ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌1ಬಿ ವೀಸಾ ನೆಪದಲ್ಲಿ 21 ಮಿಲಿಯನ್ ಡಾಲರ್ ವಂಚನೆ: ಅಮೆರಿಕದಲ್ಲಿ ಭಾರತೀಯನ ಬಂಧನ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 22: ಎಚ್‌-1 ಬಿ ವೀಸಾ ವಂಚನೆಯಲ್ಲಿ ತೊಡಗಿದ್ದ ಆರೋಪದಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ವಿದೇಶಿ ನಾಗರಿಕರು ಅಮೆರಿಕಕ್ಕೆ ಬರಲು ಅನುಕೂಲವಾಗುವಂತೆ ನಕಲಿ ವೀಸಾಗಳನ್ನು ಒದಗಿಸುವ ಸಂಚು ನಡೆಸುತ್ತಿದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಮೆರಿಕದ ವಿಶೇಷ ಉದ್ಯೋಗ ವೀಸಾ ಎಚ್1ಬಿ ವೀಸಾ ಪಡೆದುಕೊಳ್ಳಲು ಮೋಸದ ಅರ್ಜಿಗಳನ್ನು ಸಲ್ಲಿಸಲು ನಾಲ್ಕು ಸಂಸ್ಥೆಗಳನ್ನು ಬಳಸಿಕೊಂಡಿದ್ದ ಆರೋಪ 48 ವರ್ಷದ ಆಶೀಶ್ ಸಾಹ್ವ್ನೆ ಮೇಲಿದೆ. ಎರಡು ಪ್ರಮಾಣದ ವಂಚನೆ, ಹೊರ ದೇಶದವರು ಅಮೆರಿಕಕ್ಕೆ ಬಂದು ವಾಣಿಜ್ಯ ಲಾಭ ಅಥವಾ ಖಾಸಗಿ ಹಣಕಾಸು ಗಳಿಕೆಗಾಗಿ ನೆಲೆಸುವಂತೆ ಮಾಡಿದ್ದಕ್ಕಾಗಿ ಮೂರು ಪ್ರಮಾಣದ ಹಾಗೂ ಅಮೆರಿಕದ ಪ್ರಜೆ ಎಂದು ಸುಳ್ಳು ದಾಖಲೆಗಳನ್ನು ನೀಡಿದ ವಂಚನೆ ಆರೋಪದ ಒಂದು ಪ್ರಮಾಣದ ಆರೋಪ ಹೊರಿಸಲಾಗಿದೆ.

ಎಚ್‌-1ಬಿ ವೀಸಾ ಬಳಕೆದಾರರಿಗೆ ನಿಯಮ ಸಡಿಲಿಸಿದ ಟ್ರಂಪ್ ಸರ್ಕಾರಎಚ್‌-1ಬಿ ವೀಸಾ ಬಳಕೆದಾರರಿಗೆ ನಿಯಮ ಸಡಿಲಿಸಿದ ಟ್ರಂಪ್ ಸರ್ಕಾರ

2011 ರಿಂದ 2016ರ ಅವಧಿಯಲ್ಲಿ ಆಶೀಶ್ ಇಂತಹ ವಂಚನೆಯ ಚಟುವಟಿಕೆಗಳಿಂದಲೇ 21 ಮಿಲಿಯನ್ ಡಾಲರ್ ಲಾಭ ಸಂಪಾದನೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಇದು ಸಾಬೀತಾಗಿ ಶಿಕ್ಷೆ ಪ್ರಕಟವಾದರೆ, ಆತನನ್ನು ಗರಿಷ್ಠ 10 ವರ್ಷಗಳ ಸೆರೆವಾಸ ವಿಧಿಸಬಹುದಾಗಿದೆ.

Indian National Arrested In USA In $21 Million H1B Visa Fraud Case

ವಾಷಿಂಗ್ಟನ್ ಡಿಸಿಯ ವರ್ಜೀನಿಯಾ ಉಪನಗರದ ಸ್ಟೆರ್ಲಿಂಗ್‌ನಲ್ಲಿ ವಾಸಿಸುತ್ತಿದ್ದ ಆಶೀಶ್, ವಿದೇಶಿಗರು ಅಮೆರಿಕ ಪ್ರವೇಶಿಸಲು ಅವರಿಗೆ ಉದ್ಯೋಗ ಇಲ್ಲದಿದ್ದರೂ ಎಚ್‌1ಬಿ ವೀಸಾ ಪಡೆಯಲು ಸಾಧ್ಯವಾಗುವಂತೆ ನಕಲಿ ದಾಖಲೆಗಳನ್ನು ಒದಗಿಸುತ್ತಿದ್ದ ಮತ್ತು ಸುಳ್ಳು ಮಾಹಿತಿಗಳನ್ನು ನೀಡಿ ಅಮೆರಿಕದ ಪ್ರಜೆ ಎಂದು ಬಿಂಬಿಸಿಕೊಳ್ಳಲು ಸಹ ಪ್ರಯತ್ನಿಸಿದ್ದ.

English summary
An Indian national named Ashish Sawhney has been arrested for H1B Visa fraud of $21 million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X