ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಆರೋಗ್ಯ ಸಂಸ್ಥೆಯ ಸಿಇಒ ಆಗಿ ಭಾರತ ಮೂಲದ ಅನಿಲ್ ಸೋನಿ ನೇಮಕ

|
Google Oneindia Kannada News

ನ್ಯೂಯಾರ್ಕ್, ಡಿಸೆಂಬರ್ 08:ವಿಶ್ವ ಆರೋಗ್ಯ ಸಂಸ್ಥೆ(WHO)ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಭಾರತೀಯ ಮೂಲದ ಅನಿಲ್ ಸೋನಿ ನೇಮಕವಾಗಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಗೆ ಆರ್ಥಿಕ ದೇಣಿಗೆ ಹರಿದುಬರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೊಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನೂತನ ಸಿಇಒ ನೇಮಕವನ್ನು ವಿಶ್ವವ ಆರೋಗ್ಯ ಸಂಸ್ಥೆಯ ವರಿಷ್ಠ ಡಾ. ಟೆಡ್ರೋಸ್ ಅದಾನಮ್ಗೆಬ್ರಾಯಿಸಸ್, ಅನಿಲ್ ಸೋನಿ ಅವರ ನಾಯಕತ್ವ ವಿಶ್ವ ಆರೋಗ್ಯ ಸಂಸ್ಥೆ ಧ್ಯೇಯ ಹಾಗೂ ಅದನ್ನು ಅವಲಂಬಿಸಿರುವ ಕೋಟ್ಯಂತರ ಜನರಿಗೆ ಬೆಂಬಲವನ್ನು ನೀಡಲಿದೆ ಎಂದು ಹೇಳಿದ್ದಾರೆ.

Indian-Origin Anil Soni appointed first CEO Of The WHO Foundation, Know More About Him

ಅನಿಲ್ ಸೋನಿ ಮೊದಲು ಬಹುರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಸಂಸ್ಥೆ ವಿಯಾಟ್ರಿಸ್‌ನಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿದ್ದರು. ವಿಯಾಟ್ರಿಸ್‌ನಲ್ಲಿ ಅವರು ಜಾಗತಿಕ ಸಾಂಕ್ರಾಮಿಕ ರೋಗಗಳ ವಿಭಾಗದ ವರಿಷ್ಠರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ.

ಅವರು ಕ್ಲಿಂಟನ್ ಹೆಲ್ತ್‌ ಆಕ್ಸೆಸ್‌ನ ಸಿಇಓ ಆಗಿ 2005-2010ರವರೆಗೆ ಸೇವೆ ಸಲ್ಲಿಸಿದ್ದರು. ಖಾಸಗಿ ಮೂಲಗಳಿಂದ ಅಧಿಕ ಪ್ರಮಾಣದ ದೇಣಿಗೆ ತರುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಸೋನಿ ಅವರನ್ನು ನೇಮಕ ಮಾಡಿದೆ.

ಅನಿಲ್ ಸೋನಿ ನುರಿತ ಜಾಗತಿಕ ಆರೋಗ್ಯ ತಜ್ಞ ಎಂದು ಬಣ್ಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಕಡಿಮೆಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಲಾಭೋದ್ದೇಶವಿಲ್ಲದ ಆರೋಗ್ಯ ಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸೋನಿ ಸಾರ್ವಜನಿಕ, ಖಾಸಗಿ ಕ್ಷೇತ್ರದಲ್ಲಿಯೂ ಸುಮಾರು ಎರಡು ದಶಕಗಳ ಕಾಲ ಕಾರ್ಯ ನಿರ್ವಹಿಸಿರುವುದಾಗಿ ತಿಳಿಸಿದೆ.

ಜಾಗತಿಕವಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗೆ ಹೆಚ್ಚು ಒತ್ತು ನೀಡಿ ಪರಿಹರಿಸುವ ನಿಟ್ಟಿನಲ್ಲಿ 2020ರ ಮೇನಲ್ಲಿ ಜಿನೇವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಫೌಂಡೇಶನ್ ಮತ್ತು ಜಾಗತಿಕ ಆರೋಗ್ಯ ಸಮುದಾಯ ಜಂಟಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿತ್ತು ಎಂದು ಹೇಳಲಾಗಿದೆ.

English summary
Indian-origin global health expert Anil Soni has been appointed as the first Chief Executive Officer of the newly launched The WHO Foundation, which works alongside the World Health Organization to address most pressing health challenges across the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X