• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕಕ್ಕೆ ಎಚ್-1ಬಿ ವೀಸಾದಿಂದ ಹೋದವರಲ್ಲಿ ಭಾರತೀಯರೇ ಹೆಚ್ಚು

|
Google Oneindia Kannada News

ವಾಷಿಂಗ್ಟನ್, ಏ. 15: ಅಮೆರಿಕಕ್ಕೆ ಕೆಲಸಕ್ಕೆ ಹೋಗುವವರಿಗೆ ನೀಡಲಾಗುವ ಎಚ್-1ಬಿ ವೀಸಾದಲ್ಲಿ ಸಿಂಹಪಾಲು ಭಾರತೀಯರದ್ದಿದೆ. 2021ರ ಹಣಕಾಸು ವರ್ಷದಲ್ಲಿ ಅಮೆರಿಕ 4.07 ಲಕ್ಷ ಮಂದಿಗೆ ಎಚ್-1ಬಿ ವೀಸಾ ನೀಡಿತ್ತು. ಇವರಲ್ಲಿ ಶೇ. 74.1 ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ ಎಂಬುದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆಯ ಇತ್ತೀಚಿನ ವರದಿಯೊಂದರಿಂದ ತಿಳಿದುಬಂದಿದೆ.

ಹಿಂದಿನ ವರ್ಷದಲ್ಲಿ (2020ರ ಹಣಕಾಸು ವರ್ಷ) ಅಮೆರಿಕ 4.26 ಲಕ್ಷ ಮಂದಿಗೆ ಎಚ್-1ಬಿ ವೀಸಾ ಅನುಮತಿ ಕೊಟ್ಟಿತ್ತು. ಆಗಲೂ ಶೇ. 74ಕ್ಕಿಂತ ಹೆಚ್ಚು ಭಾರತೀಯರು ಆ ವೀಸಾ ಪಡೆದಿದ್ದರು. ಅಂದರೆ, 2020ರಲ್ಲಿ 3.19 ಲಕ್ಷ ಹಾಗು 2021ರಲ್ಲಿ 3.01 ಲಕ್ಷ ಮಂದಿ ಭಾರತದಿಂದ ಅಮೆರಿಕಕ್ಕೆ ಎಚ್-1ಬಿ ವೀಸಾ ಪಡೆದು ಹೋಗಿದ್ದಾರೆ.

ಅಮೆರಿಕದ ಎಚ್‌-1ಬಿ ವೀಸಾ ನೋಂದಣಿ ಮಾರ್ಚ್ 1 ರಿಂದ ಪ್ರಾರಂಭಅಮೆರಿಕದ ಎಚ್‌-1ಬಿ ವೀಸಾ ನೋಂದಣಿ ಮಾರ್ಚ್ 1 ರಿಂದ ಪ್ರಾರಂಭ

ಭಾರತೀಯರು ಬಿಟ್ಟರೆ ಅಮೆರಿಕದ ಎಚ್-1ಬಿ ವೀಸಾ ಹೆಚ್ಚು ಪಡೆದ ಇತರರಲ್ಲಿ ಚೀನೀಯರು ಪ್ರಮುಖರು. 2020ರಲ್ಲಿ 51597 ಮತ್ತು 2021ರಲ್ಲಿ 50328 ಮಂದಿ ಚೀನೀಯರು ಎಚ್‌-1ಬಿ ವೀಸಾ ಪಡೆದಿದ್ದರು. ಅಂದರೆ ಒಟ್ಟಾರೆ ವೀಸಾ ಪಡೆದವರಲ್ಲಿ ಚೀನೀಯರು ಪಾಲು ಶೇ. 12ರ ಆಸುಪಾಸು.

ಭಾರತ ಮತ್ತು ಚೀನಾ ಬಿಟ್ಟರೆ ಅಮೆರಿಕಕ್ಕೆ ಎಡೆತಾಕುವ ಇತರ ದೇಶಗಳ ಜನರ ಸಂಖ್ಯೆ ನಗಣ್ಯವೇ. ಪಕ್ಕದ ಕೆನಡಾ ದೇಶದಿಂದ 3836 ಮಂದಿ ಕಳೆದ ವರ್ಷ ಎಚ್-1ಬಿ ವೀಸಾ ಪಡೆದು ಅಮೆರಿಕಕ್ಕೆ ಹೋಗಿರುವ ಮಾಹಿತಿ ಇದೆ.

H1-B ವೀಸಾ ಅರ್ಜಿದಾರರು ಖುದ್ದಾಗಿ ಸಂದರ್ಶನಕ್ಕೆ ಹಾಜರಾಗಬೇಕಿಲ್ಲH1-B ವೀಸಾ ಅರ್ಜಿದಾರರು ಖುದ್ದಾಗಿ ಸಂದರ್ಶನಕ್ಕೆ ಹಾಜರಾಗಬೇಕಿಲ್ಲ

ಕಂಪ್ಯೂಟರ್ ಸಂಬಂಧಿತ ಉದ್ಯೋಗಿಗಳ ಪಾಲು ಹೆಚ್ಚು:
ಎಚ್-1ಬಿ ವೀಸಾ ಪಡೆದವರಲ್ಲಿ ಹೆಚ್ಚಿನವರು ಕಂಪ್ಯೂಟರ್ ಸಂಬಂಧಿತ ಉದ್ಯೋಗಿಗಳಾಗಿದ್ದಾರೆ. ಈ ಕ್ಷೇತ್ರದ 2.8 ಲಕ್ಷ ಮಂದಿ ಎಚ್-1ಬಿ ವೀಸಾ ಸಿಕ್ಕಿತ್ತು. ಅಂದರೆ ಅನುಮೋದನೆಗೊಂಡ ಎಚ್-1ಬಿ ವೀಸಾಗಳಲ್ಲಿ ಶೇ. 68.8ರಷ್ಟು ಪಾಲು ಕಂಪ್ಯೂಟರ್ ಉದ್ಯೋಗಿಗಳದ್ದಾಗಿದೆ.

