• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದಿಂದ ಅಮೆರಿಕಕ್ಕೆ ತೆರಳಲು ಯಾರಿಗೆ ವಿನಾಯಿತಿ, ಪಟ್ಟಿ ಇಲ್ಲಿದೆ

|

ವಾಷಿಂಗ್ಟನ್, ಮೇ 1: ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತದಿಂದ ಬರುವವರಿಗೆ ಅಮೆರಿಕ ಸರ್ಕಾರ ನಿರ್ಬಂಧ ವಿಧಿಸಿದೆ.

ಆದರೆ ಕೆಲವರಿಗೆ ಅಮೆರಿಕಕ್ಕೆ ಬರಲು ವಿನಾಯಿತಿಯನ್ನು ಕೂಡ ನೀಡಿದೆ. ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಹಾಗೂ ಪರ್ತಕರ್ತರು ಮಾತ್ರ ಅಮೆರಿಕಕ್ಕೆ ಬರಬಹುದು ಎಂದು ಹೇಳಿದೆ.

ಭಾರತದಿಂದ ಆಸ್ಟ್ರೇಲಿಯಾಗೆ ತೆರಳಿದರೆ 5 ವರ್ಷ ಜೈಲು ಶಿಕ್ಷೆ! ಭಾರತದಿಂದ ಆಸ್ಟ್ರೇಲಿಯಾಗೆ ತೆರಳಿದರೆ 5 ವರ್ಷ ಜೈಲು ಶಿಕ್ಷೆ!

ಕೊರೊನಾ ಸೋಂಕಿನ ಸಂದರ್ಭದಲ್ಲಿ ಅಧ್ಯಯನವನ್ನು ಆರಂಭಿಸಲು ಬಯಸುವ ವಿದ್ಯಾರ್ಥಿಗಳು, ಕೆಲವು ಶಿಕ್ಷಣ ತಜ್ಞರು, ಪತ್ರಕರ್ತರು ಅಮೆರಿಕ ಪ್ರವೇಶಿಬಹುದು, ಈ ನಿಯಮ ಅಮೆರಿಕ ನಾಗರಿಕರು, ಶಾಶ್ವತ ನಿವಾಸಿಗಳು ಅಥವಾ ಇತರ ವಿನಾಯಿತಿ ಪಡೆದವರಿಗೆ ಅನ್ವಯಿಸುವುದಿಲ್ಲ. ಈ ನಿಯಮ ಮೇ.4 ರಿಂದ ಜಾರಿಯಾಗಲಿದೆ ಎಂದು ಜೆನ್ ಸಾಕಿ ಮಾಹಿತಿ ನೀಡಿದ್ದಾರೆ.

ಸರ್ಕಾರಿ ರೋಗ ನಿಯಂತ್ರಣ ಸಂಸ್ಥೆಗಳ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ. ಸೋಂಕು ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೆನಡಾ, ಯುಎಇ ಸೇರಿದಂತೆ ಹಲವು ದೇಶಗಳು ಭಾರತದ ಪ್ರಯಾಣವನ್ನು ತಾತ್ಕಾಲಿಕವಾಗಿ ನಿಷೇಧಿಸಿವೆ.

ಕೋವಿಡ್ 19: ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧಕೋವಿಡ್ 19: ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ಒಂದು ದಿನದಲ್ಲಿ 4,01,993, ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 3523 ಮಂದಿ ಸಾವನ್ನಪ್ಪಿದ್ದು, 2,99,988 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

English summary
After the US announced travel restrictions on India which are set to start on May 4, the Biden administration has further announced that certain categories of students, academics, and journalists are exempted from the new set of travel restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X