• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

17ರ ಹರೆಯದ ಹುಡುಗನ ಬರ್ತ್‌ಡೇ ಪಾರ್ಟಿ ಇಡೀ ಅಮೆರಿಕದಲ್ಲಿ ಸುದ್ದಿಯಾಗಿದ್ದು ಹೇಗೆ?: ವಿಡಿಯೋ

|
Google Oneindia Kannada News

ಅಮೆರಿಕಾದ ಆ ಹದಿಹರೆಯದ ಯುವಕ ಟಿಕ್‌ಟಾಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವಾಗ ಇದರ ಯಾವ ನಿರೀಕ್ಷೆಗಳೂ ಇರಲಿಲ್ಲ. ತನ್ನ ಹುಟ್ಟುಹಬ್ಬವನ್ನು ಗೆಳೆಯರೊಂದಿಗೆ ಖುಷಿಖುಷಿಯಾಗಿ ಆಚರಿಸಬೇಕು ಎಂದು ಆತ ಟಿಕ್‌ಟಾಕ್‌ನಲ್ಲಿ ಗೆಳೆಯರಿಗಾಗಿ ಆಹ್ವಾನದ ಪೋಸ್ಟ್‌ವೊಂದನ್ನು ಹಾಕಿದ್ದ. ಆದರೆ ಈ ಪೋಸ್ಟ್ ವೈರಲ್ ಆಗಿ ಭಾರೀ ಪ್ರಮಾಣದಲ್ಲಿ ಜನ ಸೇರಿದ ಪರಿಣಾಮವಾಗಿ 150 ಜನರನ್ನು ಬಂಧಿಸಲಾಗಿದೆ.

ಈ ಘಟನೆ ನಡೆದಿರುವುದು ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ. ಏಡ್ರಿಯನ್ ಲಾಪ್ಜೆನ್ ಎಂಬ 17 ವರ್ಷದ ಯುವಕ ಕಳೆದ ವಾರ ಪೋಸ್ಟ್‌ವೊಂದನ್ನು ಮಾಡಿ ತನ್ನ ಹುಟ್ಟುಹಬ್ಬ ಆಚರಣೆಗಾಗಿ ಮನೆಯಿಂದ ಹೊರಬನ್ನಿ ಎಂದು ಕರೆಕೊಟ್ಟಿದ್ದ. ಆದರೆ ಈ ಪೋಸ್ಟ್ ನಿರೀಕ್ಷಿಸದ ಮಟ್ಟಿಗೆ ವೈರಲ್ ಆಗತೊಡಗಿತ್ತು. ಎಷ್ಟರ ಮಟ್ಟಿಗೆ ಎಂದರೆ ಬರೊಬ್ಬರಿ 280 ಮಿಲಿಯನ್(28 ಕೋಟಿ) ಬಾರಿ ಈ ವಿಡಿಯೋವನ್ನು ವೀಕ್ಷಿಸಿದ್ದರು.

 ವಿಡಿಯೋ: ಫ್ಯಾಂಟಾ ಬಾಟಲಿ ಮುಚ್ಚುಳ ತೆರೆಯಲು 2 ಜೇನು ನೊಣಗಳ ಸಾಹಸ ವಿಡಿಯೋ: ಫ್ಯಾಂಟಾ ಬಾಟಲಿ ಮುಚ್ಚುಳ ತೆರೆಯಲು 2 ಜೇನು ನೊಣಗಳ ಸಾಹಸ

ಸಾಮಾಜಿಕ ಜಾಲತಾಣದಲ್ಲಿ ಈ ಪ್ರಮಾಣದಲ್ಲಿ ಸಿಕ್ಕ ಸ್ಪಂದನೆಗೆ ಏಡ್ರಿಯಾನ್ ಮತ್ತು ಆತನ ಸ್ನೇಹಿತರು ಸಂಭ್ರಮದಲ್ಲಿ ಮುಳುಗಿದ್ದರು. ಆದರೆ ಕಳೆದ ಶುಕ್ರವಾರ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಅಮೆರಿಕದ ಬೇರೆ ಬೇರೆ ಭಾಗಗಳಿಂದ ಜನರು ತೆರಳುತ್ತಿರುವ ಬಗ್ಗೆ ಪೋಸ್ಟ್‌ಗಳನ್ನು ಹಾಕಲು ಆರಂಭಿಸಿದ್ದರು.