ಇನ್ನು, ಎಚ್-1ಬಿ ವೀಸಾ ಪಡೆದವರಲ್ಲಿ ಶೇ. 56.6 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಶೇ. 33.7 ಮಂದಿ ಬ್ಯಾಚಲರ್ ಪದವಿ ಪಡೆದವರಾಗಿದ್ದಾರೆ. ಶೇ. 6.8 ಮಂದಿ ಡಾಕ್ಟರೇಟ್ ಪಡೆದವರಿದ್ದರೆ ಶೇ. 2.9 ಮಂದಿ ವೃತ್ತಿಪರ ಡಿಗ್ರಿ ಪಡೆದುಕೊಂಡವರಿದ್ದಾರೆ.

Indians got 74 pc H-1B Visas this fiscal, while Chinese are way behind

ವೀಸಾ ಪಡೆದವರ ಸರಾಸರಿ ಸಂಬಳ ಎಷ್ಟು:
2021ರ ಹಣಕಾಸು ವರ್ಷದಲ್ಲಿ ಎಚ್-1ಬಿ ವೀಸಾ ಪಡೆದ ನೌಕರರ ಸರಾಸರಿ ಸಂಬಳ 1.08 ಲಕ್ಷ ಡಾಲರ್ (74 ಲಕ್ಷ ರೂಪಾಯಿ) ಅಂತೆ. ಇದು 2020ರ ವರ್ಷದಕ್ಕಿಂತ ಶೇ. 6.9ರಷ್ಟು ಹೆಚ್ಚು ಎನ್ನಲಾಗಿದೆ. ಇನ್ನು, ಎಚ್-1ಬಿ ವೀಸಾ ಪಡೆದ ಮಂದಿಯ ಸರಾಸರಿ ವಯಸ್ಸು 33 ವರ್ಷವಂತೆ.

ಏನಿದು ಎಚ್-1ಬಿ ವೀಸಾ?
ಎಚ್-1ಬಿ ವೀಸಾ ಎಂಬದು ಅಮೆರಿಕಕ್ಕೆ ವರ್ಕ್ ಪರ್ಮಿಟ್ ಮೇಲೆ ಹೋಗಲು ನೀಡಲಾಗುವ ವೀಸಾ. ಸಾಫ್ಟ್‌ವೇರ್, ಎಂಜಿನಿಯರಿಂಗ್, ವೈದ್ಯಕೀಯ ಇತ್ಯಾದಿ ವೃತ್ತಿಪರ ಕ್ಷೇತ್ರಗಳಲ್ಲಿ ಖಾಲಿ ಇರುವ ಕೆಲಸಕ್ಕಾಗಿ ವಿದೇಶದ ವೃತ್ತಿಪರರಿಗೆ ಅಮೆರಿಕದಲ್ಲಿ ಸೇವೆ ಸಲ್ಲಿಸಲು ಈ ವೀಸಾ ನೀಡಲಾಗುತ್ತದೆ. ಇದು ತಾತ್ಕಾಲಿಕ ವೀಸಾ ಮಾತ್ರ.

ಎಚ್-1ಬಿ ವೀಸಾದ ಕಾಲಾವಧಿ 3 ವರ್ಷ ಇರುತ್ತದೆ. ಹೆಚ್ಚೆಂದರೆ 5 ವರ್ಷದವರೆಗೂ ಇದರ ಅವಧಿಯನ್ನ ವಿಸ್ತರಿಸಬಹುದು. ಒಂದು ವೇಳೆ ಹೆಚ್-1ಬಿ ವೀಸಾ ಮೇಲೆ ಅಮೆರಿಕಕ್ಕೆ ಹೋದ ವ್ಯಕ್ತಿ, ಅದೇ ದೇಶದ ಪೌರತ್ವ ಪಡೆಯಬೇಕಾದರೆ ಗ್ರೀನ್ ಕಾರ್ಡ್‌ಗೆ ಅಪ್ಲೈ ಮಾಡಬೇಕಾಗುತ್ತದೆ. ಗ್ರೀನ್ ಕಾರ್ಡ್ ಸಿಕ್ಕರೆ ಆ ವ್ಯಕ್ತಿ ಅಮೆರಿಕದ ಯಾವುದೇ ಪ್ರದೇಶದಲ್ಲಿ ಯಾವುದೇ ಕೆಲಸ ಮಾಡಲು ಅನುಮತಿ ಸಿಕ್ಕಂತಾಗುತ್ತದೆ. ಅಮೆರಿಕದ ಪೌರತ್ವವೂ ಸಿಕ್ಕಂತಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Out of total approved H-1B visas, Indians share is over 74% says a govt report in US. Around 12% Visas gone to Chinese.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X