• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಅಣತಿಯಂತೆ ಅಮೆರಿಕದಲ್ಲಿ ಇನ್ಫಿ ನೇಮಕ ಹೆಚ್ಚಳ

|

ವಾಷಿಂಗ್ಟನ್, ಸೆ. 3: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೀಸಾ ನೀತಿ ಬದಲಾಯಿಸಿ, ಕೌಶಲ್ಯಯುಳ್ಳ ವಲಸೆ ಉದ್ಯೋಗಿಗಳ ನೇಮಕಾತಿ ಕಠಿಣಗೊಳಿಸಿದ ಬೆನ್ನಲ್ಲೇ ಭಾರತೀಯ ಮೂಲದ ಕಂಪನಿಗಳು ಸ್ಥಳೀಯರಿಗೆ ಮಣೆ ಹಾಕಲು ಮುಂದಾಗಿವೆ. ಭಾರತದ ಪ್ರಮುಖ ಸಂಸ್ಥೆ ಇನ್ಫೋಸಿಸ್ ಈಗ ಅಮೆರಿಕದಲ್ಲಿ 12,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ.

ಮುಂದಿನ ಎರಡು ವರ್ಷಗಳಲ್ಲಿ 12,000 ಅಮೆರಿಕನ್ನರು ಹಾಗೂ ಮುಂದಿನ ಐದು ವರ್ಷಗಳಲ್ಲಿ ಸುಮಾರು 25 ಸಾವಿರ ಮಂದಿ ಸ್ಥಳೀಯರನ್ನು ನೇಮಕ ಮಾಡಿಕೊಳ್ಳುವುದಾಗಿ ಇನ್ಫೋಸಿಸ್ ಹೇಳಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಇನ್ಫೋಸಿಸ್ ಸಂಸ್ಥೆಯ ಲಕ್ಷಾಂತರ ಸಿಬ್ಬಂದಿಗೆ ಬಡ್ತಿ

2017ರಲ್ಲಿ ಸುಮಾರು 10,000 ಸ್ಥಳೀಯ ನೇಮಕಾತಿ ಘೋಷಿಸಿದ್ದ ಇನ್ಫೋಸಿಸ್ ಆ ವರ್ಷದಲ್ಲಿ 13,000 ಮಂದಿಯನ್ನು ನೇಮಿಸಿಕೊಂಡಿತ್ತು. ಅಮೆರಿಕದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಿಇಒ ಸಲೀಲ್ ಪಾರೇಖ್ ಹೇಳಿದ್ದಾರೆ.

ಕೊವಿಡ್ 19 ಹಿನ್ನೆಲೆಯಲ್ಲಿ ಆರ್ಥಿಕ ಹೊಡೆತ ತಿಂದಿರುವ ಅಮೆರಿಕಕ್ಕೆ ಇನ್ಫೋಸಿಸ್ ಘೋಷಣೆ ಆಶಾಕಿರಣವಾಗಿ ಪರಿಣಮಿಸಬಹುದು. ಹೊಸ ಪದವೀಧರರು ಸೇರಿದಂತೆ ಅನುಭವಿಗಳನ್ನು ನೇಮಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಎಂದು ಇನ್ಫೋಸಿಸ್ ಅಧ್ಯಕ್ಷ ರವಿ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಇಂಡಿಯಾನಾ, ಉತ್ತರ ಕರೊಲಿನಾ, ಕನೆಕ್ಟಿಕಟ್, ರೋಡ್ ದ್ವೀಪ, ಟೆಕ್ಸಾಸ್ ಹಾಗೂ ಆರಿಜೋನಾದಲ್ಲಿ ತನ್ನ ವ್ಯಾಪ್ತಿಯನ್ನು ಇನ್ಫೋಸಿಸ್ ವಿಸ್ತರಿಸಿಕೊಂಡಿದೆ.

English summary
Infosys said it plans to hire 12,000 American workers over the next two years, bringing its hiring commitment in the country to 25,000 over five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X