ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಾಕ್ಸಿನ್‌, ಸ್ಪುಟ್ನಿಕ್ ಹಾಕಿಸಿದ ಯುಎಸ್‌ ವಿದ್ಯಾರ್ಥಿಗಳಿಗೆ ಮರು ಲಸಿಕೆ ಪಡೆಯಲು ಸೂಚನೆ

|
Google Oneindia Kannada News

ವಾಷಿಂಗ್ಟನ್‌, ಜೂ. 05: ಮಾರ್ಚ್‌ನಿಂದ, ಅಮೆರಿಕದ 400 ಕ್ಕೂ ಹೆಚ್ಚು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್‌ ಆರಂಭಕ್ಕೂ ಮುನ್ನ ಕೋವಿಡ್‌ ಲಸಿಕೆ ಪಡೆಯುವಂತೆ ಅಮೆರಿಕಾ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಅನುಮೋದನೆ ದೊರಕದ ಭಾರತದ ಕೋವಾಕ್ಸಿನ್ ಅಥವಾ ರಷ್ಯಾದ ಸ್ಪುಟ್ನಿಕ್‌ ವಿ ಲಸಿಕೆಯನ್ನು ಪಡೆದವರು, ಮರು ಲಸಿಕೆ ಪಡೆಯುವಂತೆ ತಿಳಿಸಲಾಗಿದೆ.

ಕೊಲಂಬಿಯಾ ಯೂನಿವರ್ಸಿಟಿಯ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಮತ್ತು ಪಬ್ಲಿಕ್‌ ಅಫೆರ್‍ಸ್‌ನ ಸ್ನಾತಕೋತ್ತರ ಪದವಿಯ ಭಾರತದ 25 ವರ್ಷದ ವಿದ್ಯಾರ್ಥಿನಿಗೆ ಎರಡು ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ. ಆದರೆ ಕ್ಯಾಂಪಸ್‌ಗೆ ಬಂದ ಬಳಿಕ ಮತ್ತೆ ಲಸಿಕೆ ಪಡೆಯುವಂತೆ ಸಂಸ್ಥೆ ಸೂಚಿಸಿದೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ವಿದ್ಯಾರ್ಥಿನಿ ಮಿಲೋನಿ ದೋಶಿ, ನಾನು ಈ ಎರಡು ವಿಭಿನ್ನ ಲಸಿಕೆಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾತ್ರ ಚಿಂತಿತಳಾಗಿದ್ದೇನೆ. ಇದು ನಿಜಕ್ಕೂ ಆತಂಕವನ್ನು ಉಂಟು ಮಾಡುವ ವಿಷಯವಾಗಿದೆ ಎಂದು ಹೇಳಿದ್ದಾರೆ.

Indian Students Who Took Covaxin or Sputnik Asked to Get Revaccinated Before Entering US

ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಕ್ಯಾಂಪಸ್‌ಗಳು ಸ್ಪುಟ್ನಿಕ್ ಅಥವಾ ಕೊವಾಕ್ಸಿನ್‌ನಂತಹ WHO ಅನುಮೋದಿಸದ ಲಸಿಕೆಯನ್ನು ವಿದ್ಯಾರ್ಥಿಗಳು ಪಡೆದರೆ ಹೆಚ್ಚು ಅಪಾಯವಿದೆ. ಅನೇಕ ಕಾಲೇಜುಗಳು ಆ ವಿದ್ಯಾರ್ಥಿಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದಿದೆ.

ಕ್ರಿಸ್ಟನ್ ನಾರ್ಡ್‌ಲಂಡ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ವಕ್ತಾರ ಮಾತನಾಡಿ, ವಿವಿಧ ಕಂಪನಿಗಳ ಲಸಿಕೆಯನ್ನು ಒಟ್ಟುಗೂಡಿಸುವುದು ಸುರಕ್ಷಿತವಾಗಿದೆಯೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೋವಿಡ್ -19 ಲಸಿಕೆಗಳು ಪರಸ್ಪರ ಬದಲಾಯಿಸಲಾಗದ ಕಾರಣ, ಎರಡು ವಿಭಿನ್ನ ಕೋವಿಡ್ -19 ಲಸಿಕೆಗಳನ್ನು ಸ್ವೀಕರಿಸುವ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಡಬ್ಲ್ಯುಎಚ್‌ಒ ಅನುಮತಿ ನೀಡದ ಲಸಿಕೆ ಪಡೆದು ಈಗ ಯುಎಸ್‌ನ ಲಸಿಕೆ ಪಡೆಯುವ ವಿದ್ಯಾರ್ಥಿಗಳು ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ)ದ ಲಸಿಕೆಗಳ ಮೊದಲ ಡೋಸ್‌ ತೆಗೆದುಕೊಳ್ಳುವ ಮೊದಲು ಕನಿಷ್ಠ 28 ದಿನಗಳವರೆಗೆ ಕಾಯಬೇಕು ಎಂದು ನಾರ್ಡ್‌ಲಂಡ್ ಸಲಹೆ ನೀಡಿದ್ದಾರೆ.

ಉಳಿದಂತೆ ಅಮೇರಿಕನ್ ವಿದ್ಯಾರ್ಥಿಗಳಿಗೆ ಫಿಜರ್, ಮಾಡರ್ನಾ ಮತ್ತು ಜಾನ್ಸನ್ ಆಂಡ್‌ ಜಾನ್ಸನ್ ಲಸಿಕೆಗಳು ಪಡೆದು ಕ್ಯಾಂಪಸ್‌ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಭಾರತದ ವಿದ್ಯಾರ್ಥಿಗಳಿಗೆ ಇದು ಸವಾಲಾಗಿದೆ. ಪ್ರತಿವರ್ಷ ಸುಮಾರು 200,000 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕನ್ ಕಾಲೇಜುಗಳಿಗೆ ಬರುತ್ತಾರೆ. ಅಮೆರಿಕದ ಕ್ಯಾಂಪಸ್‌ಗಳು ಪಡೆಯಲು ಸೂಚಿಸಿರುವ ಲಸಿಕೆಗಾಗಿ ನೋಂದಣಿ ಪಡೆದುಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ವರದಿಯಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Students from India Who Took Covaxin or Sputnik Asked to Get Revaccinated Before Entering U.S. Colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X