ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಜಾಗಿಂಗ್ ಮಾಡುತ್ತಿದ್ದ ಭಾರತ ಮೂಲದ ಸಂಶೋಧಕಿ ಹತ್ಯೆ

|
Google Oneindia Kannada News

ಹೌಸ್ಟನ್, ಆಗಸ್ಟ್ 04: ಜಾಗಿಂಗ್ ಮಾಡುತ್ತಿದ್ದ ಭಾರತ ಮೂಲದ ಮಹಿಳಾ ಸಂಶೋಧಕಿಯೊಬ್ಬರನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿದೆ.

ಟೆಕ್ಸಾಸ್ ರಾಜ್ಯದ ಪ್ಲಾನೊ ನಗರದ ಸರ್ಮಿಸ್ತಾ ಸೇನ್ , ಚಿಶೋಲ್ಮ್ ಟ್ರಯಲ್ ಪಾರ್ಕ್ ನಲ್ಲಿ ಆಗಸ್ಟ್ 1 ರಂದು ಜಾಗಿಂಗ್ ಮಾಡುತ್ತಿರುವಾಗ ತೀವ್ರ ರೀತಿಯ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1 ಕೋಟಿಗಾಗಿ 6ನೇ ತರಗತಿ ಬಾಲಕನನ್ನು ಅಪಹರಿಸಿ ಹತ್ಯೆಗೈದ ದುಷ್ಕರ್ಮಿಗಳು1 ಕೋಟಿಗಾಗಿ 6ನೇ ತರಗತಿ ಬಾಲಕನನ್ನು ಅಪಹರಿಸಿ ಹತ್ಯೆಗೈದ ದುಷ್ಕರ್ಮಿಗಳು

ಪೊಲೀಸರು ಈ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಲಿಗೇಸಿ ಡ್ರೈವ್ ಬಳಿಯ ಕಾಲುವೆಯೊಂದರ ಬಳಿ ಬಿದಿದ್ದ ಮೃತದೇಹವನ್ನು ದಾರಿಹೋಕರು ಪತ್ತೆ ಹಚ್ಚಿದ್ದಾರೆ ಎಂದು ಡಬ್ಲ್ಯೂಎಫ್ ಎಎ. ಕಾಮ್ ವರದಿ ಮಾಡಿದೆ.

Indian-Origin Woman Researcher, Killed While Jogging In US

ಹತ್ಯೆ ಸಂದರ್ಭದಲ್ಲಿ ಮೈಕೇಲ್ ಡ್ರೈವ್ ನ 3400 ಬ್ಲಾಕ್ ನಲ್ಲಿ ಕೆಲವರು ಮನೆ ಮುರಿದಿರುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿರುವುದಾಗಿ ಪಾಕ್ಸ್ 4 ನ್ಯೂಸ್ ವರದಿ ಮಾಡಿದೆ.

ಸೇನ್ ಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಫಾರ್ಮಸಿಸ್ಟ್ ಮತ್ತು ಸಂಶೋಧಕರಾಗಿ ಕೆಲಸ ಮಾಡುತ್ತಿರುವುದಾಗಿ ಪಾಕ್ಸ್ 4 ನ್ಯೂಸ್ ವರದಿ ಮಾಡಿದೆ. ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮತ್ತೊಂದು ವೆಬ್ ಸೈಟ್ ತಿಳಿಸಿದೆ.

English summary
A 43-year-old Indian-origin woman researcher in the US was killed while she was out jogging and police have initiated a homicide investigation, according to media reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X