ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೂಲದ ಮಕ್ಕಳ ತಜ್ಞನಿಂದ ಒತ್ತೆಯಾಳು ಇರಿಸಿಕೊಂಡು ವೈದ್ಯೆಯ ಹತ್ಯೆ, ಆತ್ಮಹತ್ಯೆ

|
Google Oneindia Kannada News

ಹ್ಯೂಸ್ಟನ್, ಜನವರಿ 28: ಅಂತಿಮ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭಾರತ ಮೂಲದ 43 ವರ್ಷದ ಮಕ್ಕಳ ತಜ್ಞರೊಬ್ಬರು ಮಹಿಳಾ ವೈದ್ಯರೊಬ್ಬರನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ.

ವ್ಯಕ್ತಿಯನ್ನು ಭಾರತ ಮೂಲದ ಡಾ. ಭರತ್ ನರುಮಂಚಿ ಎಂದು ಗುರುತಿಸಲಾಗಿದ್ದು, ಕೆಲವು ದಿನಗಳ ಹಿಂದಷ್ಟೇ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅದು ಅಂತಿಮ ಹಂತದ್ದಲ್ಲಿದ್ದು, ಗುಣಪಡಿಸಲು ಅಸಾಧ್ಯವಾಗಿತ್ತು. ರಾಜಧಾನಿ ಆಸ್ಟಿನ್‌ನಲ್ಲಿನ ವೈದ್ಯಕೀಯ ಕಚೇರಿಯೊಂದರಲ್ಲಿ ಘಟನೆ ನಡೆದಿದ್ದು, ವೈದ್ಯೆಯ ಹತ್ಯೆಗೂ ಮುನ್ನ ಭರತ್ ಅನೇಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.

18 ಮಹಿಳೆಯರ ಕೊಲೆ ಮಾಡಿದ್ದ ಸೀರಿಯಲ್ ಕಿಲ್ಲರ್ ಬಂಧನ; ಕೊಲೆಗೆ ಕಾರಣವೇನು?18 ಮಹಿಳೆಯರ ಕೊಲೆ ಮಾಡಿದ್ದ ಸೀರಿಯಲ್ ಕಿಲ್ಲರ್ ಬಂಧನ; ಕೊಲೆಗೆ ಕಾರಣವೇನು?

ಮಕ್ಕಳ ವೈದ್ಯಕೀಯ ಸಮೂಹದ ಕಚೇರಿಯಲ್ಲಿ ಗನ್ ಹಿಡಿದ ವ್ಯಕ್ತಿಯೊಬ್ಬ ಪ್ರವೇಶಿಸಿದ್ದು, ಕಟ್ಟಡದ ಒಳಗೆ ಅನೇಕರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದಾರೆ ಎಂದು ಮಂಗಳವಾರ ಪೊಲೀಸರಿಗೆ ಕರೆ ಬಂದಿತ್ತು. ಆರಂಭದಲ್ಲಿ ಹಲವಾರು ಒತ್ತೆಯಾಳುಗಳನ್ನು ಇರಿಸಿಕೊಳ್ಳಲಾಗಿತ್ತು. ಆದರೆ ಅವರಲ್ಲಿ ಕೆಲವರು ತಪ್ಪಿಸಿಕೊಂಡರೆ, ಇನ್ನು ಕೆಲವರಿಗೆ ಅಲ್ಲಿಂದ ಹೋಗಲು ಭರತ್ ಅವಕಾಶ ನೀಡಿದ್ದರು. ಆದರೆ ಕ್ಯಾಥರಿನ್ ಡೋಡ್ಸನ್ ಎಂಬ ಮಕ್ಕಳ ತಜ್ಞೆಯನ್ನು ಮಾತ್ರ ಬಿಟ್ಟಿರಲಿಲ್ಲ.

Indian Origin Pediatrician Shoots Doctor, Self After Taked Hostages In US

ಅಲ್ಲಿಂದ ತಪ್ಪಿಸಿಕೊಂಡಿದ್ದ ಒತ್ತೆಯಾಳುಗಳು, ವ್ಯಕ್ತಿಯ ಕೈಯಲ್ಲಿ ಪಿಸ್ತೂಲು ಇದ್ದು, ಜತೆಗೆ ಎರಡು ಚೀಲಗಳಿವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಘಟನೆಗೂ ಒಂದು ವಾರ ಮುನ್ನವಷ್ಟೇ ಕಚೇರಿಗೆ ಬಂದಿದ್ದ ಭರತ್, ಸ್ವಯಂಸೇವಕನ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದರ ಹೊರತಾಗಿ ಭರತ್ ಹಾಗೂ ವೈದ್ಯೆ ಕ್ಯಾಥರಿನ್‌ಗೆ ಯಾವ ಸಂಬಂಧವಿತ್ತು ಎನ್ನುವುದು ಪೊಲೀಸರಿಗೆ ಗೊತ್ತಾಗಿಲ್ಲ.

ಭರತ್ ಮನವೊಲಿಸಲು ಪೊಲೀಸರು ಅನೇಕ ರೀತಿ ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಸತತ ಪ್ರಯತ್ನದ ಬಳಿಕ ಕಟ್ಟಡದ ಒಳ ಪ್ರವೇಶಿಸಿದ ಪೊಲೀಸರಿಗೆ ಇಬ್ಬರೂ ಗುಂಡೇಟಿನಿಂದ ಸತ್ತಿರುವುದು ಕಂಡುಬಂದಿದೆ.

English summary
Indian orign pediatrician Bharat Narumanchi shot dead a lady doctor and killed himself after taking hostages in Texas, US. He was diagnosed with terminal cancer recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X