ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮಲಮಗಳನ್ನು ಕೊಂದ ಭಾರತೀಯ ಮೂಲದ ಮಹಿಳೆಗೆ ಜೀವಾವಧಿ ಜೈಲು ಶಿಕ್ಷೆ ಸಾಧ್ಯತೆ

|
Google Oneindia Kannada News

ನ್ಯೂಯಾರ್ಕ್ (ಅಮೆರಿಕ), ಮೇ 14: ಮೂರು ವರ್ಷಗಳ ಹಿಂದೆ ಒಂಬತ್ತು ವರ್ಷದ ಮಲಮಗಳನ್ನು ಕೊಂದಿದ್ದ ಆರೋಪದಲ್ಲಿ ಭಾರತೀಯ ಮೂಲದ ಮಹಿಳೆಯನ್ನು ದೋಷಿ ಎಂದು ಘೋಷಿಸಲಾಗಿದೆ. ಇದಕ್ಕೆ ಜೀವಾವಧಿ ಜೈಲು ಶಿಕ್ಷೆ ವಿಧಿಸಬಹುದು. ನ್ಯೂಯಾರ್ಕ್ ಕ್ವೀನ್ಸ್ ನ ಐವತ್ತೈದು ವರ್ಷದ ಶಾಮ್ ದಾಯ್ ಅರ್ಜುನ್ ಎಂಬಾಕೆಯನ್ನು ಕಳೆದ ಶುಕ್ರವಾರ ದೋಷಿ ಎಂದು ಘೋಷಿಸಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಜೂನ್ ಮೂರನೇ ತಾರೀಕು ಶಿಕ್ಷೆಯ ಪ್ರಮಾಣ ಘೋಷಿಸಲಾಗುತ್ತದೆ. ಆಕೆ ಇಪ್ಪತ್ತೈದು ವರ್ಷ ಜೈಲು ಶಿಕ್ಷೆ ಅನುಭವಿಸ ಬೇಕಾಗಬಹುದು. ಆಕೆಯ ಸುಪರ್ದಿಗೆ ಬಿಟ್ಟಿದ್ದ ಒಂಬತ್ತು ವರ್ಷದ ಆಶ್ ದೀಪ್ ಕೌರ್ ಎಂಬ ಒಂಬತ್ತು ವರ್ಷದ ಬಾಲಕಿಯನ್ನು ಕೊಲೆ ಮಾಡಿದ ಆರೋಪ ನಿಗದಿ ಅಗಿದೆ.

Indian origin woman facing life term jail in USA for murdering step daughter

ಮಲತಾಯಿ ನಿಗಾ ಮಾಡಲಿ ಎಂದು ಬಿಟ್ಟಿದ್ದ ಒಂಬತ್ತು ವರ್ಷದ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ತಪ್ಪಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನೇ ವಿಧಿಸಬೇಕು ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ. ಅಪಾರ್ಟ್ ಮೆಂಟ್ ನ ಸ್ನಾನದ ಕೋಣೆಯಲ್ಲಿ ಕೌರ್ ಳ ನಗ್ನ ದೇಹ ಪತ್ತೆಯಾಗಿತ್ತು. ಆಕೆಯ ಮೇಲೆ ದೈಹಿಕ ಹಲ್ಲೆ ಆಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿತ್ತು.

ನ್ಯೂಯಾರ್ಕ್ ನ ಕ್ವೀನ್ಸ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಆಶ್ ದೀಪ್ ಕೌರ್ ಶವವಾಗಿ ಪತ್ತೆಯಾಗುವ ಶಾಮ್ ದಾಯ್ ಅರ್ಜುನ್ ಅಪಾರ್ಟ್ ಮೆಂಟ್ ನಿಂದ ಹೊರಡುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದರು.

English summary
Shamdai Arjun, Indian origin 55 years old woman facing life term jail in USA for murdering step daughter. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X