಂತೆ ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಮರು ಸ್ಥಾಪನೆ ಮಾಡುವ ಸಂಬಂಧ 30 ದಿನಗಳ ಗಡುವನ್ನು ಆರಂಭಿಸಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ. ಅಮೆರಿಕದ ದೀರ್ಘಕಾಲದ ಮಿತ್ರ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ಸೇರಿದಂತೆ ಚೀನಾ, ರಷ್ಯಾ, ವಿಯೆಟ್ನಾಂ, ನೈಗೆರ್, ಸೇಂಟ್ ವಿನ್ಸೆಂಟ್, ಗ್ರೆನಡೈನ್ಸ್, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಈಸ್ಟೋನಿಯಾ ಮತ್ತು ಟ್ಯುನೇಷಿಯಾಗಳು ಈಗಾಗಲೇ ಅದಕ್ಕೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿವೆ. ಮುಂದೆ ಓದಿ.

ಒಪ್ಪಂದ ಉಲ್ಲಂಘನೆ ಆರೋಪ

ಒಪ್ಪಂದ ಉಲ್ಲಂಘನೆ ಆರೋಪ

ಜಾಗತಿಕ ಪರಮಾಣು ಶಕ್ತಿ ದೇಶಗಳ ಜತೆಗಿನ 2015ರ ಒಪ್ಪಂದವನ್ನು ಇರಾನ್ ಉಲ್ಲಂಘನೆ ಮಾಡಿದೆ ಎಂದು ಅಮೆರಿಕ ಆರೋಪಿಸಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ನಿಯಂತ್ರಿಸಿದರೆ ಅದರ ಮೇಲಿನ

ನಿರ್ಬಂಧಗಳನ್ನು ತೆರವುಗೊಳಿಸುವುದು ಈ ಒಪ್ಪಂದದ ಉದ್ದೇಶವಾಗಿತ್ತು. ಆದರೆ ಇದು ಅತ್ಯತ ಕೆಟ್ಟ ಒಪ್ಪಂದ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2018ರಲ್ಲಿ ಅದರಿಂದ ಹೊರಬಂದಿದ್ದರು.

ಡೊಮಿನಿಕನ್ ರಿಪಬ್ಲಿಕ್ ಬೆಂಬಲ

ಡೊಮಿನಿಕನ್ ರಿಪಬ್ಲಿಕ್ ಬೆಂಬಲ

ಇರಾನ್ ಮೇಲಿನ ಶಸ್ತ್ರಾಸ್ತ್ರ ನಿರ್ಬಂಧಗಳು ಅಕ್ಟೋಬರ್‌ನಲ್ಲಿ ಅಂತ್ಯಗೊಳ್ಳಲಿದ್ದು, ಅದನ್ನು ವಿಸ್ತರಿಸಲು ಭದ್ರತಾ ಮಂಡಳಿಯಲ್ಲಿ ಅಮೆರಿಕ ತನ್ನ ಬಯಕೆ ಮಂಡಿಸಿತ್ತು. ಆದರೆ ಇದಕ್ಕೆ ಡೊಮಿನಿಕನ್ ರಿಪಬ್ಲಿಕ್ ಮಾತ್ರವೇ ಬೆಂಬಲ ನೀಡಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಇರಾನ್ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಇರಾನ್

ಕಠಿಣ ಕ್ರಮದ ಎಚ್ಚರಿಕೆ

ಕಠಿಣ ಕ್ರಮದ ಎಚ್ಚರಿಕೆ

ಇರಾನ್ ಮೇಲಿನ ನಿರ್ಬಂಧಗಳನ್ನು ಮರು ವಿಧಿಸಲು ಆಸಕ್ತಿ ಇಲ್ಲ ಎಂದು ರಷ್ಯಾ, ಚೀನಾ ಹಾಗೂ ಇತರೆ ದೇಶಗಳು ಹೇಳಿವೆ. ಇರಾನ್ ಮೇಲಿನ ನಿರ್ಬಂಧಗಳ ಮರು ಜಾರಿಗೆ ವಿರೋಧ ವ್ಯಕ್ತಪಡಿಸಿದರೆ ಅಮೆರಿಕ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಪೊಂಪಿಯೊ ರಷ್ಯಾ ಮತ್ತು ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಂದೇನಾಗಲಿದೆ?

ಮುಂದೇನಾಗಲಿದೆ?

2015ರ ಭದ್ರತಾ ಮಂಡಳಿ ನಿರ್ಣಯದ ಪ್ರಕಾರ, ಇರಾನ್ ಪರಮಾಣು ಒಪ್ಪಂದವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆರೋಪ ಮಾಡಿದಾಗ, ಈ ಒಪ್ಪಂದದಲ್ಲಿ ಭಾಗಿಯಾಗಿರುವ ದೇಶಗಳಲ್ಲಿ ಯಾವುದೇ ಸದಸ್ಯ ದೇಶವು ಇರಾನ್ ವಿರುದ್ಧದ ನಿರ್ಬಂಧಗಳನ್ನು ಮುಂದುವರಿಸುವ ಸಂಬಂಧ ಹತ್ತು ದಿನಗಳ ಒಳಗೆ ಆಸಕ್ತಿ ತೋರಿಸದೆ ಇದ್ದಾಗ ಈ ಸಮಿತಿಯ ಅಧ್ಯಕ್ಷರಿಗೆ ಉಳಿದ 20 ದಿನಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸುವ ಅಧಿಕಾರವಿದೆ. ಈ ವಿಚಾರದಲ್ಲಿ ಅಮೆರಿಕವು ವೀಟೋ ಅಧಿಕಾರ ಚಲಾಯಿಸಲು ಅವಕಾಶವಿದ್ದು, ಇರಾನ್ ಮೇಲೆ ನಿರ್ಬಂಧ ಮರು ಹೇರಿಕೆ ಮಾಡಬಹುದಾಗಿದೆ. ಆದರೆ 2015ರ ಒಪ್ಪಂದದಡಿ ಇದರಲ್ಲಿ ಭಾಗಿಯಾದ ದೇಶಗಳ ಅಭಿಪ್ರಾಯಗಳನ್ನು ಕೂಡ ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.

English summary
13 of 15 UN Security Council members have opposed the US bid to extend the sanctions on Iran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X