ಕಾರ್ಯಕ್ರಮದ ಮೇಲೆ ಪೊಲೀಸರ ಕಣ್ಣು

ಈ ಕಾರ್ಯಕ್ರಮಕ್ಕಾಗಿ ಭಾರೀ ಪ್ರಮಾಣದಲ್ಲಿ ಸ್ಪಂದನೆ ದೊರೆಯುತ್ತಿರುವ ಕಾರಣ ಪೊಲೀಸರು ಕೂಡ ಇದರ ಮೇಲೆ ಕಣ್ಣಿಡಲು ಆರಂಬಿಸಿದ್ದರು. ಸಾವಿರಾರು ಹೆಚ್ಚು ಜನರು ಈ ಬರ್ಡೇ ಪಾರ್ಟಿ ಆಯೋಜನೆಯಾಗುತ್ತಿರುವ ಹಾಂಟಿಂಗ್‌ಟನ್ ಬೀಚ್‌ಗೆ ಬರುತ್ತಿರುವುದನ್ನು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೂಲಕ ಗಮನಿಸಿ ಬೀಚ್‌ಅನ್ನು ಮುಚ್ಚುವ ನಿರ್ಧಾರವನ್ನು ಮಾಡಿದ್ದರು.

ಕೊನೆಯ ಕ್ಷಣದಲ್ಲಿ ಸ್ಥಳಾಂತರ

ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಆಗಮಿಸುತ್ತಿರುವುದು ಹಾಗೂ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಏಡ್ರಿಯನ್ ಮತ್ತು ಆತನ ಗೆಳೆಯರು ಈ ಪಾರ್ಟಿಯ ಸ್ಥಳವನ್ನು ಬದಲಾಯಿಸಿದರು. ಪಾರ್ಟಿ ಆರಂಭಕ್ಕೂ ಕೆಲವೇ ಸಮಯಗಳ ಮೊದಲು ಈ ಪಾರ್ಟಿಯನ್ನು ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಿದರು.

ಹಾಂಟಿಂಗ್ಟನ್ ಬೀಚ್‌ನಲ್ಲಿ ಸೇರಿದ ಜನರು

ಹಾಂಟಿಂಗ್ಟನ್ ಬೀಚ್‌ನಲ್ಲಿ ಸೇರಿದ ಜನರು

ಆದರೆ ಈ ಪಾರ್ಟಿಯನ್ನು ಲಾಸ್‌ಏಂಜಲೀಸ್‌ಗೆ ಸ್ಥಳಾಂತರಿಸಿದ ವಿಚಾರ ಕೆಲವರಿಗಷ್ಟೇ ತಿಳಿದಿತ್ತು. ಹೀಗಾಗಿ ಹಾಂಟಿಂಗ್‌ಟನ್ ಬೀಚ್‌ಗೆ ಪಾರ್ಟಿಯಲ್ಲಿ ಭಾಗಿಯಾಗುವ ಸ್ಥಳಗಳಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಲು ಆರಂಭಿಸಿದ್ದರು. ಪೊಲೀಸರು ಜನರನ್ನು ವಾಪಾಸ್ ಕಳುಹಿಸುವ ಪ್ರಯತ್ನ ನಡೆಸಿದಾಗ ಪಾರ್ಟಿ ಮೂಡ್‌ನಲ್ಲಿದ್ದ ಯುವ ಜನರು ಪೊಲೀಸರೊಂದಿಗೆ ವಾಗ್ವಾದವನ್ನು ನಡೆಸಿದರು. ದಾಂಧಲೆಗಳು ಹೆಚ್ಚಾದವು. ಅಲ್ಲಿಗೆ ಬಂದಿದ್ದ ಕಾರುಗಳ ಗಾಜುಗಳನ್ನು ಒಡೆಯಲು ಆರಂಭಿಸಿದ್ದರು. ಬಾಟಲ್‌ಗಳು ಹಾಗೂ ಕೆಲ ವಸ್ತುಗಳನ್ನು ಎಸೆಯಲು ಆರಂಭಿಸಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ರಾತ್ರೋರಾತ್ರಿ ಕರ್ಫ್ಯೂವನ್ನು ಕೂಡ ಹೇರಲಾಯಿತು. ಸುಮಾರು 150 ಜನರನ್ನು ಪೊಲೀಸರು ಈ ಸಂದರ್ಭದಲ್ಲಿ ಬಂಧಿಸಿದ್ದಾರೆ.

