ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಮೇಲೆ ರಾರಾಜಿಸಿದ ಯೋಗಾಸನ ಭಂಗಿ

|
Google Oneindia Kannada News

ನ್ಯೂಯಾರ್ಕ್, ಜೂನ್ 21: ಅಮೆರಿಕದ ನ್ಯೂಯಾರ್ಕಿನಲ್ಲಿರುವ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯ ಮೇಲೆ ಯೋಗಾಸನ ಭಂಗಿಯ ಚಿತ್ರಗಳು ರಾರಾಜಿಸಿದವು. ವಿಶ್ವ ಯೋಗ ದಿನದ ನಿಮಿತ್ತ ಸೂರ್ಯನಮಸ್ಕಾರ ಮತ್ತು ಯೋಗದ ಸಂದೇಶವನ್ನೊಳಗೊಂಡ ಚಿತ್ರ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯ ಕಟ್ಟಡದ ಮೇಲೆ ಲೇಸರ್ ಬೆಳಕಿನ ಮೂಲಕ ಪ್ರತಿಬಿಂಬಿಸಿತ್ತು.

ಈ ಚಿತ್ರವನ್ನು ವಿಶ್ವಸಂಸ್ಥೆಗೆ ಭಾರತದ ಶಾಶ್ವತ ರಾಯಭಾರಿಯಾಗಿರುವ ಎಸ್ ಅಕ್ಬರುದ್ದಿನ್ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡು, ಯೋಗ ದಿನದ ಶುಭಾಶಯ ಕೋರಿದರು.

ಅಂತಾರಾಷ್ಟ್ರೀಯ ಯೋಗ ದಿನ LIVE: ದೇಶಾದ್ಯಂತ ಯೋಗ ಹಬ್ಬದ ಸಂಭ್ರಮಅಂತಾರಾಷ್ಟ್ರೀಯ ಯೋಗ ದಿನ LIVE: ದೇಶಾದ್ಯಂತ ಯೋಗ ಹಬ್ಬದ ಸಂಭ್ರಮ

"ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಭಾಂಗಣದಲ್ಲಿ ನಡೆಯುತ್ತಿರುವ ಒಳಾಂಗಣ ಯೋಗ ಪ್ರದರ್ಶನ ಇತಿಹಾಸದಲ್ಲಿ ಇದೇ ಮೊದಲು ಎಂಬುದು ನನ್ನ ಭಾವನೆ. ಎಲ್ಲ ಯೋಗಿಗಳ ಆಶಯದಂತೆ ನಾವು ಶುದ್ಧ, ಸಮೃದ್ಧ ಮತ್ತು ಪರಿಸರ ಸ್ನೇಹಿ ಮೌಲ್ಯಗಳುಳ್ಳ ಭವಿಷ್ಯವನ್ನು ಆಶಿಸುತ್ತೇವೆ" ಎಂದು ಈ ಸಂದರ್ಭದಲ್ಲಿ ಅಕ್ಬರುದ್ದಿನ್ ಹೇಳಿದರು.

International Yoga Day: Yoga Posture light up Un headquarters

ವಿಶ್ವದಾದ್ಯಂತ ಇಂದು ಐದನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದ್ದು, ಈ ಬಾರಿಯ ಯೋಗದಿನದ ಘೋಷವಾಕ್ಯ, "ಹೃದಯದ ಆರೋಗ್ಯಕ್ಕಾಗಿ ಯೋಗ" ಎಂಬುದು.

ಜಾರ್ಖಂಡ್ ನ ರಾಂಚಿಯಲ್ಲಿ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ನಮ್ಮೆಲ್ಲರ ಬದುಕಿನ ವಿಧಾನವಾಗಬೇಕು, ಯೋಗವನ್ನು ಹಳ್ಳಿ, ಬುಡಕಟ್ಟು ಪ್ರದೇಶ ಸೇರಿದಂತೆ ಎಲ್ಲೆಲ್ಲೂ ಕೊಂಡೊಯ್ಯುವ ಕೆಲಸವಾಗಬೇಕು. ಯೋಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಹೊಣೆ ನಮ್ಮ ಮೇಲಿದೆ ಎಂದರು.

English summary
International Yoga Day: The United Nations headquarters was lit up with postures of 'Surya Namaskar' and the message of 'Yoga for Climate Action'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X