ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲ ಝಳ ತಾಳಲಾರದೆ ಅಮೆರಿಕ ಮರುಭೂಮಿಯಲ್ಲಿ ಭಾರತೀಯ ಮಗುವಿನ ಸಾವು

|
Google Oneindia Kannada News

ವಾಷಿಂಗ್ಟನ್, ಜೂನ್ 15: ಬಿಸಿಳ ಝಳ ತಾಳಲಾರದೆ ಭಾರತೀಯ ಮಗುವೊಂದು ಅಮೆರಿಕದ ಮರುಭೂಮಿಯಲ್ಲಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

ನಾಳೆ ಮಗಳ ಹುಟ್ಟು ಹಬ್ಬ! ಇಂದು ತಂದೆ-ಮಗುವಿನ ಭೀಕರ ಸಾವು ನಾಳೆ ಮಗಳ ಹುಟ್ಟು ಹಬ್ಬ! ಇಂದು ತಂದೆ-ಮಗುವಿನ ಭೀಕರ ಸಾವು

ಮೆಕ್ಸಿಕೋ ಮೂಲಕ ಅಮೆರಿಕಕ್ಕೆ ಒಲಸೆ ಹೋಗಿದ್ದ ಭಾರತೀಯ ಮಹಿಳೆಯೊಬ್ಬರು ಮರುಭೂಮಿಯ ಮೂಲಕ ತಮ್ಮ ಆರು ವರ್ಷದ ಮಗಳು ಗುರುಪ್ರೀತ್ ಕೌರ್ ಳನ್ನು ಕರೆದೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಪುಟ್ಟ ಹುಡುಗಿ ಕೌರ್ ನೀರಿಗಾಗಿ ಪರಿತಪಿಸಿದಳು. ಜೊತೆಗಿದ್ದ ಮಹಿಳೆಯ ಬಳಿ ಕೌರ್ ಳನ್ನು ಬಿಟ್ಟು ಆಕೆಯ ತಾಯಿ ನೀರು ಹುಡುಕುತ್ತ ಹೋಗಿದ್ದಾರೆ. ಆದರೆ ಎಲ್ಲೂ ನೀರು ಸಿಗದೆ ಆಕೆ ವಾಪಸ್ ಬರುವ ಹೊತ್ತಿಗೆ ಕೌರ್ ಬಾಯಾರಿಕೆ ಮತ್ತು ಬಿಸಿಲ ಝಳ ತಾಳಲಾರದೆ ಮೃತಳಾಗಿದ್ದಾಳೆ. ಕೌರ್ ಶನಿವಾರ ತನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಿತ್ತು! ಆದರೆ ಅದಕ್ಕೂ ಒಂದು ದಿನ ಮೊದಲು ಇಹಲೋಕ ತ್ಯಜಿಸಿದ್ದಾಳೆ.

Indian migrant girl dies in US due to heat stroke

ಅಮೆರಿಕ-ಮೆಕ್ಸಿಕೋ ಗಡಿಯ ಮೂಲಕ ಹಲವು ವಲಸಿಗರು ಅಮೇರಿಕಕ್ಕೆ ತೆರಳುವುದು ಸಾಮಾನ್ಯವಾಗಿದ್ದು, ಅದರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿದೆ. ಕೆಲವು ಕಳ್ಳಸಾಗಣೆಗಾರರು ವಲಸಿಗರನ್ನು ತಂದು ಮೆಕ್ಸಿಕೋ-ಅಮೆರಿಕ ಗಡಿಯಲ್ಲಿ ಬಿಟ್ಟು ಹೋಗುತ್ತಿದ್ದು, ಹಾಗೆಯೇ ಕೌರ್, ಆಕೆಯ ತಾಯಿ ಮತ್ತಿತರ ಐದು ಜನ ಮರುಭೂಮಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು ಎನ್ನಲಾಗಿದೆ.

English summary
Gurupreet Kaur, an Indian migrant girl died in a desert in US due to heat stroke.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X