ಅಧಿಕೃತ ಕಾರ್ಯಕ್ರಮವೂ ರದ್ದು

ಇನ್ನು ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಸ್ಥಳಾಂತರಸಿದ ಸ್ಥಳದ ಬಗ್ಗೆಯೂ ಮಾಹಿತಿಗಳು ಕೆಲವರಿಗೆ ಗೊತ್ತಾಗಿ ಅಲ್ಲಿಯೂ ಜನ ಸೇರಲು ಆರಂಭಿಸಿದ್ದರು. ಹೀಗಾಗಿ ಆ ಕಿಕ್‌ಬ್ಯಾಕ್ ಕಾರ್ಯಕ್ರಮ ಆಯೋಜನೆಯಾಗುವ ಮುನ್ನವೇ ಪೊಲೀಸರು ರದ್ದುಗೊಳಿಸಿದ್ದರು. ಲಾಸ್‌ಏಂಜಲೀಸ್‌ನಲ್ಲಿ ಆಯೋಜನೆಯಾಗಿದ್ದ ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಟಿಕೆಟ್ ಪಡೆದುಕೊಂಡಿದ್ದವರಿಗೆ ಕಳೆದ ಭಾನುವಾರ ಟಿಕೆಟ್ ಮೊತ್ತವನ್ನು ಏಡ್ರಿಯಾನ್ ವಾಪಸ್ ನೀಡಿದ್ದ.

ಏಡ್ರಿಯಾಯಾನ್ ಪ್ರತಿಕ್ರಿಯೆ

ಏಡ್ರಿಯಾಯಾನ್ ಪ್ರತಿಕ್ರಿಯೆ

ಕಳೆದ ಸೋಮವಾರ ಈ ಬಗ್ಗೆ ಏಡ್ರಿಯಾನ್ ಪ್ರತಿಕ್ರಿಯೆ ನೀಡಿದ್ದು "ನಾನು ಯಾವುದೇ ಕಾನೂನು ವಿರೋಧಿ ಚಟುವಟಿಕೆಗೆ ಪ್ರೋತ್ಸಾಹವನ್ನು ನೀಡಿಲ್ಲ. ಸುರಕ್ಷತೆ ಯಾವಾಗಲು ನನ್ನ ಪ್ರಥಮ ಆದ್ಯತೆ. ಈ ಆಡ್ರಿಯಾನ್ಸ್ ಕಿಕ್‌ಬ್ಯಾಕ್ ಕಾರ್ಯಕ್ರಮದ ಮೂಲಕ ಯಾವುದೇ ಹಣವನ್ನು ಸಂಪಾದಿಸಿಲ್ಲ" ಎಂದು ಹೇಳಿಕೊಂಡಿದ್ದಾನೆ.

English summary
invitation of 17 year old boy's birthday party goes viral, thousands of strangers turn up. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X