ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಮೂಲದ ಅಭಿಜಿತ್, ಪತ್ನಿಗೆ ಅರ್ಥಶಾಸ್ತ್ರದ ನೊಬೆಲ್ ಗೌರವ

|
Google Oneindia Kannada News

Recommended Video

Indian Origin Economist Abhijit Banerjee gets Nobel prize | Oneindia Kannada

ವಾಷಿಂಗ್ಟನ್, ಅಕ್ಟೋಬರ್ 14: ಅಮೆರಿಕದಲ್ಲಿ ವಾಸವಿರುವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ತ್ತು ಅವರ ಪತ್ನಿ ಈಸ್ಟರ್ ಡಲ್ಫೋ ಅವರಿಗೆ 2019 ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭ್ಯವಾಗಿದೆ.

ಅರ್ಥಶಾಸ್ತ್ರಜ್ಞ ಮೈಖೇಲ್ ಕ್ರೆಮರ್ ವರೊಂದಿಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಭಿಜಿತ್ ಬ್ಯಾನರ್ಜಿ ಹಂಚಿಕೊಂಡಿದ್ದಾರೆ.

ಇಥಿಯೋಪಿಯಾ ಪ್ರಧಾನಿಗೆ 2019ರ ನೊಬೆಲ್ ಶಾಂತಿ ಪುರಸ್ಕಾರಇಥಿಯೋಪಿಯಾ ಪ್ರಧಾನಿಗೆ 2019ರ ನೊಬೆಲ್ ಶಾಂತಿ ಪುರಸ್ಕಾರ

"ಜಾಗತಿಕ ಬಡತನ ನಿವಾರಿಸುವ" ಕುರಿತಂತೆ ಈ ಮೂವರು ಮಾಡಿದ ಸಂಶೋಧನೆಯನ್ನು ಮನಗಂಡು ಈ ಪ್ರಶಸ್ತಿ ನೀಡಲಾಗಿದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್ ಘೋಷಣೆ ಮಾಡಿದೆ.

Indian Origin Economist Abhijit Banerjee Got Nobel Award

ಕಳೆದ ಎರಡು ದಶಕಗಳಲ್ಲಿ ಅಭಿವೃದ್ಧಿ ಆರ್ಥಿಕತೆಗೆ ಸಂಬಂಧಿಸಿದಂತೆ ಇವರು ಮಾಡಿದ ಸಂಶೋಧನೆ ಮತ್ತು ಪ್ರಯೋಗಗಳು ಜಾಗತಿಕ ಬಡತನವನ್ನು ಹೋಗಲಾಡಿಸುವಲ್ಲಿ ನೆರವಾಗಿವೆ ಎಂಬ ಕಾರಣಕ್ಕೆ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

58 ವರ್ಷ ವಯಸ್ಸಿನ ಅಭಿಜಿತ್ ಬ್ಯಾನರ್ಜಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡುತ್ತಿದ್ದರು. ಅಮೆರಿಕದ ಮೆಸಾಚ್ಯುಯೇಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಅಭಿಜಿತ್ ಪಶ್ಚಿಮಬಂಗಾಳದ ಕೊಲ್ಕತ್ತಾ ಮೂಲದವರು.

ರಸಾಯನಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಕಟರಸಾಯನಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಕಟ

ಇನ್ನು ಇವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡ ಇಬ್ಬರಲ್ಲಿ ಒಬ್ಬರಾದ 47 ವರ್ಷ ವಯಸ್ಸಿನ ಇಸ್ಟರ್ ಡುಲ್ಫೋ ಅವರು ಬ್ಯಾನರ್ಜಿ ಅವರ ಪತ್ನಿಯಾಗಿದ್ದು, ಅವರ ಸಹೋದ್ಯೋಗಿಯಾಗಿದ್ದರು.

ಮೂವರು ವಿಜ್ಞಾನಿಗಳಿಗೆ ಶರೀರಶಾಸ್ತ್ರ ವಿಭಾಗದ ನೊಬೆಲ್ ಗೌರವಮೂವರು ವಿಜ್ಞಾನಿಗಳಿಗೆ ಶರೀರಶಾಸ್ತ್ರ ವಿಭಾಗದ ನೊಬೆಲ್ ಗೌರವ

ಪ್ರಶಸ್ತಿ ಪಡೆದ ಮೂವರಿಗೆ 9 ಮಿಲಿಯನ್ ಸ್ವೀಡಿಶಸ್ ಕ್ರೋನಾವನ್ನು ಸಮಾನವಾಗಿ ಹಂಚಲಾಗುತ್ತದೆ. 9 ಮಿಲಿಯನ್ ಸ್ವೀಡಿಶ್ ಕ್ರೋನಾ ಎಂದರೆ ಭಾರತೀಯ ರೂಪಾಯಿಯಲ್ಲಿ 6.5 ಕೋಟಿ ರೂ.

English summary
Indian Origin Economist Abhijit Banerjee And Wife Got Nobel Award
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X