ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಕೆರೆಯಲ್ಲಿ ಮುಳುಗಿ ಭಾರತೀಯ ವಿದ್ಯಾರ್ಥಿ ಸಾವು

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 21: ಅಮೆರಿಕದ ಕೆರೆಯಲ್ಲಿ ಮುಳುಗಿ ಭಾರತ ಮೂಲದ 27 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾರೆ.

ಸುಮೇಧ್ ಮನ್ನಾರ್ ಮೃತ ವಿದ್ಯಾರ್ಥಿ, ಆತ ನ್ಯಾಷನಲ್ ಪಾರ್ಕ್‌ನಲ್ಲಿರುವ ಕ್ರೇಟರ್ ಲೇಕ್‌ ಗೆ ಹಾರಿದ್ದು ಕೊನೆಗೆ ಮೇಲೆ ಬರಲೇ ಇಲ್ಲ ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.

ಸುಮೇಧ್ ಓರೆಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದ, ಆತನ 25 ಅಡಿ ಆಳದ ಕೆರೆಗೆ ಹಾರಿ ಮೃತಪಟ್ಟಿದ್ದಾನೆ. ಬೇಸಿಗೆಯಲ್ಲಿ ನೀರು ಸುಮಾರು 15 ಡಿಗ್ರಿ ಸೆಲ್ಸಿಯಸ್‌ನಷ್ಟು ಬೆಚ್ಚಗಿರುತ್ತದೆ. ಕೆರೆಯ ಒಟ್ಟು ಉಷ್ಣಾಂಶ 3 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ. ಆದರೆ ಕ್ಲೀಟ್‌ವುಡ್ ಕೋವ್ ಹಾಗೂ ವಿಸರ್ಡ್ ಐಲ್ಯಾಂಡ್‌ನಲ್ಲಿ ಮಾತ್ರ ಈಜಲು ಅವಕಾಶವಿದೆ.

Indian Student Sumedh Drowns In US Lake

ಕೆರೆಗೆ ಹಾರುತ್ತಿದ್ದಂತೆ ತಕ್ಷಣವೇ ಸುಮೇಧ್ ಕಾಣೆಯಾಗಿದ್ದ. ರಾತ್ರಿಯಿಂದಲೇ ಆತನ ಹುಡುಕಾಟ ಆರಂಭಿಸಿದ್ದರೂ ಇಂದು ಬೆಳಗ್ಗೆ ಶವ ದೊರೆತಿದೆ. ಸುಮಾರು 90 ಅಡಿ ಆಳದಲ್ಲಿ ಆತನ ಶವ ಸಿಕ್ಕಿದೆ, ಕೆರೆಯು ಸುಮಾರು 1200 ಅಡಿಗಳಷ್ಟು ಆಳವಿದೆ.

ಅಲ್ಲಿ ಕೆರೆಗೆ ಇಳಿಯದಂತೆ ಮೊದಲೇ ತಿಳಿಸಲಾಗಿತ್ತಾದರೂ ಸುಮೇಧ್ ಎಲ್ಲರ ಮಾತು ಧಿಕ್ಕರಿಸಿ ಕೆರೆಗೆ ಹಾರಿದ್ದ, ಕೆರೆ ತುಂಬಾ ಆಳವಿದ್ದ ಕಾರಣ ಆತನಿಗೆ ಮೇಏಳಲು ಸಾಧ್ಯವೇ ಆಗಿಲ್ಲ.

English summary
A 27-Year-Old Indian Student Sumedh Drowns in a US Carter lake, did not reach the surface.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X